Vivo Y33s: 50MP ಕ್ಯಾಮೆರಾ, ಫಾಸ್ಟ್ ಚಾರ್ಜಿಂಗ್: ಬಜೆಟ್ ಬೆಲೆಗೆ ವಿವೋ Y33s ಸ್ಮಾರ್ಟ್​ಫೋನ್ ರಿಲೀಸ್

ಕೇವಲ ಒಂದು ಮಾದರಿಯಲ್ಲಷ್ಟೆ ಸದ್ಯಕ್ಕೆ Vivo Y33s ರಿಲೀಸ್ ಆಗಿದ್ದು, 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಫೋನಿನ ಬೆಲೆ 17,990 ರೂ. ಆಗಿದೆ.

Vivo Y33s: 50MP ಕ್ಯಾಮೆರಾ, ಫಾಸ್ಟ್ ಚಾರ್ಜಿಂಗ್: ಬಜೆಟ್ ಬೆಲೆಗೆ ವಿವೋ Y33s ಸ್ಮಾರ್ಟ್​ಫೋನ್ ರಿಲೀಸ್
Vivo Y33s
Follow us
TV9 Web
| Updated By: Vinay Bhat

Updated on: Aug 23, 2021 | 3:22 PM

ಚೀನಾ ಮೂಲದ ವಿವೋ (Vivo) ಕಂಪನಿಯು ಮೂರು ದಿನಗಳ ಹಿಂದೆಯಷ್ಟೆ ವಿವೋ Y21 ಸ್ಮಾರ್ಟ್​ಫೋನನ್ನು ಲಾಂಚ್ ಮಾಡಿತ್ತು. ಸದ್ಯ ಇದರ ಬೆನ್ನಲ್ಲೆ ಸೋಮವಾರ ಮತ್ತೊಂದು ಬಜೆಟ್‌ ಬೆಲೆಯ ವಿವೋ ವೈY33ಎಸ್ (Vivo Y33s) ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. 50 ಮೆಗಾಫಿಕ್ಸೆಲ್​ ಕ್ಯಾಮೆರಾ, ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಆಕರ್ಷಕ ಫೀಚರ್​ಗಳುಳ್ಳ ವಿವೋ Y33s ಸ್ಮಾರ್ಟ್‌ಫೋನ್ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ.

ಕೇವಲ ಒಂದು ಮಾದರಿಯಲ್ಲಷ್ಟೆ ಸದ್ಯಕ್ಕೆ ಈ ಫೋನ್ ರಿಲೀಸ್ ಆಗಿದ್ದು, 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಫೋನಿನ ಬೆಲೆ 17,990 ರೂ. ಆಗಿದೆ. ಪ್ರಸಿದ್ಧ ಇ ಕಾಮರ್ಸ್ ತಾನವಾದ ಅಮೆಜಾನ್, ಫ್ಲಿಪ್​ಕಾರ್ಟ್, ಪೇಟಿಎಮ್ ಸೇರಿದಂತೆ ವಿವೋ ಇಂಡಿಯಾ.ಕಾಮ್​ನಲ್ಲಿ ಖರೀದಿಗೆ ಸಿಗುತ್ತದೆ. ಹೆಚ್​ಡಿಎಫ್​ಸಿ ಮತ್ತು ಐಸಿಐಸಿಐ ಬ್ಯಾಂಕುದಾರರಿಗೆ 1500 ರೂ. ಡಿಸ್ಕೌಂಟ್​ನಲ್ಲಿ ವಿವೋ Y33s ದೊರೆಯುತ್ತದೆ.

ಏನು ವಿಶೇಷತೆ?:

ವಿವೋ Y33s ಸ್ಮಾರ್ಟ್‌ಫೋನ್ 2,408×1,080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G80 SoC ಪ್ರೊಸೆಸರ್‌ ಅನ್ನು ಅಳವಡಿಸಲಾಗಿದ್ದು, ಇದಕ್ಕೆ ಬೆಂಬಲವಾಗಿ ಫನ್‌ಟಚ್ ಆಂಡ್ರಾಯ್ಡ್ 11 ಓಎಸ್‌ ಸಪೋರ್ಟ್‌ ಇದೆ.

ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಎಂಪಿ ಸೆನ್ಸಾರ್ ಇರಲಿದೆ. ಸೆಕೆಂಡರಿ ಕ್ಯಾಮೆರಾವು 2 ಎಂಪಿ ಸೆನ್ಸಾರ್‌ನಲ್ಲಿರಲಿದ್ದು, ತೃತೀಯ ಕ್ಯಾಮೆರಾವು 2 ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇದರೊಂದಿಗೆ 16 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ಒಳಗೊಂಡಿರುತ್ತದೆ.

ಇನ್ನೂ 5,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿರಲಿದ್ದು, ಅದಕ್ಕೆ ಪೂರಕವಾಗಿ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಇರಲಿದೆ. ಜೊತೆಗೆ 4G LTE, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ v5 ಮತ್ತು USB OTG ಸೇರಿದಂತೆ ಇತ್ತೀಚೆಗಿನ ಪ್ರಮುಖ ಆಯ್ಕೆ ನೀಡಲಾಗಿದೆ.

Realme C21Y: 5000mAh ಬ್ಯಾಟರಿ, ತ್ರಿವಳಿ ಕ್ಯಾಮೆರಾ: ಕೇವಲ 8,999 ರೂ. ಗೆ ರಿಯಲ್ ಮಿಯಿಂದ ಹೊಸ ಸ್ಮಾರ್ಟ್​ಫೋನ್

ಭಾರತದಲ್ಲಿ ರಿಲೀಸ್ ಆಗಿದ್ದರೂ ಖರೀದಿಗೆ ಸಿಗುತ್ತಿಲ್ಲ ಮೋಟೋ ಎಡ್ಜ್ 20 ಸರಣಿ: ಕಾರಣ ತಿಳಿಸಿದ ಕಂಪೆನಿ

(Vivo Y33s with 50-megapixel triple camera Faast Charging launched in India just Rs 17990)