Password: ನೀವು ಈ ಪಾಸ್ವರ್ಡ್ ಬಳಸುತ್ತಿದ್ದಲ್ಲಿ ತಕ್ಷಣೇ ಬದಲಾಯಿಸಿ: ನಾರ್ಡ್​ಪಾಸ್​ನಿಂದ ಎಚ್ಚರಿಕೆ ಸಂದೇಶ

| Updated By: Vinay Bhat

Updated on: Feb 05, 2022 | 2:18 PM

ಬಹುತೇಕ ಜನರ ಪಾಸ್‌ವರ್ಡ್‌ಗಳು ಅತ್ಯಂತ ಸಾಮಾನ್ಯ ಆಗಿರುವ ಬಗ್ಗೆ ನಾರ್ಡ್‌ಪಾಸ್‌ ವರದಿ ಮಾಡಿದೆ.ತನ್ನ ವಾರ್ಷಿಕ 'ಟಾಪ್ 200 ಅತ್ಯಂತ ಸಾಮಾನ್ಯ ಪಾಸ್‌ವರ್ಡ್‌ಗಳ' ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಹ್ಯಾಕರ್‌ಗಳು ಮತ್ತು ಸೈಬರ್ ಅಪರಾಧಿಗಳು ನಿಮಿಷಗಳಲ್ಲಿ ಭೇದಿಸಲು ಸಾಧ್ಯವಾಗುವ ಅತ್ಯಂತ ಸರಳ ಪಾಸ್‌ವರ್ಡ್‌ಗಳನ್ನು ಹೆಸರಿಸುತ್ತದೆ.

Password: ನೀವು ಈ ಪಾಸ್ವರ್ಡ್ ಬಳಸುತ್ತಿದ್ದಲ್ಲಿ ತಕ್ಷಣೇ ಬದಲಾಯಿಸಿ: ನಾರ್ಡ್​ಪಾಸ್​ನಿಂದ ಎಚ್ಚರಿಕೆ ಸಂದೇಶ
Password
Follow us on

ಭಾರತದಲ್ಲಿ ಪಾಸ್ವರ್ಡ್ (Password) ಎಂಬುದನ್ನು ಅತ್ಯಂತ ಸಾಮಾನ್ಯ ಎಂಬಂತೆ ಬಳಸಲಾಗುತ್ತಿದೆ. ಪದೇ ಪದೇ ಬದಲಾಯಿಸುತ್ತಿರುವುದು, ನಿಮ್ಮದೇ ಹೆಸರಿನ ಪಾಸ್ವರ್ಡ್ ಬಳಕೆ ಮಾಡುವುದು ಅಥವಾ ನಿಮ್ಮ ಜನ್ಮ ದಿನಾಂಕವನ್ನು ಪಾಸ್ವರ್ಡ್ ಮಾಡುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ದುರ್ಬಲ, ಮರುಬಳಕೆ ಅಥವಾ ಸ್ಪಷ್ಟವಾಗಿ ಕೆಟ್ಟ ಪಾಸ್ವವರ್ಡ್​ಗಳಿಂದ ಹ್ಯಾಕರ್‌ಗಳು ಸೆಕೆಂಡ್‌ಗಿಂತಲೂ ಕಡಿಮೆ ಅವಧಿಯಲ್ಲಿ ಭೇದಿಸುತ್ತಿದ್ದಾರೆ. ಈ ಬಗ್ಗೆ ಭದ್ರತಾ ಪರಿಹಾರಗಳ ಕಂಪನಿ ನಾರ್ಡ್‌ಪಾಸ್‌ (NordPass) ಎಚ್ಚರಿಕೆ ನೀಡುತ್ತಾ ಬಂದಿದ್ದರೂ ಮತ್ತೆ ಅದೇ ತಪ್ಪುಗಳನ್ನು ಅನೇಕರು ಮಾಡುತ್ತಿದ್ದಾರೆ. ಇದೀಗ ಬಹುತೇಕ ಜನರ ಪಾಸ್‌ವರ್ಡ್‌ಗಳು ಅತ್ಯಂತ ಸಾಮಾನ್ಯ ಆಗಿರುವ ಬಗ್ಗೆ ನಾರ್ಡ್‌ಪಾಸ್‌ ವರದಿ ಮಾಡಿದೆ.ತನ್ನ ವಾರ್ಷಿಕ ‘ಟಾಪ್ 200 ಅತ್ಯಂತ ಸಾಮಾನ್ಯ ಪಾಸ್‌ವರ್ಡ್‌ಗಳ’ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಹ್ಯಾಕರ್‌ಗಳು ಮತ್ತು ಸೈಬರ್ ಅಪರಾಧಿಗಳು ನಿಮಿಷಗಳಲ್ಲಿ ಭೇದಿಸಲು ಸಾಧ್ಯವಾಗುವ ಅತ್ಯಂತ ಸರಳ ಪಾಸ್‌ವರ್ಡ್‌ಗಳನ್ನು ಹೆಸರಿಸುತ್ತದೆ.

ಸೈಬರ್‌ ಭದ್ರತೆಗೆ ಸಂಬಂಧಿಸಿದ ಘಟನೆಗಳ ಮೇಲೆ ಅಧ್ಯಯನ ನಡೆಸುವ ಸ್ವತಂತ್ರ ಸಂಶೋಧನಾ ತಜ್ಞರ ಸಹಯೋಗದೊಂದಿಗೆ ನಾರ್ಡ್‌ಪಾಸ್ ಈ ಪಟ್ಟಿ ಸಿದ್ಧಪಡಿಸಿದೆ. ವಾಸ್ತವವಾಗಿ ಹಲವು ಸೆಕೆಂಡುಗಳಲ್ಲಿ. ನಿರ್ದಿಷ್ಟ ಪಾಸ್‌ವರ್ಡ್ ಅನ್ನು ಎಷ್ಟು ಬಾರಿ ಬಳಸಲಾಗಿದೆ ಮತ್ತು ಅದನ್ನು ಭೇದಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಪಟ್ಟಿ ವಿವರಿಸುತ್ತದೆ.

ಕಳೆದ ವರ್ಷ ವರ್ಷದಪಟ್ಟಿಯಲ್ಲಿ “123456” ಮತ್ತು “password” ನಂತಹ ಒಂದೇ ರೀತಿಯ ಪಾಸ್ವರ್ಡ್​ಗಳು ಹೆಚ್ಚು ಬಳಕೆಯಾಗಿದ್ದವು. ಹೆಚ್ಚಿನ ಜನರ ಪಾಸ್ವರ್ಡ್ಗಳನ್ನು 24 ಗುಂಪುಗಳಾಗಿ ವಿಂಗಡಿಸಬಹುದು. ಹಾಗೆ, ಶೇ. 49 ರಷ್ಟು ಬಳಕೆದಾರರು ತಮ್ಮ ಪಾಸ್ವರ್ಡ್​ಗಳನ್ನು ಬದಲಾಯಿಸಲು ಅಗತ್ಯವಿದ್ದಾಗ ಕೇವಲ ಒಂದು ಅಕ್ಷರ ಅಥವಾ ಅಂಕಿಗಳನ್ನು ತಮ್ಮ ಆದ್ಯತೆಯ ಪಾಸ್ವರ್ಡ್​ಗಳಲ್ಲಿ ಬದಲಾಯಿಸುತ್ತಾರಂತೆ. ಸದ್ಯ ನಾರ್ಡ್‌ಪಾಸ್‌ ಹೆಸರಿಸಿರುವ ಸಾಮಾನ್ಯ ಪಾಸ್‌ವರ್ಡ್‌ಗಳು ಯಾವುವು ಎನ್ನುವುದನ್ನು ನೋಡೋಣ. ಆದರೆ, ಈ ರೀತಿ ದುರ್ಬಲ ಪಾಸ್‌ವರ್ಡ್‌ ನೀವು ಇಟ್ಟಿದ್ದರೆ, ಕೂಡಲೇ ಕಠಿಣ ಪಾಸ್‌ವರ್ಡ್‌ಗೆ ಬದಲಾಯಿಸುವುದು ಉತ್ತಮ.

ಅಭಿಷೇಕ್- ಈ ಪಾಸ್‌ವರ್ಡ್‌ ಅನ್ನು 3 ಗಂಟೆಗಳಲ್ಲಿ ಕ್ರ್ಯಾಕ್ ಮಾಡಬಹುದಂತೆ.

ಆದಿತ್ಯ – ಈ ಪಾಸ್‌ವರ್ಡ್‌ ಅನ್ನು ಕೇವಲ 2 ನಿಮಿಷಗಳಲ್ಲಿ ಕ್ರ್ಯಾಕ್ ಮಾಡಲು ಸಾಧ್ಯವಿದೆಯಂತೆ.

ಆಶಿಷ್ – ಪಾಸ್‌ವರ್ಡ್‌ ಕ್ರ್ಯಾಕ್ ಮಾಡಲು ಸಮಯ – 2 ನಿಮಿಷಗಳು

ಅಂಜಲಿ- ಪಾಸ್‌ವರ್ಡ್‌ ಕ್ರ್ಯಾಕ್ ಮಾಡಲು ಸಮಯ – 2 ನಿಮಿಷಗಳು

ಅರ್ಚನಾ – ಪಾಸ್‌ವರ್ಡ್‌ ಕ್ರ್ಯಾಕ್ ಮಾಡಲು ಸಮಯ – 17 ನಿಮಿಷಗಳು

ಅನುರಾಧಾ – ಪಾಸ್‌ವರ್ಡ್‌ ಕ್ರ್ಯಾಕ್ ಮಾಡಲು ಸಮಯ – 2 ನಿಮಿಷಗಳು

ದೀಪಕ್ – ಪಾಸ್‌ವರ್ಡ್‌ ಕ್ರ್ಯಾಕ್ ಮಾಡಲು ಸಮಯ – 2 ನಿಮಿಷಗಳು

ದಿನೇಶ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 17 ನಿಮಿಷಗಳು

ಗಣೇಶ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 2 ನಿಮಿಷಗಳು

ಗೌರವ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 2 ನಿಮಿಷಗಳು

ಗಾಯತ್ರಿ- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 3 ಗಂಟೆಗಳು

ಹನುಮಾನ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 17 ನಿಮಿಷಗಳು

ಹರಿಓಂ- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 2 ನಿಮಿಷಗಳು

ಹರ್ಷ- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 2 ನಿಮಿಷಗಳು

ಕೃಷ್ಣ- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 1 ಸೆಕೆಂಡ್‌ಗಿಂತ ಕಡಿಮೆ

ಖುಷಿ- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 2 ನಿಮಿಷಗಳು

ಕಾರ್ತಿಕ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 17 ನಿಮಿಷಗಳು

ಲಕ್ಷ್ಮಿ- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 17 ನಿಮಿಷಗಳು

ಸುಂದರ- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – ಒಂದು ಸೆಕೆಂಡ್‌ಗಿಂತ ಕಡಿಮೆ

ಮನೀಶ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 2 ನಿಮಿಷಗಳು

ಮನಿಷಾ- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 17 ನಿಮಿಷಗಳು

ಮಹೇಶ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 2 ನಿಮಿಷಗಳು

ನವೀನ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 2 ನಿಮಿಷಗಳು

ನಿಖಿಲ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 3 ಗಂಟೆಗಳು

ಪ್ರಿಯಾಂಕಾ- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 3 ಗಂಟೆಗಳು

ಪ್ರಕಾಶ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 17 ನಿಮಿಷಗಳು

ಪೂನಂ- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 2 ನಿಮಿಷಗಳು

ಪ್ರಶಾಂತ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 3 ಗಂಟೆಗಳು

ಪ್ರಸಾದ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 17 ನಿಮಿಷಗಳು

ಪಂಕಜ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 2 ನಿಮಿಷಗಳು

ಪ್ರದೀಪ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 17 ನಿಮಿಷಗಳು

ಪ್ರವೀಣ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 17 ನಿಮಿಷಗಳು

ರಶ್ಮಿ- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 2 ನಿಮಿಷಗಳು

ರಾಹುಲ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 17 ಸೆಕೆಂಡುಗಳು

ರಾಜಕುಮಾರ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 17 ನಿಮಿಷಗಳು

ರಾಕೇಶ್- ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಮಯ – 17 ನಿಮಿಷಗಳು

ರಮೇಶ್- ಪಾಸ್‌ವರ್ಡ್‌ ಕ್ರ್ಯಾಕ್ ಮಾಡಲು ಸಮಯ – 2 ನಿಮಿಷಗಳು

ಇದಿಷ್ಟೇ ಅಲ್ಲದೆ ಇನ್ನೂ ಅನೇಕ ಹೆಸರುಗಳು ಈ ಪಟ್ಟಿಯಲ್ಲಿದೆ.

Tecno Pova 5G: ಬಜೆಟ್ ಬೆಲೆಯ ಸಾಲಿಗೆ ಸೇರುತ್ತಿದೆ ಮತ್ತೊಂದು ಅದ್ಭುತ 5G ಸ್ಮಾರ್ಟ್​ಫೋನ್: ಏನಿದರ ವಿಶೇಷತೆ?