Mobile Camera Cleaning Tips: ಮನೆಯಲ್ಲೇ ಕುಳಿತು ಸ್ಮಾರ್ಟ್​ಫೋನ್ ಕ್ಯಾಮೆರಾ ಕ್ಲೀನ್ ಮಾಡುವುದು ಹೇಗೆ?

ಅನೇಕ ಜನರು ಫೋನ್ (Phone) ಕ್ಯಾಮೆರಾವನ್ನು ಸ್ವಚ್ಛಗೊಳಿಸದೆ ಹಾಗೆ ಉಪಯೋಗಿಸುತ್ತಾರೆ. ಆದರೆ ನೀವು ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಅದಕ್ಕಾಗಿ ಕೆಲವು ಮಾರ್ಗಗಳನ್ನು ಅನುಸರಿಸಬೇಕು.

Mobile Camera Cleaning Tips: ಮನೆಯಲ್ಲೇ ಕುಳಿತು ಸ್ಮಾರ್ಟ್​ಫೋನ್ ಕ್ಯಾಮೆರಾ ಕ್ಲೀನ್ ಮಾಡುವುದು ಹೇಗೆ?
Smartphone Camera
Follow us
Vinay Bhat
|

Updated on: Jun 25, 2023 | 11:48 AM

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು (Camera) ಹೊಂದಿರುವ ಅನೇಕ ಮೊಬೈಲ್ ಫೋನ್‌ಗಳು ಬಿಡುಗಡೆ ಆಗುತ್ತಿದೆ. ಮೊನ್ನೆಯಷ್ಟೆ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ರಿಯಲ್ ಮಿ 11 ಪ್ರೊ+ ಭಾರತದಲ್ಲಿ ಬಿಡುಗಡೆ ಆಗಿತ್ತು. ಫೋಟೋಗ್ರಫಿ (Photography) ಇಷ್ಟ ಪಡುವವರು ಅಧಿಕ ಮೆಗಾ ಪಿಕ್ಸೆಲ್ ಸಾಮರ್ಥ್ಯ ಇರುವ ಫೋನನ್ನು ಖರೀದಿ ಮಾಡುತ್ತಾರೆ. ಈಗಂತು ಕ್ಯಾಮೆರಾ ಸ್ಮಾರ್ಟ್​ಫೋನ್​ಗಳು ಎಗ್ಗಿಲ್ಲದೆ ಸೇಲ್ ಆಗುತ್ತಿದೆ. ಆದರೆ ಈ ಫೋನಿನ ಕ್ಯಾಮೆರಾವನ್ನು ನೋಡಿಕೊಳ್ಳುವ ಜವಾಬ್ದಾರಿಯೂ ನಿಮ್ಮ ಮೇಲಿರುತ್ತದೆ. ನಿಮ್ಮ ಫೋನ್ ಕ್ಯಾಮರಾ ಸಂಪೂರ್ಣವಾಗಿ ಸ್ವಚ್ಛವಾಗಿದ್ದಾಗ ಮಾತ್ರ ನೀವು ಉತ್ತಮ ಚಿತ್ರಗಳನ್ನು ಸೆರೆ ಹಿಡಿಯಬಹುದು. ಅನೇಕ ಜನರು ಫೋನ್ (Phone) ಕ್ಯಾಮೆರಾವನ್ನು ಸ್ವಚ್ಛಗೊಳಿಸದೆ ಹಾಗೆ ಉಪಯೋಗಿಸುತ್ತಾರೆ. ಆದರೆ ನೀವು ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಅದಕ್ಕಾಗಿ ಕೆಲವು ಮಾರ್ಗಗಳನ್ನು ಅನುಸರಿಸಬೇಕು.

WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಪಿನ್‌ ಮೆಸೇಜ್‌ ಡ್ಯುರೇಷನ್‌ ಫೀಚರ್: ಏನಿದು ನೋಡಿ

ಈ ಸಲಹೆಗಳನ್ನು ಅನುಸರಿಸಿ:

ಇದನ್ನೂ ಓದಿ
Image
Tech Tips: ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿಗಳನ್ನು ಹೈಡ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
Image
Realme GT 2: 40,000 ರೂ. ವಿನ ಈ ಸ್ಮಾರ್ಟ್​ಫೋನ್ ಮೇಲೆ ಶೇ. 40 ರಷ್ಟು ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ
Image
Vivo X90s: ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ: ಬಿಡುಗಡೆಗೆ ಸಿದ್ಧವಾದ ವಿವೋ X90s ಸ್ಮಾರ್ಟ್​ಫೋನ್
Image
AC Gas Leak: ಎಸಿ ಹಾಳಾಗಿದೆ ಎಂದು ಮೆಕ್ಯಾನಿಕ್ ಕರೆಯುವ ಮುನ್ನ ಈ ಅಂಶಗಳನ್ನು ನೆನಪಿನಲ್ಲಿಡಿ
  • ಕ್ಯಾಮೆರಾವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂಬ ಮೊದಲು ನಿಮ್ಮ ಸ್ಮಾರ್ಟ್​ಫೋನ್ ಅನ್ನು ಚೆನ್ನಾಗಿ ಬಳಸಬೇಕು. ಅಂದರೆ ಮನೆ ಅಥವಾ ಕಚೇರಿಯಲ್ಲಿ ಫೋನ್ ಅನ್ನು ಸ್ವಚ್ಛವಾದ ಸ್ಥಳದಲ್ಲಿ ಇರಿಸಿ. ಆದಷ್ಟು ಧೂಳು ಬರುವ ಜಾಗದಲ್ಲಿ ಇಡಬೇಡಿ. ಹೀಗೆ ಮಾಡುವುದರಿಂದ ಫೋನ್ ಕ್ಯಾಮೆರಾವನ್ನು ಸ್ವಚ್ಛವಾಗಿರಿಸಬಹುದು.
  • ಸ್ಮಾರ್ಟ್​ಫೋನ್ ಕ್ಯಾಮೆರಾವನ್ನು ಸ್ವಚ್ಛಗೊಳಿಸುವಾಗ ಫೋನ್ ಅನ್ನು ಸ್ವಿಚ್ ಆಫ್ ಮಾಡಿ. ಸ್ವಚ್ಛಗೊಳಿಸಲು ಮೃದುವಾದ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿದರೆ ಉತ್ತಮ. ಒರಟಾದ ಬಟ್ಟೆಯಿಂದ ಕ್ಯಾಮೆರಾವನ್ನು ಸ್ವಚ್ಛಗೊಳಿಸಬೇಡಿ. ಇದು ಕ್ಯಾಮೆರಾ ಗ್ಲಾಸ್‌ ಮೇಲೆ ಕಲೆ ಬೀಳುವಂತೆ ಮಾಡುತ್ತದೆ.
  • ನೀವು ಲೆನ್ಸ್ ಕ್ಲೀನರ್ ಅನ್ನು ಸಹ ಬಳಸಬಹುದು. ಇದರಿಂದ ಕ್ಯಾಮೆರಾ, ಎಲ್‌ಇಡಿ ಲೈಟ್‌ಗಳು, ಸೆನ್ಸರ್‌ಗಳನ್ನು ಸ್ವಚ್ಛಗೊಳಿಸಬಹುದು. ಇದರಿಂದ ಫೋಟೋ ಅದ್ಭುತವಾಗಿ ಬರುತ್ತದೆ. ನೀವು ಈ ಲೆನ್ಸ್ ಕ್ಲೀನರ್ ಅನ್ನು ಆನ್‌ಲೈನ್‌ನಲ್ಲಿಯೂ ಖರೀದಿಸಬಹುದು.
  • ಲೆನ್ಸ್ ಕ್ಲೀನರ್ ಅನ್ನು ಎಂದಿಗೂ ನೇರವಾಗಿ ಕ್ಯಾಮೆರಾಗೆ ಅನ್ವಯಿಸಬೇಡಿ, ಇದು ಕ್ಯಾಮರಾ ಮತ್ತು ಫೋನ್ ಅನ್ನು ಹಾನಿಗೊಳಿಸಬಹುದು. ಅಲ್ಲದೆ, ಕ್ಯಾಮೆರಾವನ್ನು ಸ್ವಚ್ಛಗೊಳಿಸುವಾಗ, ನಿಮ್ಮ ಕೈಗಳಿಂದ ಹೆಚ್ಚು ಒತ್ತಡವನ್ನು ಹಾಕಬೇಡಿ. ಬಟ್ಟೆ ಇಲ್ಲದೆ ಕ್ಯಾಮೆರಾವನ್ನು ಮುಟ್ಟಬೇಡಿ.
  • ಸ್ಮಾರ್ಟ್​ಫೋನ್ ಕ್ಯಾಮೆರಾವನ್ನು ಸ್ವಚ್ಛಗೊಳಿಸುವಾಗ ನೀರನ್ನು ಮಿತವಾಗಿ ಬಳಸಬೇಕು. ಎಲ್ಲಾದರು ಫೋನ್ ಒಳಗೆ ನೀರು ಹೋದರೆ ಮದರ್ ಬೋರ್ಡ್ ಹಾಳಾಗಬಹುದು. ಅಲ್ಲದೆ, ಕ್ಯಾಮೆರಾವನ್ನು ಒದ್ದೆಯಾದ ಬಟ್ಟೆಯಿಂದ ಸ್ವಚ್ಛಗೊಳಿಸಬಾರದು.
  • ಗಟ್ಟಿಯಾದ ಬ್ರಷ್‌ನಿಂದ ಕ್ಯಾಮೆರಾವನ್ನು ಸ್ವಚ್ಛಗೊಳಿಸಬೇಡಿ. ಹೆಚ್ಚಿನ ಜನರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಸ್ವಚ್ಛಗೊಳಿಸಲು ಬ್ರಷ್ ಅನ್ನು ಬಳಸುತ್ತಾರೆ. ಅದು ಮೃದುವಾಗಿದ್ದರೆ ತೊಂದರೆ ಇಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ