Motorola Edge 20: ಮಾರುಕಟ್ಟೆಗೆ 108MP ಕ್ಯಾಮೆರಾದ ಮತ್ತೊಂದು ಹೊಸ ಸ್ಮಾರ್ಟ್‌ಫೋನ್: ಬೆಲೆ ಕೇವಲ 22,999 ರೂ.
Motorola Edge 20 and Edge 20 Fusion: ಮೋಟೋ ಎಡ್ಜ್ 20 ಫೋನ್ ಇತ್ತೀಚೆಗಷ್ಟೆ ಬಿಡುಗಡೆ ಆದ ಒನ್ಪ್ಲಸ್ ನಾರ್ಡ್ 2ಗೆ ಸವಾಲೊಡ್ಡಿದರೆ, ಮೋಟೋ ಎಡ್ಜ್ 20 ಫ್ಯೂಷನ್ ಎಂಐ 11 ಲೈಟ್ಗೆ ಟಕ್ಕರ್ ಕೊಡಲಿದೆ.
ಲೆನೊವಾ ಒಡೆತನದ ಮೋಟೋರೊಲಾ (Motorola) ಕಂಪೆನಿ ಭಾರತದಲ್ಲಿ ತನ್ನ ಎಡ್ಜ್ ಸರಣಿಯಲ್ಲಿ ಮೋಟೋ ಎಡ್ಜ್ 20 ಮತ್ತು ಮೋಟೋ ಎಡ್ಜ್ 20 ಫ್ಯೂಷನ್ (Motorola Edge 20, Edge 20 Fusion) ಸ್ಮಾರ್ಟ್‌ಫೋನ್‌ಗಳನ್ನು ಇಂದು ಮಾರುಕಟ್ಟೆಗೆ ಪರಿಚಯಿಸಿದೆ. ಎರಡೂ ಸ್ಮಾರ್ಟ್‌ಫೋನ್ ಆಕರ್ಷಕ 108 ಮೆಗಾಫಿಕ್ಸೆಲ್ನ ಕ್ಯಾಮೆರಾ ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ ಮತ್ತು ಮೀಡಿಯಾ ಟೆಕ್ ಪ್ರೊಸೆಸರ್ನಿಂದ ಕೂಡಿದೆ. ಅಲ್ಲದೆ ಅತಿ ಕಡಿಮೆ ಬೆಲೆ ಲಭ್ಯವಿರುವ ಅತ್ಯುತ್ತಮ ಫೋನ್ಗಳ ಪೈಕಿ ಇದುಕೂಡ ಒಂದಾಗಿದೆ.
ಮೋಟೋ ಮೋಟೋ ಎಡ್ಜ್ 20 ಫ್ಯೂಷನ್ ಎರಡು ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ ಪ್ರಕಾರ 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯದ ಬೆಲೆ 21,499 ರೂ. ಇರಲಿದೆ. 8GB RAM ಮತ್ತು 128GB ಸ್ಟೋರೆಜ್ಗೆ 22,999 ರೂ. ನಿಗದಿ ಮಾಡಲಾಗಿದೆ. ಇನ್ನೂ ಮೋಟೋ ಎಡ್ಜ್ 20 ಕೇವಲ ಒಂದು ಆಯ್ಕೆಯಲ್ಲಿ ಮಾರಾಟ ಕಾಣಲಿದೆ. ಇದರ 8GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯಕ್ಕೆ 29,999 ರೂ. ಇರಲಿದೆ.
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಈ ಎರಡೂ ಸ್ಮಾರ್ಟ್ಫನ್ಗಳು ಆಗಸ್ಟ್ 27 ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಾಗಲಿದೆ. ಮೋಟೋ ಎಡ್ಜ್ 20 ಫೋನ್ ಇತ್ತೀಚೆಗಷ್ಟೆ ಬಿಡುಗಡೆ ಆದ ಒನ್ಪ್ಲಸ್ ನಾರ್ಡ್ 2ಗೆ ಸವಾಲೊಡ್ಡಿದರೆ, ಮೋಟೋ ಎಡ್ಜ್ 20 ಫ್ಯೂಷನ್ ಎಂಐ 11 ಲೈಟ್ಗೆ ಟಕ್ಕರ್ ಕೊಡಲಿದೆ.
ಮೋಟೋ ಎಡ್ಜ್ 20 ವಿಶೇಷತೆ?:
ಮೋಟೋ ಎಡ್ಜ್ 20 ಸ್ಮಾರ್ಟ್‌ಫೋನ್ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 778G ಪ್ರೊಸೆಸರ್ ಬಲವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಹೊಂದಿದೆ. ಇನ್ನು ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದ್ದು, ಕ್ರಮವಾಗಿ 108 ಮೆಗಾಫಿಕ್ಸೆಲ್ + 16ಎಂಪಿ + 8ಎಂಪಿ ಸೆನ್ಸಾರ್ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಜೊತೆಗೆ 4000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದ್ದು, 30W ಟರ್ಬೊಪವರ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.
ಮೋಟೋ ಎಡ್ಜ್ 20 ಫ್ಯೂಷನ್ ವಿಶೇಷತೆ?:
ಮೋಟೋ ಎಡ್ಜ್ 20 ಫ್ಯೂಷನ್ ಸ್ಮಾರ್ಟ್‌ಫೋನ್ 6.67 ಇಂಚಿನ ಪೂರ್ಣ OLED ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ Dimensity 800U ಪ್ರೊಸೆಸರ್ ಬಲವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಹೊಂದಿದೆ. ಈ ಫೋನ್ಗೆ ಟ್ರಿಪಲ್ ಕ್ಯಾಮೆರಾ ರಚನೆ ನೀಡಲಾಗಿದ್ದು, ಕ್ರಮವಾಗಿ 108 ಮೆಗಾ ಫಿಕ್ಸೆಲ್ + 8ಎಂಪಿ + 2ಎಂಪಿ ಸೆನ್ಸಾರ್ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಜೊತೆಗೆ 5000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದ್ದು, 30W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
Galaxy Z Fold 3: ಸ್ಯಾಮ್ಸಂಗ್ನಿಂದ ಅಂಡರ್ ಡಿಸ್‌ಪ್ಲೇ ಇರುವ ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ?
Jio Offer: ಜಿಯೋ ಧಮಾಕಾ ಆಫರ್: 1095 GB ಡೇಟಾ ಜೊತೆ 1 ವರ್ಷದವರೆಗೆ ಉಚಿತ ಕರೆ ಸೌಲಭ್ಯ
(Motorola Edge 20 and Edge 20 Fusion 108 MP Camera mid-range smartphones launched in India)