AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mi 11T Pro: ಸ್ನಾಪ್ಡ್ರಾಗನ್ 888, 120W ಫಾಸ್ಟ್ ಚಾರ್ಜ್​: ಶವೋಮಿಯಿಂದ ಹೊಸ ಪವರ್​ಫುಲ್ ಸ್ಮಾರ್ಟ್​ಫೋನ್!

Mi 11T and Mi 11T Pro: ಸದ್ಯ ಎಂಐ 11ಟಿ ಮತ್ತು 11ಟಿ ಪ್ರೊ ಸ್ಮಾರ್ಟ್​ಫೋನ್ ಬಗ್ಗೆ ಕೆಲವು ಮಾಹಿತಿ ಹೊರಬಿದ್ದಿದ್ದು, ಇದು 120Hz ನ AMOLED ಪ್ಯಾನೆಲ್​ನೊಂದಿಗೆ ಬರಲಿದೆಯಂತೆ. ಎಂಐ 11ಟಿ ಪ್ರೊ 144Hz ರಿಫ್ರೆಶ್ ರೇಟ್ ಹೊಂದಿರಲಿದೆ ಎನ್ನಲಾಗಿದೆ.

Mi 11T Pro: ಸ್ನಾಪ್ಡ್ರಾಗನ್ 888, 120W ಫಾಸ್ಟ್ ಚಾರ್ಜ್​: ಶವೋಮಿಯಿಂದ ಹೊಸ ಪವರ್​ಫುಲ್ ಸ್ಮಾರ್ಟ್​ಫೋನ್!
Mi 11T Pro
TV9 Web
| Updated By: Vinay Bhat|

Updated on: Aug 23, 2021 | 12:42 PM

Share

ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಕಂಪೆನಿ ಇತ್ತೀಚೆಗಷ್ಟೆ ಸ್ಯಾಮ್​ಸಂಗ್ (Samsung), ಆ್ಯಪಲ್ (Apple) ಅನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಆಗಿ ಹೊರಹೊಮ್ಮಿತು. ಹೊಸ ಹೊಸ ಪ್ರಯೋಗ ನಡೆಸಿ ಫೋನನ್ನು ಬಿಡುಗಡೆ ಮಾಡುವ ಶವೋಮಿ ಇತ್ತೀಚೆಗಷ್ಟೆ ಅಂಡರ್ ಡಿಸ್​ ಪ್ಲೇ ಸೆಲ್ಫೀ ಕ್ಯಾಮೆರಾ ಇರುವ ಎಂಐ ಮಿಕ್ಸ್ 4 ಸ್ಮಾರ್ಟ್​ಫೋನನ್ನು ಪರಿಚಯಿಸಿತ್ತು. ಸದ್ಯ ಶವೋಮಿ ಮುಂದಿನ ತಿಂಗಳು ಮತ್ತೊಂದು ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.

ಶವೋಮಿ ಕಂಪೆನಿ ತನ್ನ ಸಬ್​ಬ್ರ್ಯಾಂಡ್ ಎಂಐ ಅಡಿಯಲ್ಲಿ ಕಳೆದ ವರ್ಷ ಎಂಐ 10 ಸರಣಿಯ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿ ಭರ್ಜರಿ ಯಶಸ್ಸು ಕಂಡಿತ್ತು. ಇದರ ಬೆನ್ನಲ್ಲೆ ಎಂಐ 11ಟಿ ಸರಣಿಯ ಫೋನನ್ನು ರಿಲೀಸ್ ಮಾಡಿ ಉತ್ತಮ ವಿಮರ್ಶೆ ಪಡೆದುಕೊಂಡಿದೆ. ಸದ್ಯ ಇದರ ಮುಂದುವರೆದ ಭಾಗವಾಗಿ ಎಂಐ 11ಟಿ ಮತ್ತು 11ಟಿ ಪ್ರೊ ಸ್ಮಾರ್ಟ್​ಫೋನನ್ನು ಲಾಂಚ್ ಮಾಡಲು ತಯಾರು ಮಾಡಿದೆ. ಮುಂದಿನ ತಿಂಗಳು ಸೆಪ್ಟೆಂಬರ್ 23 ರಂದು ಈ ಫೋನ್ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸದ್ಯ ಎಂಐ 11ಟಿ ಮತ್ತು 11ಟಿ ಪ್ರೊ ಸ್ಮಾರ್ಟ್​ಫೋನ್ ಬಗ್ಗೆ ಕೆಲವು ಮಾಹಿತಿ ಹೊರಬಿದ್ದಿದ್ದು, ಇದು 120Hz ನ AMOLED ಪ್ಯಾನೆಲ್​ನೊಂದಿಗೆ ಬರಲಿದೆಯಂತೆ. ಎಂಐ 11ಟಿ ಪ್ರೊ 144Hz ರಿಫ್ರೆಶ್ ರೇಟ್ ಹೊಂದಿರಲಿದೆ ಎನ್ನಲಾಗಿದೆ.

ವಿಶೇಷ ಎಂದರೆ ಇದು ಕ್ವಾಲ್ಕಂ ಸ್ನಾಪ್ಡ್ರಾಗನ್ 888 ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ. 64 ಮೆಗಾಫಿಕ್ಸೆಲ್​ನ ಮುಖ್ಯ ಕ್ಯಾಮೆರಾ ಜೊತೆ 8 ಮೆಗಾಫಿಕ್ಸೆಲ್​ನ ಆಲ್ಟ್ರಾ ವೈಡ್ ಮತ್ತು 5 ಮೆಗಾಫಿಕ್ಸೆಲ್​ ಮ್ಯಾಕ್ರೊ ಸೆನ್ಸಾನ್ ಕ್ಯಾಮೆರಾ ಅಳವಡಿಸಲಾಗಿದೆಯಂತೆ.

ಎಂಐ 11ಟಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 1200 SoC ಪ್ರೊಸೆಸರ್ ನೀಡಲಾಗಿದ್ದು, 64 ಮೆಗಾಫಿಕ್ಸೆಲ್​ನ ರಿಯರ್ ಕ್ಯಾಮೆರಾ ಇರಲಿದೆ. ಎರಡುಕೂಡ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರೊ ಮಾಡೆಲ್ ಬರೋಬ್ಬರಿ 120W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿರಲಿದೆ. ಅಂತೆಯೆ ಇದರ ಬೆಲೆ ಭಾರತದಲ್ಲಿ ಅಂದಾಜಿ 42,000 – 49,000 ಒಳಗೆ ಇರಬಹುದೆಂದು ಅಂದಾಜಿಸಲಾಗಿದೆ.

ಈ ಹಿಂದೆ ಬಿಡುಗಡೆ ಆದ ಎಂಐ 11 ಸ್ಮಾರ್ಟ್‌ಫೋನ್‌ 6.81-ಇಂಚಿನ 2K WQHD ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿತ್ತು. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌  ಜೊತೆಗೆ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 20ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. 4,600mAh ಸಾಮರ್ಥ್ಯದ ಬ್ಯಾಟರಿ ಸೆಟಪ್‌ ನೀಡಲಾಗಿತ್ತು. ಇದು ಮಿ ಟರ್ಬೊಚಾರ್ಜ್ 55W ವೈರ್ಡ್ ಮತ್ತು 50W ವಾಯರ್‌ ಲೆಸ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ 10W ವಾಯರ್‌ಲೆಸ್ ರಿವರ್ಸ್ ಚಾರ್ಜಿಂಗ್ ಬೆಂಬಲವೂ ಇದೆ.

Amazon: ಈ ಐದು ಪ್ರಶ್ನೆಗಳಿಗೆ ಉತ್ತರಿಸಿದ್ರೆ ಸಿಗುತ್ತೆ 25 ಸಾವಿರ ರೂ.

ಎಚ್ಚರ: ಎಂದಿಗೂ ಹೀಗೆ ಮಾಡಿದಿರಿ: ನಿಮ್ಮ ಮೊಬೈಲ್ ಕೂಡ ಬ್ಲಾಸ್ಟ್ ಆಗಬಹುದು

(Xiaomi is getting ready to launch new smartphones the Mi 11T and Mi 11T Pro)

ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗಜಲಕ್ಷ್ಮಿ, ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ
ಗಜಲಕ್ಷ್ಮಿ, ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ
ಸ್ಟಂಟ್ ಮಾಡಲು ಹೋಗಿ ಕಾರಿನ ಸಮೇತ 300 ಅಡಿ ಆಳದ ಕಂದಕಕ್ಕೆ ಬಿದ್ದ ವ್ಯಕ್ತಿ
ಸ್ಟಂಟ್ ಮಾಡಲು ಹೋಗಿ ಕಾರಿನ ಸಮೇತ 300 ಅಡಿ ಆಳದ ಕಂದಕಕ್ಕೆ ಬಿದ್ದ ವ್ಯಕ್ತಿ