ಭಾರತದಲ್ಲಿ ರಿಲೀಸ್ ಆಗಿದ್ದರೂ ಖರೀದಿಗೆ ಸಿಗುತ್ತಿಲ್ಲ ಮೋಟೋ ಎಡ್ಜ್ 20 ಸರಣಿ: ಕಾರಣ ತಿಳಿಸಿದ ಕಂಪೆನಿ

Motorola Edge 20: ಕಂಪೆನಿ ಬೇಸರದ ಸುದ್ದಿ ಹೊರಹಾಕಿದ್ದು, ಅನಿಶ್ಚಿತ ಪರಿಸ್ಥಿತಿಯಿಂದ ಮೋಟೋ ಎಡ್ಜ್ 20 ಸರಣಿ ಸ್ಮಾರ್ಟ್​ಫೋನ್ ಆಗಸ್ಟ್ 27 ರಿಂದ ಖರೀದಿಗೆ ಸಿಗುತ್ತಿಲ್ಲ ಎಂದು ಹೇಳಿದೆ.

ಭಾರತದಲ್ಲಿ ರಿಲೀಸ್ ಆಗಿದ್ದರೂ ಖರೀದಿಗೆ ಸಿಗುತ್ತಿಲ್ಲ ಮೋಟೋ ಎಡ್ಜ್ 20 ಸರಣಿ: ಕಾರಣ ತಿಳಿಸಿದ ಕಂಪೆನಿ
Motorola Edge 20
Follow us
TV9 Web
| Updated By: Vinay Bhat

Updated on: Aug 23, 2021 | 1:31 PM

ಲೆನೊವಾ ಒಡೆತನದ ಮೋಟೋರೊಲಾ (Motorola) ಕಂಪೆನಿ ಕಳೆದ ವಾರ ಭಾರತದಲ್ಲಿ ತನ್ನ ಎಡ್ಜ್ ಸರಣಿಯಲ್ಲಿ ಮೋಟೋ ಎಡ್ಜ್ 20 ಮತ್ತು ಮೋಟೋ ಎಡ್ಜ್ 20 ಫ್ಯೂಷನ್ (Motorola Edge 20, Edge 20 Fusion) ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಎರಡೂ ಸ್ಮಾರ್ಟ್​ಫೋನ್ ಆಕರ್ಷಕ 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ ಮತ್ತು ಮೀಡಿಯಾ ಟೆಕ್ ಪ್ರೊಸೆಸರ್​ನಿಂದ ಕೂಡಿದೆ. ಆದರೆ, ಈ ಫೋನ್ ರಿಲೀಸ್ ಆಗಿದ್ದು ಬಿಟ್ಟರೆ ಖರೀದಿಗೆ ಸಿಗುತ್ತಿಲ್ಲ. ಇದಕ್ಕೆ ಕಂಪೆನಿ ಕಾರಣವನ್ನು ತಿಳಿಸಿದೆ.

ಮೋಟೋ ಎಡ್ಜ್ 20 ಮತ್ತು ಮೋಟೋ ಎಡ್ಜ್ 20 ಫ್ಯೂಷನ್ ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್ 17 ರಂದು ಬಿಡುಗಡೆ ಆಗಿತ್ತು. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್​ನಲ್ಲಿ ಈ ಎರಡೂ ಸ್ಮಾರ್ಟ್​ಫೋನ್​ಗಳು ಆಗಸ್ಟ್ 27 ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿತ್ತು. ಅಲ್ಲದೆ ಆಗಸ್ಟ್ 24 ರಿಂದ ಪ್ರೀ ಬುಕ್ಕಿಂಗ್ ಮಾಡಬಹುದು ಎಂದು ಹೇಳಿತ್ತು.

ಆದರೆ, ಸದ್ಯ ಕಂಪೆನಿ ಬೇಸರದ ಸುದ್ದಿ ಹೊರಹಾಕಿದ್ದು, ಅನಿಶ್ಚಿತ ಪರಿಸ್ಥಿತಿಯಿಂದ ಮೋಟೋ ಎಡ್ಜ್ 20 ಸರಣಿ ಸ್ಮಾರ್ಟ್​ಫೋನ್ ಆಗಸ್ಟ್ 27 ರಿಂದ ಖರೀದಿಗೆ ಸಿಗುತ್ತಿಲ್ಲ ಎಂದು ಹೇಳಿದೆ. ಆದರೆ, ಪ್ರೀ ಆರ್ಡರ್ ಆಗಸ್ಟ್ 24 ರಿಂದ ಮಾಡಬಹುದು ಎಂದಿದ್ದು ಖರೀದಿಗೆ ಸಿಗುವ ದಿನಾಂಕವನ್ನು ಆದಷ್ಟು ಬೇಗ ಪ್ರಕಟಿಸುವುದಾಗಿ ತಿಳಿಸಿದೆ.

ಮೋಟೋ ಮೋಟೋ ಎಡ್ಜ್ 20 ಫ್ಯೂಷನ್ ಎರಡು ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ ಪ್ರಕಾರ 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯದ ಬೆಲೆ 21,499 ರೂ. ಇರಲಿದೆ. 8GB RAM ಮತ್ತು 128GB ಸ್ಟೋರೆಜ್​ಗೆ 22,999 ರೂ. ನಿಗದಿ ಮಾಡಲಾಗಿದೆ. ಇನ್ನೂ ಮೋಟೋ ಎಡ್ಜ್ 20 ಕೇವಲ ಒಂದು ಆಯ್ಕೆಯಲ್ಲಿ ಮಾರಾಟ ಕಾಣಲಿದೆ. ಇದರ 8GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯಕ್ಕೆ 29,999 ರೂ. ಇರಲಿದೆ.

ಮೋಟೋ ಎಡ್ಜ್ 20 ವಿಶೇಷತೆ?:

ಮೋಟೋ ಎಡ್ಜ್ 20 ಸ್ಮಾರ್ಟ್‌ಫೋನ್ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 778G ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಹೊಂದಿದೆ. ಇನ್ನು ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದ್ದು, ಕ್ರಮವಾಗಿ 108 ಮೆಗಾಫಿಕ್ಸೆಲ್ + 16ಎಂಪಿ + 8ಎಂಪಿ ಸೆನ್ಸಾರ್‌ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಜೊತೆಗೆ 4000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದ್ದು, 30W ಟರ್ಬೊಪವರ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.

ಮೋಟೋ ಎಡ್ಜ್ 20 ಫ್ಯೂಷನ್ ವಿಶೇಷತೆ?:

ಮೋಟೋ ಎಡ್ಜ್ 20 ಫ್ಯೂಷನ್ ಸ್ಮಾರ್ಟ್‌ಫೋನ್ 6.67 ಇಂಚಿನ ಪೂರ್ಣ OLED ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ Dimensity 800U ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಹೊಂದಿದೆ. ಈ ಫೋನ್​ಗೆ ಟ್ರಿಪಲ್ ಕ್ಯಾಮೆರಾ ರಚನೆ ನೀಡಲಾಗಿದ್ದು, ಕ್ರಮವಾಗಿ 108 ಮೆಗಾ ಫಿಕ್ಸೆಲ್ + 8ಎಂಪಿ + 2ಎಂಪಿ ಸೆನ್ಸಾರ್‌ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಜೊತೆಗೆ 5000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದ್ದು, 30W ಫಾಸ್ಟ್‌ ಚಾರ್ಜಿಂಗ್ ಬೆಂಬಲದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

Mi 11T Pro: ಸ್ನಾಪ್ಡ್ರಾಗನ್ 888, 120W ಫಾಸ್ಟ್ ಚಾರ್ಜ್​: ಶವೋಮಿಯಿಂದ ಹೊಸ ಪವರ್​ಫುಲ್ ಸ್ಮಾರ್ಟ್​ಫೋನ್!

Amazon: ಈ ಐದು ಪ್ರಶ್ನೆಗಳಿಗೆ ಉತ್ತರಿಸಿದ್ರೆ ಸಿಗುತ್ತೆ 25 ಸಾವಿರ ರೂ.

(Motorola Edge 20 sale has been deferred in India due to unforeseen circumstances)

Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ