Vivo Y36 5G Vs Oppo A78 5G: ವಿವೋ Y36 5G ಮತ್ತು ಒಪ್ಪೋ A78 5G ಸ್ಮಾರ್ಟ್ಫೋನ್ನಲ್ಲಿ ಯಾವುದು ಬೆಸ್ಟ್?: ಇಲ್ಲಿದೆ ಫುಲ್ ಡೀಟೇಲ್ಸ್
ಕಳೆದ ವಾರ ಭಾರತದಲ್ಲಿ ವಿವೋ Y36 5G ಸ್ಮಾರ್ಟ್‌ಫೋನ್ ಬಿಡುಗಡೆ ಆಗಿತ್ತು. ಕೆಳ ತಿಂಗಳ ಹಿಂದೆ ಒಪ್ಪೋ A78 5G ಫೋನ್ ಲಾಂಚ್ ಆಗಿತ್ತು. ಹಾಗಾದರೆ, ಈ ಎರಡು ಸ್ಮಾರ್ಟ್ಫೋನ್ನಲ್ಲಿ ಯಾವುದು ಬೆಸ್ಟ್ ಎಂಬುದನ್ನು ನೋಡೋಣ.
ಚೀನಾ ಮೂಲದ ಪ್ರಸಿದ್ಧ ಟೆಕ್ನಾಲಜಿ ಕಂಪನಿ ವಿವೋ ಕಳೆದ ವಾರ ಭಾರತದಲ್ಲಿ ವಿವೋ Y36 5G (Vivo Y36 5G) ಸ್ಮಾರ್ಟ್ಫೋನನ್ನು (Smartphone) ಬಿಡುಗಡೆ ಮಾಡಿತ್ತು. ಈ ಫೋನ್ ಬಜೆಟ್ ಬೆಲೆಯಿಂದ ಕೂಡಿದ್ದರೂ ಸ್ನಾಪ್‌ಡ್ರಾಗನ್ ಪ್ರೊಸೆಸರ್, 50 ಮೆಗಾ ಪಿಕ್ಸೆಲ್ ಕ್ಯಾಮೆರಾ, ಬಲಿಷ್ಠ ಬ್ಯಾಟರಿ, ಫಾಸ್ಟ್ ಚಾರ್ಜರ್ನಿಂದ ಆವೃತ್ತವಾಗಿದೆ. ಅತ್ತ ಒಪ್ಪೋ ಕಂಪನಿ ಕೂಡ ಇದೇ ಪ್ರೈಸ್ ರೇಂಜ್ನಲ್ಲಿ ಕೆಳ ತಿಂಗಳ ಹಿಂದೆ ಒಪ್ಪೋ A78 5G (Oppo A78 5G) ಫೋನನ್ನು ಲಾಂಚ್ ಮಾಡಿತ್ತು. ಇದರಲ್ಲಿ ಕೂಡ ಮೀಡಿಯಾಟೆಕ್ ಪ್ರೊಸೆಸರ್, ಫಾಸ್ಟ್ ಚಾರ್ಜರ್, ಬಲಿಷ್ಠ ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಕೂಡಿದೆ. ಹಾಗಾದರೆ, ಈ ಎರಡು ಸ್ಮಾರ್ಟ್ಫೋನ್ನಲ್ಲಿ ಯಾವುದು ಬೆಸ್ಟ್ ಎಂಬುದನ್ನು ನೋಡೋಣ.
ವಿವೋ Y36 5G:
- ವಿವೋ Y36 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು 8GB RAM ನೊಂದಿಗೆ ಬರುತ್ತದೆ.
- Y ಸರಣಿಯ ಈ ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.
- 16-ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.
- ಈ ಫೋನ್ 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
- ವಿವೋ Y36 ಬೆಲೆ 16,999 ರೂ. ಆಗಿದೆ. ಇದು ಎರಡು ಬಣ್ಣ ರೂಪಾಂತರಗಳಲ್ಲಿ ಲಭ್ಯವಿದೆ – ಮೆಟಿಯರ್ ಬ್ಲ್ಯಾಕ್ ಮತ್ತು ವೈಬ್ರೆಂಟ್ ಗೋಲ್ಡ್.
- ಈ ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ (ನ್ಯಾನೋ) ಬೆಂಬಲವನ್ನು ಹೊಂದಿದೆ ಮತ್ತು ಆಂಡ್ರಾಯ್ಡ್ 13-ಆಧಾರಿತ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ರನ್ ಆಗುತ್ತದೆ.
- ಡಿಸ್ ಪ್ಲೇ ವಿಚಾರಕ್ಕೆ ಬರುವುದಾದರೆ 6.64-ಇಂಚಿನ ಪೂರ್ಣHD+ (1,080×2,388 ಪಿಕ್ಸೆಲ್‌ಗಳು) LCD ಡಿಸ್ ಪ್ಲೇ ಹೊಂದಿದೆ.
Mobile Camera Cleaning Tips: ಮನೆಯಲ್ಲೇ ಕುಳಿತು ಸ್ಮಾರ್ಟ್‌ಫೋನ್ ಕ್ಯಾಮೆರಾ ಕ್ಲೀನ್ ಮಾಡುವುದು ಹೇಗೆ?
ಇದನ್ನೂ ಓದಿ
ಒಪ್ಪೋ A78 5G:
- ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹೀಲಿಯೊ 700 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ.
- 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು 33W SuperVOOC ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ.
- ಒಪ್ಪೋ A78 5G 8GB RAM + 128GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿದ್ದು, ಇದರ ಬೆಲೆ 18,999 ರೂ. ಆಗಿದೆ.
- ಇದು ಗ್ಲೋಯಿಂಗ್ ಬ್ಲ್ಯಾಕ್ ಮತ್ತು ಗ್ಲೋಯಿಂಗ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಸಿಗುತ್ತದೆ.
- ಒಪ್ಪೋ A78 ಡ್ಯುಯಲ್ ಸಿಮ್ (ನ್ಯಾನೋ) ಬೆಂಬಲವನ್ನು ಹೊಂದಿದೆ ಮತ್ತು ಆಂಡ್ರಾಯ್ಡ್ 13-ಆಧಾರಿತ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ರನ್ ಆಗುತ್ತದೆ.
- ಇದು 6.56-ಇಂಚಿನ HD+ (720×1,1612 ಪಿಕ್ಸೆಲ್‌ಗಳು) IPS LCD ಡಿಸ್ ಪ್ಲೇಯನ್ನು ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ