ಹೆಚ್ಎಮ್ಡಿ ಗ್ಲೋಬಲ್ ಇತ್ತೀಚೆಗೆ ನೋಕಿಯಾದ ಸಾಮಾಜಿಕ ಹ್ಯಾಂಡಲ್‌ಗಳು ಮತ್ತು ವೆಬ್‌ಸೈಟ್‌ನ ಹೆಸರನ್ನು ತನ್ನ ಹ್ಯೂಮನ್ ಮೊಬೈಲ್ ಡಿವೈಸ್ಗಳಿಗೆ (HMD) ಬದಲಾಯಿಸಿದೆ. ಇದು ನೋಕಿಯಾ ಸ್ಮಾರ್ಟ್‌ಫೋನ್ ಬ್ರ್ಯಾಂಡ್ನ ಅವನತಿ ಎಂದು ಹೇಳಲಾಗಿತ್ತು. ನಾವು ಇನ್ನುಂದೆ ಹೊಸ ನೋಕಿಯಾ-ಬ್ರಾಂಡ್ ಸ್ಮಾರ್ಟ್‌ಫೋನ್‌ಗಳನ್ನು ನೋಡುವುದಿಲ್ಲ ಎಂದೇ ನಂಬಲಾಗಿತ್ತು. ಆದರೀಗ ನೋಕಿಯಾ ಕಡೆಯಿಂದ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಕೆಲವು ಆಸಕ್ತಿದಾಯಕ ಹೊಸ ಬೆಳವಣಿಗೆಗಳು ಎಂಬಂತೆ ನೋಕಿಯಾ 17 ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.
GSMchina ವರದಿಯ ಪ್ರಕಾರ, ನೋಕಿಯಾ 17 ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. GSMchina IMEI ಡೇಟಾಬೇಸ್‌ನಲ್ಲಿ TA-1603 ರಿಂದ TA-1628 ವರೆಗಿನ 17 ಹೊಸ ಸ್ಮಾರ್ಟ್‌ಫೋನ್ ಮಾದರಿ ಸಂಖ್ಯೆಗಳನ್ನು ಗುರುತಿಸಲಾಗಿದೆ. ಈ ಮಾದರಿಗಳು ಪ್ರಾಥಮಿಕ ಫೋನ್‌ಗಳ ವಿಭಿನ್ನ RAM/ಶೇಖರಣಾ ರೂಪಾಂತರಗಳು ಅಥವಾ ಸಂಪೂರ್ಣವಾಗಿ ವಿಭಿನ್ನವಾದ ಫೋನ್‌ಗಳಾಗಿರಬಹುದು ಎಂದು ಹೇಳಲಾಗಿದೆ.
ಬಜೆಟ್ ಪ್ರಿಯರನ್ನು ದಂಗಾಗಿಸಿದೆ ಈ ಹೊಸ ಸ್ಮಾರ್ಟ್‌ಫೋನ್: ಇಷ್ಟು ಕಡಿಮೆ ಬೆಲೆಗೆ ಎಂಥ ಫೋನ್
ಮುಂಬರುವ MWC (ಮೊಬೈಲ್ ವರ್ಲ್ಡ್ ಕಾಂಗ್ರೆಸ್) ನಲ್ಲಿ ನೋಕಿಯಾ ಕಂಪನಿ ಕೆಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಸಂಭವವಿದೆ. ಮುಂಬರುವ ಸ್ಮಾರ್ಟ್‌ಫೋನ್‌ಗಳ ಕುರಿತು ವೆಬ್‌ಸೈಟ್ ಯಾವುದೇ ಇತರ ಮಾಹಿತಿಯನ್ನು ಬಹಿರಂಗಪಡಿಸಿಲ್ಲ, ಆದರೆ, ಈ ಸ್ಮಾರ್ಟ್‌ಫೋನ್‌ಗಳು ನೋಕಿಯಾ ಬ್ರಾಂಡ್ನದ್ದೇ ಆಗಿರುತ್ತದೆ, HMD ಬ್ರ್ಯಾಂಡ್ ಅಲ್ಲ ಎಂಬುದು ಸ್ಷಷ್ಟವಾಗಿದೆ.
HMD ಸಹ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಡಲು ಸಜ್ಜಾಗಿದೆ. TA-1584, TA-1594, TA-1595, TA-1588, TA-1589, TA-1592, TA-1602, TA-1605 ಮತ್ತು TA-1631 ಮಾದರಿ ಸಂಖ್ಯೆಗಳನ್ನು ಹೊಂದಿರುವ IMEI ಡೇಟಾಬೇಸ್‌ನಲ್ಲಿ ಒಂಬತ್ತು ಹೊಸ HMD-ಬ್ರಾಂಡ್ ಫೋನ್‌ಗಳನ್ನು ಇತ್ತೀಚೆಗೆ ಗುರುತಿಸಲಾಗಿದೆ. HMD ಸ್ಮಾರ್ಟ್‌ಫೋನ್‌ಗಳ ರೆಂಡರ್‌ಗಳು ಲೀಕ್ ಆಗಿವೆ. ಅದರ ವಿನ್ಯಾಸ ವೈರಲ್ ಆಗಿತ್ತು.
ನಿಮ್ಮ ಲವ್ವರ್ ಫೋನ್ ದಿನವಿಡೀ ಬ್ಯುಸಿ ಬರುತ್ತಾ?: ಕಾಲ್ ಹಿಸ್ಟರಿ ತೆಗೆಯುವ ಟ್ರಿಕ್ ಇಲ್ಲಿದೆ ನೋಡಿ
HMD ಯ ಹೊಸ ಸ್ಮಾರ್ಟ್ಫೋಣ್ನ ಹಿಂಬದಿಯ ಪ್ಯಾನೆಲ್‌ನಲ್ಲಿ HMD ಬ್ರ್ಯಾಂಡಿಂಗ್ ಮತ್ತು 108 ಮೆಗಾ ಪಿಕ್ಸೆಲ್ನಲ್ಲಿ OIS-ಸಕ್ರಿಯಗೊಳಿಸಿದ ಕ್ಯಾಮೆರಾ ಇರುವುದು ಕಂಡುಬಂದಿದೆ. HMD ಗ್ಲೋಬಲ್ ತನ್ನ ಸ್ವಂತ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳನ್ನು ಏಪ್ರಿಲ್ 2024 ರ ಸುಮಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವ ಸಾಧ್ಯತೆಯಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ