ಮೊಬೈಲ್ ಬಳಕೆದಾರರೇ ಎಚ್ಚರ: ಈ 8 ಆ್ಯಪ್ಗಳನ್ನು ತಕ್ಷಣವೇ ಡಿಲೀಟ್ ಮಾಡಿ
Google Play store: ಇವೆಲ್ಲವೂ ನಕಲಿ ಕ್ರಿಪ್ಟೋಕರೆನ್ಸಿ ಆ್ಯಪ್ಗಳಾಗಿದ್ದು, ಇದರ ಜೊತೆ ಇನ್ನೂ 120 ನಕಲಿ ಕ್ರಿಪ್ಟೋಕರೆನ್ಸಿ ಅಪ್ಲಿಕೇಶನ್ಗಳು ಆನ್ಲೈನ್ನಲ್ಲಿ ಲಭ್ಯವಿದೆ.
ಸ್ಮಾರ್ಟ್ಫೋನ್ಗಳನ್ನು (Smartphones) ಕೇಂದ್ರೀಕರಿಸಿ ಡೇಟಾ (Data) ಕಲೆಹಾಕುವ ಹ್ಯಾಕರುಗಳ (Hackers) ಕೈಚಳಕ ಮುಂದುವರೆದಿದೆ. ಇದೀಗ ಅದಕ್ಕೆ ಹೊಸ ತಂತ್ರ ಹಾಗೂ ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದಾರೆ. ಹೌದು, ಇದೀಗ ಆನ್ಲೈನ್ ಕಳ್ಳರು ಕ್ರಿಪ್ಟೋಕರೆನ್ಸಿ ಆ್ಯಪ್ಗಳ ಮೂಲಕ ಗ್ರಾಹಕರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಾರೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಹಲವು ಕ್ರಿಪ್ಟೋಕರೆನ್ಸಿ ಅಪ್ಲಿಕೇಶನ್ಗಳನ್ನು ಹ್ಯಾಕರುಗಳು ಪರಿಚಯಿಸಿದ್ದು, ಅಂತಹ ಆ್ಯಪ್ಗಳ ಮೂಲಕ ಸ್ಮಾರ್ಟ್ಫೋನ್ ಬಳಕೆದಾರರ ಮೊಬೈಲ್ನಲ್ಲಿ ಮಾಲ್ವೇರ್ಗಳನ್ನು ಸ್ಥಾಪಿಸುತ್ತಿದ್ದಾರೆ.
ಸೇಫ್ಟಿ ಫಾರ್ಮ್ ಟ್ರೆಂಡ್ ಮೈಕ್ರೋ ವರದಿಯ ಪ್ರಕಾರ, ಗೂಗಲ್ ಪ್ಲೇ ಸ್ಟೋರ್ನಲ್ಲಿ ಮಾಲ್ವೇರ್ ಹೊಂದಿರುವ 8 ಅಪಾಯಕಾರಿ 8 ಆ್ಯಪ್ಗಳು ಕಂಡು ಬಂದಿದೆ. ಈ ಆ್ಯಪ್ಗಳು ಜಾಹೀರಾತುಗಳನ್ನು ನೀಡಿ ಬಳಕೆದಾರರನ್ನು ಮೋಸಗೊಳಿಸುತ್ತಿವೆ. ಪ್ರತಿ ತಿಂಗಳ ಸಂಪಾದನೆ ಎಂಬಂತಹ ಜಾಹೀರಾತುಗಳನ್ನು ಪ್ರಸ್ತುತ ಪಡಿಸಿ ಗ್ರಾಹಕರಿಂದ ಮೊದಲ ಕಂತನ್ನು ಪಡೆದುಕೊಳ್ಳುತ್ತವೆ. ಆದರೆ ಆ ಬಳಿಕ ಯಾವುದೇ ಮಾಹಿತಿ ಇರುವುದಿಲ್ಲ. ಅತ್ತ ನೀವು ಮೊಬೈಲ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಿದ್ದರೆ ಹ್ಯಾಕರುಗಳು ಅದರ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿರುತ್ತಾರೆ. ಈ ಮೂಲಕ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುವ ಹೊಸ ತಂತ್ರವನ್ನು ಹ್ಯಾಕರುಗಳು ಕಂಡುಕೊಂಡಿದ್ದಾರೆ.
ಇದೀಗ 8 ಆ್ಯಪ್ಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಗೂಗಲ್ ಪ್ಲೇಸ್ಟೋರ್ ಅವುಗಳನ್ನು ಡಿಲೀಟ್ ಮಾಡಿವೆ. ಇನ್ನು ಈಗಾಗಲೇ ಅದನ್ನು ಡೌನ್ಲೋಡ್ ಮಾಡಿರುವ ಬಳಕೆದಾರರು ತಕ್ಷಣವೇ ಡಿಲೀಟ್ ಮಾಡುವಂತೆ ಕೇಳಿಕೊಂಡಿದೆ. ಅದರಂತೆ ನೀವು ಜಾಗರೂಕರಾಗಿರಬೇಕಾದ 8 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿ ಹೀಗಿದೆ.
— BitFunds – Crypto Cloud Mining. — Bitcoin Miner – Cloud Mining. — Bitcoin (BTC) – Pool Mining Cloud Wallet. — Crypto Holic – Bitcoin Cloud Mining. — Daily Bitcoin Rewards – Cloud Based Mining System. — Bitcoin 2021. — MineBit Pro – Crypto Cloud Mining & btc miner. — Ethereum (ETH) – Pool Mining Cloud.
ಇವೆಲ್ಲವೂ ನಕಲಿ ಕ್ರಿಪ್ಟೋಕರೆನ್ಸಿ ಆ್ಯಪ್ಗಳಾಗಿದ್ದು, ಇದರ ಜೊತೆ ಇನ್ನೂ 120 ನಕಲಿ ಕ್ರಿಪ್ಟೋಕರೆನ್ಸಿ ಅಪ್ಲಿಕೇಶನ್ಗಳು ಆನ್ಲೈನ್ನಲ್ಲಿ ಲಭ್ಯವಿದೆ. ಅಷ್ಟೇ ಅಲ್ಲದೆ ಇಂತಹ ಫೇಕ್ ಆ್ಯಪ್ಗಳ ಮೂಲಕ ಇದುವರೆಗೆ ಸುಮಾರು 4,500 ಕ್ಕೂ ಹೆಚ್ಚು ಬಳಕೆದಾರರನ್ನು ಮೋಸಗೊಳಿಸಲಾಗಿದೆ ಎಂದು ಸೇಫ್ಟಿ ಫಾರ್ಮ್ ಟ್ರೆಂಡ್ ಮೈಕ್ರೋ ಎಚ್ಚರಿಸಿದೆ.
ಇದನ್ನೂ ಓದಿ: Steve Smith: ಅಫ್ಘಾನಿಸ್ತಾನದ ಮಕ್ಕಳ ರಕ್ಷಣೆಗೆ ಮುಂದಾದ ಸ್ಟೀವ್ ಸ್ಮಿತ್! ಏನಿದರ ಅಸಲಿಯತ್ತು?
ಇದನ್ನೂ ಓದಿ: IPL 2021: RCB ತಂಡಕ್ಕೆ ಇಂಗ್ಲೆಂಡ್ನ ಎಡಗೈ ವೇಗಿ..?
ಇದನ್ನೂ ಓದಿ: IPL 2021: CSK ತಂಡಕ್ಕೆ ಆಸ್ಟ್ರೇಲಿಯಾ ವೇಗಿ ರಿಎಂಟ್ರಿ..!
(Google removes these 8 dangerous apps from Play store)