Vivo X90s: ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ: ಬಿಡುಗಡೆಗೆ ಸಿದ್ಧವಾದ ವಿವೋ X90s ಸ್ಮಾರ್ಟ್​ಫೋನ್

ಲೀಕ್ ಆಗಿರುವ ಮಾಹಿತಿಯ ಪ್ರಕಾರ, ವಿವೋ X90s ಸ್ಮಾರ್ಟ್​ಫೋನ್ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಳ್ಳಲಿದೆಯಂತೆ. ಇದು UFS 4.0 ಸ್ಟೋರೇಜ್ ಮೂಲಕ ಬರಲಿದೆ.

Vivo X90s: ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ: ಬಿಡುಗಡೆಗೆ ಸಿದ್ಧವಾದ ವಿವೋ X90s ಸ್ಮಾರ್ಟ್​ಫೋನ್
Vivo X90s
Follow us
|

Updated on:Jun 24, 2023 | 12:40 PM

ವಿವೋ (Vivo) ಕಂಪನಿಯ ಸ್ಮಾರ್ಟ್​ಫೋನ್​ಗಳಿಗೆ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನಮಾನವಿದೆ. ಈ ಕಂಪನಿ ಮೊಬೈಲ್ ಬಿಡುಗಡೆ ಆದರೆ ಅದು ಎಗ್ಗಿಲ್ಲದೆ ಸೇಲ್ ಆಗುತ್ತದೆ. ಬಜೆಟ್ ಬೆಲೆಯಿಂದ ಹಿಡಿದು ಹೈ-ರೇಂಜ್ ಮಾದರಿಯ ವರೆಗೆ ಫೋನ್​ಗಳನ್ನು ಅನಾವರಣ ಮಾಡುವ ಕಂಪನಿ ಇದೀಗ ನೂತನ ಸ್ಮಾರ್ಟ್​ಫೋನ್ (Smartphone)​ ಮೂಲಕ ಮತ್ತೆ ಬರಲು ಸಜ್ಜಾಗಿದೆ. ವಿವೋ ಕಂಪನಿಯ ವಿವೋ X90s (Vivo X90s) ಫೋನ್ ಮುಂದಿನ ವಾರ ಮಾರುಕಟ್ಟೆಗೆ ಅಪ್ಪಳಿಸಲಿದೆ. ಹೀಗಿರುವಾಗ ಥರ್ಡ್ ಪಾರ್ಟಿ ರಿಟೇಲರ್​ನಿಂದ ಈ ಫೋನಿನ ಸ್ಟೋರೇಜ್ ಆಯ್ಕೆ ಸೋರಿಕೆ ಆಗಿದೆ.

ಲೀಕ್ ಆಗಿರುವ ಮಾಹಿತಿಯ ಪ್ರಕಾರ, ವಿವೋ X90s ಸ್ಮಾರ್ಟ್​ಫೋನ್ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಳ್ಳಲಿದೆಯಂತೆ. ಇದು UFS 4.0 ಸ್ಟೋರೇಜ್ ಮೂಲಕ ಬರಲಿದೆ. 8GB RAM+256GB ಸ್ಟೋರೇಜ್, 12GB RAM+256GB ಸ್ಟೋರೇಜ್ ಮತ್ತು 12GB RAM+512GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಲಿದೆ. ಅಂತೆಯೆ ಈ ಫೋನ್ ಕಪ್ಪು, ಕೆಂಪು, ಬಿಳಿ ಮತ್ತು ಹಸಿರು ಶೇಡ್​ಗಳ ಕಲರ್​ನಲ್ಲಿ ಖರೀದಿಗೆ ಸಿಗಲಿದೆಯಂತೆ.

Best Smartphones: ₹15,000 ಬಜೆಟ್​ಗೆ ಬೆಸ್ಟ್ ಸ್ಮಾರ್ಟ್​ಫೋನ್ ಯಾವುದು ಗೊತ್ತಾ?

ಇದನ್ನೂ ಓದಿ
Image
AC Gas Leak: ಎಸಿ ಹಾಳಾಗಿದೆ ಎಂದು ಮೆಕ್ಯಾನಿಕ್ ಕರೆಯುವ ಮುನ್ನ ಈ ಅಂಶಗಳನ್ನು ನೆನಪಿನಲ್ಲಿಡಿ
Image
WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಪಿನ್‌ ಮೆಸೇಜ್‌ ಡ್ಯುರೇಷನ್‌ ಫೀಚರ್: ಏನಿದು ನೋಡಿ
Image
Asus Zenfone 10: ತಯಾರಾಗಿ: ಬರುತ್ತಿದೆ 200MP ಕ್ಯಾಮೆರಾದ ಮತ್ತೊಂದು ಸ್ಮಾರ್ಟ್​ಫೋನ್
Image
Boult Crown R Pro: ಪ್ರೀಮಿಯಂ ಲುಕಿಂಗ್ ಮತ್ತು ಸೂಪರ್ ಫೀಚರ್ಸ್ ಬೋಲ್ಟ್ ಸ್ಮಾರ್ಟ್​ವಾಚ್

ವಿವೋ X90s ಸ್ಮಾರ್ಟ್​ಫೋನ್​ಗೆ ಬಲಿಷ್ಠವಾದ ಪ್ರೊಸೆಸರ್ ಅಳವಡಿಸಲಾಗಿದೆ. ಇದು ಮೀಡಿಯಾಟೆಕ್ ಡೈಮನ್ಸಿಟಿ 9200+ ಪ್ರೊಸೆಸರ್ ಆಗಿದೆ. ಈ ಫೋನ್​ನಲ್ಲಿ 1260 x 2800 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ AMOLED ಡಿಸ್‌ಪ್ಲೇ ನೀಡಲಾಗಿದ್ದು, ಇದರ ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆ 453 ppi ಆಗಿದೆ ಎಂದು ಹೇಳಲಾಗಿದೆ.

ಈ ಫೋನಿನ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆಯನ್ನು ನೀಡಿರುವುದು ಖಚಿತವಾಗಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಿಂದ ಕೂಡಿದೆ. ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳೆರಡೂ 12 ಮೆಗಾ ಪಿಕ್ಸಲ್‌ ಸಾಮರ್ಥ್ಯದಲ್ಲಿದೆ. ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ ಎಷ್ಟು ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ ಎಂಬುದು ಬಹಿರಂಗವಾಗಿಲ್ಲ.

ಇನ್ನು ಬ್ಯಾಟರಿ ವಿಚಾರಕ್ಕೆ ಬರುವುದಾದರೆ, ವಿವೋ X90S ಫೋನ್‌ 4700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 100W ವೇಗದ ಚಾರ್ಜಿಂಗ್ ಸೌಲಭ್ಯ ನೀಡಬಹುದು. ಈಫೋನ್ 5ಜಿ ಸಪೋರ್ಟ್ ಮಾಡುತ್ತದೆ. ಉಳಿದಂತೆ ವೈ ಫೈ, ಡ್ಯುಯಲ್‌ ಸಿಮ್‌, ಫಿಂಗರ್‌ಪ್ರಿಂಟ್ ಸೆನ್ಸಾರ್, ಯುಎಸ್‌ಬಿ ಟೈಪ್‌-ಸಿ ಪೋರ್ಟ್ ಸೇರಿದಂತೆ ಇತ್ತೀಚಿನ ಎಲ್ಲ ಆಯ್ಕೆ ಇದೆ. ವಿವೋ X90S ಸ್ಮಾರ್ಟ್​ಫೋನ್ ಇದೇ ಜೂನ್ 26 ರಂದು ಬಿಡುಗಡೆ ಆಗಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:39 pm, Sat, 24 June 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ