ಒನ್ಪ್ಲಸ್ (OnePlus) ಕಂಪನಿಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಒನ್ಪ್ಲಸ್ ನಾರ್ಡ್ 3 (OnePlus Nord 3) ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಅಪ್ಪಳಿಸಲಿದೆ. ಈ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ನೀಡಿದೆ. ಹೀಗಿರುವಾಗ ಈ ಫೋನಿನ ಬೆಲೆ ಸೋರಿಕೆ ಆಗಿದೆ. ಟಿಪ್ಸ್ಟೆರ್ ಅಭಿಷೇಕ್ ಯಾದವ್ ಅವರು ನೀಡಿರುವ ಮಾಹಿತಿಯ ಪ್ರಕಾರ ಒನ್ಪ್ಲಸ್ ನಾರ್ಡ್ 3 ಫೋನ್ ಎರಡು ಸ್ಟೋರೇಜ್ ವೇರಿಯೆಂಟ್ನಲ್ಲಿ ಅನಾವರಣಗೊಳ್ಳಲಿದೆಯಂತೆ. ಇದರ 8GB RAM + 128GB ಸ್ಟೋರೇಜ್ ಆಯ್ಕೆಗೆ 32,999 ರೂ. ಇದೆ. ಅಂತೆಯೆ 16GB RAM + 256GB ಸ್ಟೋರೇಜ್ ಮಾದರಿಗೆ 36,999 ರೂ. ನಿಗದಿ ಮಾಡಲಾಗಿದೆ ಎಂದು ಹೇಳಿದ್ದಾರೆ. ವಿಶೇಷ ಎಂದರೆ 16GB RAM ಹೊಂದಿರುವ ಮೊಟ್ಟ ಮೊದಲ ಒನ್ಪ್ಲಸ್ ನಾರ್ಡ್ ಸ್ಮಾರ್ಟ್‌ಫೋನ್ (Smartphone) ಇದಾಗಿದೆ.
ಯುರೋಪಿಯನ್ ಮಾರುಕಟ್ಟೆಯಲ್ಲಿ ಒನ್ಪ್ಲಸ್ ನಾರ್ಡ್ 3 ಬೆಲೆ EUR 449 (37,800 ರೂ.) ಮತ್ತು EUR 549 (48,700 ರೂ.) ಆಗಿದೆ. ಈ ಹಿಂದೆ ಬಿಡುಗಡೆ ಆದ ಒನ್ಪ್ಲಸ್ ನಾರ್ಡ್ 2 ಫೋನಿನ ಆರಂಭಿಕ ಬೆಲೆ 27,999 ರೂ. ಈಗ ನಾರ್ಡ್ 3 ಫೋನ್ ಸಾಕಷ್ಟು ಅಭಿವೃದ್ದಿ ಹೊಂದಿ ನೂತನ ಆಯ್ಕೆಗಳೊಂದಿಗೆ ಬರಲಿದೆ. ಈ ಫೋನಿನ ಫೀಚರ್ಸ್ ಕುರಿತ ಕೆಲ ಮಾಹಿತಿ ಕೂಡ ಆನ್ಲೈನಲ್ನಲ್ಲಿ ಸೋರಿಕೆ ಆಗಿದೆ.
Galaxy S20 FE: 74,999 ರೂ. ವಿನ ಗ್ಯಾಲಕ್ಸಿ S20 FE ಫೋನ್ ಈಗ ಕೇವಲ 27,999 ರೂ. ಗೆ ಮಾರಾಟ ಆಗುತ್ತಿದೆ
ಒನ್ಪ್ಲಸ್ ನಾರ್ಡ್ 3 ಫೋನ್ನಲ್ಲಿ 6.7 ಇಂಚಿನ ಅಮೋಲೆಡ್ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಇರುವ ಸಾಧ್ಯತೆ ಇದೆ. ಇದು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಿಂದ ಕೂಡಿದೆಯಂತೆ. ಜೊತೆಗೆ 120Hz ರಿಫ್ರೆಶ್ ರೇಟ್ ಆಯ್ಕೆ ನೀಡಲಾಗಿದೆ. ಬಲಿಷ್ಠವಾದ ಮೀಡಿಯಾಟೆಕ್ ಡೈಮನ್ಸಿಟಿ 900 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8GB RAM + 128GB ಮತ್ತು 16GB RAM + 256GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದೊಂದಿಗೆ ರಿಲೀಸ್ ಆಗಲಿದೆ. ಆಂಡ್ರಾಯ್ಡ್ 13 ಬಂಬಲ ಪಡೆದುಕೊಂಡಿದ್ದು ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಸ್ಟೋರೇಜ್ ಅನ್ನು ಹೆಚ್ಚಿಸಬಹುದು.
ಒನ್ಪ್ಲಸ್ ನಾರ್ಡ್ 3 ಕ್ಯಾಮೆರಾ ವಿಚಾರಕ್ಕೆ ಬಂದರೆ, ಇದರಲ್ಲಿರುವ ಹಿಂಭಾಗದ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸಾಮರ್ಥ್ಯದಲ್ಲಿ ಇರಲಿದೆ. ಇದು ಸೋನಿ ಸೆನ್ಸಾರ್ ಸಾಮರ್ಥ್ಯ ಇರುವ ಸಾಧ್ಯತೆ ಇದೆ. ಹಾಗೆಯೆ 8 ಮೆಗಾಪಿಕ್ಸೆಲ್ನ ಸೆಕೆಂಡರಿ ಕ್ಯಾಮೆರಾ ಅಳವಡಿಸಲಾಗಿದ್ದು 2 ಮೆಗಾಪಿಕ್ಸೆಲ್ನ ಕ್ಯಾಮೆರಾ ಕೂಡ ಇರಲಿದೆ. ಮುಂಭಾಗ ವಿಡಿಯೋ ಕರೆ ಮತ್ತು ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ ಎಂಬ ಮಾತಿದೆ.
ಈ ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 5,000mAh ಬ್ಯಾಟರಿಯನ್ನು ಒಳಗೊಂಡಿರುವುದು ಬಹುತೇಕ ಖಚಿತ. ಇದು ಬರೋಬ್ಬರಿ 80W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದು ವೇಗವಾಗಿ ಚಾರ್ಜ್ ಆಗುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿರುವ ಜೊತೆಗೆ ಹಾಟ್‌ಸ್ಪಾಟ್, ಬ್ಲೂಟೂತ್ 5.1, ವೈಫೈ, ಬಯೋಮೆಟ್ರಿಕ್ ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಇನ್‌ಡಿಸ್‌ಪ್ಲೇ ನಲ್ಲಿ ನೀಡಲಾಗಿದೆಯಂತೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ