ಲಂಡನ್ ಮೂಲದ ಕಾರ್ಲ್ ಪೀ ಒಡೆತನದ ಪ್ರಸಿದ್ಧ ನಥಿಂಗ್ ಕಂಪನಿಯ ಫೋನುಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಡಿಮ್ಯಾಂಡ್ ಇದೆ. ಈ ಮಾದರಿಯಿಂದ ಇಲ್ಲಿಯವರೆಗೆ ಬಿಡುಗಡೆಯಾದ ಫೋನ್‌ಗಳು ಭಾರೀ ಮಾರಾಟ ಕಂಡಿದೆ. ಇತ್ತೀಚೆಗಷ್ಟೆ ನಥಿಂಗ್ ಬ್ರ್ಯಾಂಡ್ನಿಂದ ಹೊಸ ಫೋನ್ ಬಿಡುಗಡೆ ಆಗಿತ್ತು. ಬಜೆಟ್ ಬೆಲೆಯಲ್ಲಿ ಈ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ನಥಿಂಗ್ ಫೋನ್ 2a (Nothing Phone 2a) ಹೆಸರಿನಲ್ಲಿ ತಂದಿರುವ ಈ ಫೋನ್ ಕೂಡ ಭರ್ಜರಿ ಸೇಲ್ ಕಾಣುತ್ತಿದೆ. ಅತ್ಯುತ್ತಮ ಫೀಚರ್ಗಳಿಂದ ಕೂಡಿರುವ ಈ ಫೋನಿಗೆ ಒಳ್ಳೆಯ ಪ್ರತಿಕ್ರಿಯೆ ಕೇಳಿಬರುತ್ತಿದೆ.
ಹೊಸದಾಗಿ ಬಿಡುಗಡೆಯಾದ ನಥಿಂಗ್ ಫೋನ್ 2a ಸ್ಮಾರ್ಟ್‌ಫೋನ್ ಸೇಲ್ ಆರಂಭವಾದ 60 ನಿಮಿಷಗಳಲ್ಲಿ 60,000 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಭರ್ಜರಿ ಬೇಡಿಕೆಯ ಹಿನ್ನೆಲೆಯಲ್ಲಿ ದಾಖಲೆಯ ಮಾರಾಟ ಕಂಡು ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ.
ವೋಟರ್ ಐಡಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?: ಇಲ್ಲಿದೆ ಮಾಹಿತಿ
ಈ ಸ್ಮಾರ್ಟ್‌ಫೋನ್ ಕಪ್ಪು ಮತ್ತು ಬಿಳಿ ಬಣ್ಣದ ರೂಪಾಂತರದಲ್ಲಿ ತರಲಾಗಿದೆ. ಈ ಫೋನ್ ಆರಂಭಿಕ ಬೆಲೆ ರೂ. 19,999. ಈ ಫೋನ್ 8GB RAM, 128GB ಸ್ಟೋರೇಜ್, 8GB RAM, 256GB ಸ್ಟೋರೇಜ್, 12GB RAM, 256GB ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಆಗಿದೆ.
ಈ ಫೋನ್‌ನ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಇದು 6.7 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್ ಡೈಮನ್ಶನ್ 7200 ಪ್ರೊ ಚಿಪ್‌ಸೆಟ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು 50 MP ಹಿಂಬದಿಯ ಕ್ಯಾಮೆರಾ ಮತ್ತು 32 MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ, 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಹೊಂದಿದೆ.
ಮುಂದಿನ ವಾರ ಬಿಡುಗಡೆ ಆಗಲಿವೆ ಸಾಲು ಸಾಲು ಸ್ಮಾರ್ಟ್ಫೋನ್ಗಳು: ಯಾವುವು ನೋಡಿ
ನಥಿಂಗ್ ಫೋನ್ 2a ಸ್ಮಾರ್ಟ್‌ಫೋನ್ ದೇಶದಲ್ಲಿ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಮಾಡಲಾಗಿತ್ತು. ಇದರ ಬೇಸ್ 8GB RAM + 128GB ಸ್ಟೋರೇಜ್ ಕಾನ್ಫಿಗರೇಶನ್‌ಗೆ 23,999 ರೂ. ಇದೆ. ಅಂತೆಯೆ 8GB RAM + 256GB ಮತ್ತು 12GB RAM + 256GB ಸ್ಟೋರೇಜ್ ರೂಪಾಂತರಕ್ಕೆ ಕ್ರಮವಾಗಿ ರೂ. 25,999 ಮತ್ತು 27,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಮಾರ್ಚ್ 12 ರಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಕಾಣುತ್ತಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ