AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nokia G50: ನೋಕಿಯಾದ ಹೊಸ 5G ಸ್ಮಾರ್ಟ್​ಫೋನ್​ನ ಮಾಹಿತಿ ಆನ್​ಲೈನ್​ನಲ್ಲಿ ಸೋರಿಕೆ

ವಿಶೇಷ ಎಂದರೆ Nokia G50 ಫೋನ್ 5ಜಿ ಸಂಪರ್ಕ ಹೊಂದಿರಲಿದೆಯಂತೆ. ಈ ಮೂಲಕ ಕೆಲವೇ ಕೆಲವು ನೋಕಿಯಾ 5ಜಿ ಸ್ಮಾರ್ಟ್​ಫೋನ್​ಗಳ ಸಾಲಿಗೆ ಇದುಕೂಡ ಸೇರುವುದು ಖಚಿತವಾಗಿದೆ.

Nokia G50: ನೋಕಿಯಾದ ಹೊಸ 5G ಸ್ಮಾರ್ಟ್​ಫೋನ್​ನ ಮಾಹಿತಿ ಆನ್​ಲೈನ್​ನಲ್ಲಿ ಸೋರಿಕೆ
Nokia G50
TV9 Web
| Edited By: |

Updated on: Aug 24, 2021 | 1:51 PM

Share

ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಈಗೀಗ ಆಕರ್ಷಕ ಫೀಚರ್​ಗಳುಳ್ಳ ಫೋನನ್ನು ಬಿಡುಗಡೆ ಮಾಡುತ್ತಿರುವ ನೋಕಿಯಾ ಕಂಪೆನಿ ಸದ್ಯ ನೋಕಿಯಾ ಜಿ50 (Nokia G50) ಎಂಬ ಹೊಸ ಸ್ಮಾರ್ಟ್​ಫೋನನ್ನು ಅನಾವರಣ ಮಾಡಲು ಸಜ್ಜಾಗಿದೆ. ಆದರೆ, ಅಚ್ಚರಿ ಎಂಬಂತೆ ಈ ಫೋನಿನ ಕೆಲವು ಮಾಹಿತಿ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. ವಾಟರ್‌ಡ್ರಾಪ್ ಶೈಲಿಯ ಡಿಸ್​ಪ್ಲೇ ನೋಚ್, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಸೇರಿದಂತೆ ಈ ಫೋನಿನ ಕುರಿತು ಕೆಲವು ಮಾಹಿತಿಗಳು ಲೀಕ್ ಆಗಿವೆ.

ವಿಶೇಷ ಎಂದರೆ ಈ ಫೋನ್ 5ಜಿ ಸಂಪರ್ಕ ಹೊಂದಿರಲಿದೆಯಂತೆ. ಈ ಮೂಲಕ ಕೆಲವೇ ಕೆಲವು ನೋಕಿಯಾ 5ಜಿ ಸ್ಮಾರ್ಟ್​ಫೋನ್​ಗಳ ಸಾಲಿಗೆ ಇದುಕೂಡ ಸೇರುವುದು ಖಚಿತವಾಗಿದೆ. ಎರಡು ವಿಭಿನ್ನ ಶೇಖರಣಾ ರೂಪಾಂತರಗಳಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದ್ದು, ನೀಲಿ ಮತ್ತು ಮಿಡ್ನೈಟ್ ಸನ್ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.

ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನಲ್ಲಿ ಫೋನ್ ಎಂಬುದು ತಿಳಿದುಬಂದಿದೆ. 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಎಂಬುದು ತಿಳಿದಿದ್ದು, ಹಿಂಭಾಗದ ಫೋನಿನ ವಿನ್ಯಾಸವು ಈಗಿರುವ ನೋಕಿಯಾ ಜಿ 10 ಮತ್ತು ನೋಕಿಯಾ ಜಿ 20 ಅನ್ನು ಹೋಲುತ್ತದೆ.

ಇನ್ನೂ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 ಪ್ರೊಸೆಸರ್ ಅಳವಡಿಸಲಾಗಿದೆಯಂತೆ. ಎಂದಿನಂತೆ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ನೋಕಿಯಾ ಜಿ50 ಯುಕೆ ನಲ್ಲಿ 4GB RAM + 64GB ಸ್ಟೋರೇಜ್ ರೂಪಾಂತರಕ್ಕಾಗಿ ಜಿಬಿಪಿ 207 ಅಂದರೆ ಭಾರತದಲ್ಲಿ ಅಂದಾಜು 11,000 ರೂ. ಎನ್ನಬಹುದು.

ಎಚ್‌ಎಂಡಿ ಗ್ಲೋಬಲ್ ಶೀಘ್ರದಲ್ಲೇ ನೋಕಿಯಾ ಜಿ50 ಸ್ಮಾರ್ಟ್​ಫೋನ್ ಬಿಡುಗಡೆ ಆಗಲಿದೆ. ಈ ಬಗ್ಗೆ ಕಂಪೆನಿ ಅಧಿಕೃತವಾಗಿ ಹೇಳಿಲ್ಲವಾದರೂ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಆದಷ್ಟು ಬೇಗ ಈ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎನ್ನಲಾಗಿದೆ.

Realme Narzo 30: ರಿಯಲ್ ಮಿಯಿಂದ ಬಂಪರ್ ಕೊಡುಗೆ: ನಾರ್ಜೊ 30 5G ಈಗ ಹೊಸ ವೇರಿಯೆಂಟ್​ನಲ್ಲಿ ಲಭ್ಯ

ಮೊಬೈಲ್ ಬಳಕೆದಾರರೇ ಎಚ್ಚರ: ಈ 8 ಆ್ಯಪ್​ಗಳನ್ನು ತಕ್ಷಣವೇ ಡಿಲೀಟ್ ಮಾಡಿ

(Nokia G50 Accidentally Confirmed by the Company on Instagram Ahead of Official Launch)

Follow Us
TV9 Web
TV9 Web

TV9 Kannada

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು