Tech Tips: ವೋಟರ್ ಐಡಿಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?: ಇಲ್ಲಿದೆ ಮಾಹಿತಿ

Voter ID Online: ಮತದಾರರ ಕಾರ್ಡ್ ಬೇಕಾಗಿದ್ದರೆ ಅಥವಾ ತಿದ್ದುಪಡಿ ಮಾಡಬೇಕಿದ್ದರೆ ಆನ್‌ಲೈನ್​ನಲ್ಲೇ ಸುಲಭವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಷ್ಟೆ. ಇದರಲ್ಲಿ ನಿಮ್ಮ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಬೇಕು.

Tech Tips: ವೋಟರ್ ಐಡಿಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?: ಇಲ್ಲಿದೆ ಮಾಹಿತಿ
Voter ID
Follow us
|

Updated on: Mar 17, 2024 | 12:12 PM

ಲೋಕಸಭೆ ಚುನಾವಣೆ (Lok Sabha Election 2024) ದಿನಾಂಕವನ್ನು ಘೋಷಿಸಲಾಗಿದೆ. ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 19 ರಿಂದ ಮತದಾನ ಆರಂಭವಾಗಲಿದೆ. ಜೂನ್ 4, 2024 ರಂದು ಫಲಿತಾಂಶ ಪ್ರಕಟವಾಗಲಿದೆ. 17ನೇ ಲೋಕಸಭೆಯ ಅವಧಿ ಜೂನ್ 16, 2024ಕ್ಕೆ ಮುಕ್ತಾಯವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಮತದಾನಕ್ಕೆ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿ ಬೇಕು. ಇದು ಇಲ್ಲದಿದ್ದರೆ ಚುನಾವಣೆಯಲ್ಲಿ ಮತ ಹಾಕುವಂತಿಲ್ಲ. ಈಗ ನಿಮ್ಮಲ್ಲಿ ಮತದಾರರ ಗುರುತಿನ ಚೀಟಿ ಇಲ್ಲ ಎಂದಾದರೆ ಸರ್ಕಾರಿ ಕಚೇರಿಯ ಹೊಸ್ತಿಲಲ್ಲಿ ಅಲೆಯುವ ಅಗತ್ಯವಿಲ್ಲ. ಮತದಾರರ ಕಾರ್ಡ್ ಬೇಕಾಗಿದ್ದರೆ ಅಥವಾ ತಿದ್ದುಪಡಿ ಮಾಡಬೇಕಿದ್ದರೆ ಆನ್‌ಲೈನ್​ನಲ್ಲೇ ಸುಲಭವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಷ್ಟೆ. ಇದರಲ್ಲಿ ನಿಮ್ಮ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಬೇಕು. ನಂತರ ನಿಮ್ಮ ಮನೆಯ ವಿಳಾಸಕ್ಕೆ ಹೊಸ ಮತದಾರರ ಚೀಟಿ ಬರುತ್ತದೆ.

ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಆನ್‌ಲೈನ್ ಮತದಾರರ ಗುರುತಿನ ಚೀಟಿಯನ್ನು ರಚಿಸಲು ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್​ನಿಂದ ಭಾರತದ ಚುನಾವಣಾ ಆಯೋಗದ Voter Helpline ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ಈ ಅಪ್ಲಿಕೇಶನ್ ಸಹಾಯದಿಂದ, ನೀವು ಆನ್‌ಲೈನ್ ಮತದಾರರ ಗುರುತಿನ ಚೀಟಿ ಮತ್ತು ತಿದ್ದುಪಡಿಯನ್ನು ಮಾಡಬಹುದು.

ಮೊದಲು ಮೊಬೈಲ್‌ನಲ್ಲಿ ಮತದಾರರ ಸಹಾಯವಾಣಿ ಆ್ಯಪ್‌ ಇನ್​ಸ್ಟಾಲ್ ಮಾಡಿ. ನಂತರ ಅಪ್ಲಿಕೇಶನ್ ತೆರೆಯಿರಿ. ಮತದಾರರ ನೋಂದಣಿ ಮೇಲೆ ಕ್ಲಿಕ್ ಮಾಡಿ. ಬಳಿಕ ಮತದಾರರ ನೋಂದಣಿಗೆ ಅಗತ್ಯವಿರುವ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅನ್ನು ಭರ್ತಿ ಮಾಡಿ. ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿದ ನಂತರ ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ಉಳಿದ ಪ್ರಕ್ರಿಯೆಯನ್ನು BLO ಪರಿಶೀಲಿಸುತ್ತದೆ. ಬಳಿಕ ನಿಮ್ಮ ಮನೆಗೇ ಹೊಸ ಮತದಾರರ ಗುರುತಿನ ಚೀಟಿ ಬರುತ್ತದೆ.

ಹಳೆಯ ವೋಟಾರ್ ಐಡಿಯನ್ನು ಹೇಗೆ ತಿದ್ದುಪಡಿ ಮಾಡುವುದು?

ಮತದಾರರ ಸಹಾಯವಾಣಿ ಆ್ಯಪ್‌ ಮೂಲಕ ಹಳೆಯ ಮತದಾರರ ಗುರುತಿನ ಚೀಟಿಯನ್ನು ಕೂಡ ಸರಿಪಡಿಸಬಹುದು. ಅದಕ್ಕಾಗಿ, ಈ ಅಪ್ಲಿಕೇಶನ್‌ನ ಕೊನೆಯಲ್ಲಿ ದೂರು ಮತ್ತು ನೋಂದಣಿ ಆಯ್ಕೆಯು ಕಾಣಿಸಿಕೊಳ್ಳುತ್ತದೆ. ನೀವು ಈ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅದರಲ್ಲಿ ಸರಿಯಾದ ಮಾಹಿತಿಯನ್ನು ಸಲ್ಲಿಸಬೇಕು. ಈ ಮಾಹಿತಿಯನ್ನು ಸಲ್ಲಿಸಿದ ನಂತರ, ಕೆಲವೇ ದಿನಗಳಲ್ಲಿ ನಿಮ್ಮ ಮನೆಗೆ ಹೊಸ ಮತದಾರರ ಗುರುತಿನ ಚೀಟಿಯನ್ನು ನೀವು ಸ್ವೀಕರಿಸುತ್ತೀರಿ. ಆ್ಯಪ್ ಇನ್‌ಸ್ಟಾಲ್ ಮಾಡುವಾಗ ಮೊದಲು ಅದು ಚುನಾವಣಾ ಆಯೋಗದ ಅಧಿಕೃತ ಆ್ಯಪ್ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ