AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asus ROG 5s: ಏಸಸ್​ನಿಂದ ಹೊಸ ಪವರ್​ಫುಲ್ ಸ್ಮಾರ್ಟ್​ಫೋನ್: ಹುಚ್ಚೆದ್ದು ಕುಣಿದ ಗೇಮಿಂಗ್ ಪ್ರಿಯರು

Asus ROG Phone 5s, ROG Phone 5s Pro: ಅತ್ಯಂತ ಬಲಿಷ್ಠವಾದ ಕ್ವಾಲ್ಕಂ ಸ್ನ್ಯಾಪ್ಡ್ರ್ಯಾಗನ್ 888 ಪ್ಲಸ್ ಪ್ರೊಸೆಸರ್ ಅಳವಡಿಸಲಾಗಿದ್ದು, ಗೇಮಿಂಗ್ ಪ್ರಿಯರಂತು ಕಾದುಕುಳಿತಿದ್ದಾರೆ.

Asus ROG 5s: ಏಸಸ್​ನಿಂದ ಹೊಸ ಪವರ್​ಫುಲ್ ಸ್ಮಾರ್ಟ್​ಫೋನ್: ಹುಚ್ಚೆದ್ದು ಕುಣಿದ ಗೇಮಿಂಗ್ ಪ್ರಿಯರು
Asus ROG Phone 5s Series
TV9 Web
| Updated By: Vinay Bhat|

Updated on: Aug 17, 2021 | 3:39 PM

Share

ಗೇಮಿಂಗ್ ಪ್ರಿಯರ ನೆಚ್ಚಿನ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಏಸಸ್ (Asus) ಸದ್ಯ ಹೊಸ ಮೊಬೈಲ್​ನೊಂದಿಗೆ ಮತ್ತೆ ಬಂದಿದೆ. ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್​ಫೋನ್​ಗಳಲ್ಲಿ ಪರಿಚಯಿಸಿ ಸೈ ಎನಿಸಿರುವ ಏಸಸ್ ಇದೀಗ ಹೊಸದಾಗಿ ರಾಗ್ ಫೋನ್ 5s ಸರಣಿಯನ್ನು ಪರಿಚಯಿಸಿದೆ. ಇದರಲ್ಲಿ ಒಟ್ಟು ಎರಡು ಫೋನ್​ಗಳಿದ್ದು ಏಸಸ್ ರಾಗ್ ಫೋನ್ 5s ಮತ್ತು ರಾಗ್ ಫೋನ್ 5s ಪ್ರೊ (Asus ROG Phone 5s and ROG Phone 5s Pro) ಅನ್ನು ಬಿಡುಗಡೆ ಮಾಡಲು ತಯಾರು ಮಾಡಿದೆ.

ವಿಶೇಷ ಎಂದರೆ ರಾಗ್ ಫೋನ್ 5s ಮತ್ತು ರಾಗ್ ಫೋನ್ 5s ಪ್ರೊ ಈ ಎರಡೂ ಸ್ಮಾರ್ಟ್​ಫೋನ್​ಗಳು 5G ಬೆಂಬಲ ಪಡೆದುಕೊಂಡಿದೆ. ಅತ್ಯಂತ ಬಲಿಷ್ಠವಾದ ಕ್ವಾಲ್ಕಂ ಸ್ನ್ಯಾಪ್ಡ್ರ್ಯಾಗನ್ 888 ಪ್ಲಸ್ ಪ್ರೊಸೆಸರ್ ಅಳವಡಿಸಲಾಗಿದ್ದು, ಗೇಮಿಂಗ್ ಪ್ರಿಯರಂತು ಕಾದುಕುಳಿತಿದ್ದಾರೆ.

ಇದು 6.78 ಇಂಚಿನ ಫುಲ್ ಹೆಚ್​ಡಿ ಪ್ಲಸ್ ಸ್ಯಾಮ್​ಸಂಗ್ AMOLED E4 ಡಿಸ್​ ಪ್ಲೇ ಅನ್ನು ಹೊಂದಿದೆ. 18GB LPDDR5 ವರೆಗಿನ RAM ಏಸಸ್ ಫೋನ್​ಗಳ ವಿಶೇಷತೆಯಾಗಿದೆ. 128 GB, 256 GB, ಮತ್ತು 512 GBವರೆಗಿನ ಸ್ಟೋರೇಜ್, ಆಂಡ್ರಾಯ್ಡ್ 11 ಆಧಾರಿತ ರಾಗ್ ಯುಐ ಇದರಲ್ಲಿದೆ. 64 ಮೆಗಾಫಿಕ್ಸೆಲ್​ ಪ್ರೈಮರಿ ಸೆನ್ಸಾರ್ ಕ್ಯಾಮೆರಾ, 13 ಮೆಗಾಫಿಕ್ಸೆಲ್​ನ ಆಲ್ಟ್ರಾ ವೈಡ್ ಆ್ಯಂಗಲ್ ಮತ್ತು 5 ಮೆಗಾಫಿಕ್ಸೆಲ್​ನ ಮಾಕ್ರೋ ಸೆನ್ಸಾರ್ ಕ್ಯಾಮೆರಾ ಅಳವಡಿಸಲಾಗಿದೆ.

ಈ ಎರಡೂ ಸ್ಮಾರ್ಟ್​ಫೋನ್​ಗಳು ಬರೋಬ್ಬರಿ 6000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ವೇಗವಾಗಿ ಚಾರ್ಜ್ ಆಗಲು 65W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಬೆಂಬಲ ನೀಡಲಾಗಿದೆ. ಸದ್ಯಕ್ಕೆ ಕಂಪನಿಯ ಅಧಿಕೃತ ವೆಬ್​ಸೈಟ್​ನಲ್ಲಿ ಕಾಣಿಸಿಕೊಂಡಿದೆ. ಭಾರತದಲ್ಲಿ ಯಾವಾಗ ಬಿಡುಗಡೆ ಎಂಬ ಬಗ್ಗೆ ಕಂಪೆನಿ ಇನ್ನಷ್ಟೆ ತಿಳಿಸಬೇಕಿದೆ.

Motorola Edge 20: ಮಾರುಕಟ್ಟೆಗೆ 108MP ಕ್ಯಾಮೆರಾದ ಮತ್ತೊಂದು ಹೊಸ ಸ್ಮಾರ್ಟ್​ಫೋನ್: ಬೆಲೆ ಕೇವಲ 22,999 ರೂ.

Amazon Mobile Savings Days Sale: ಅಮೆಜಾನ್​ನಲ್ಲಿ ಹೊಸ ಹೊಸ ಸ್ಮಾರ್ಟ್​ಫೋನ್​ಗಳ ಮೇಲೆ ಬಂಪರ್ ಡಿಸ್ಕೌಂಟ್

(Asus ROG Phone 5s and ROG Phone 5s Pro With Snapdragon 888 plus SoC Unveiled price Specifications)