WhatsApp New Feature: ವಾಟ್ಸ್ಆ್ಯಪ್ನಲ್ಲಿ ಬರುತ್ತಿದೆ ಪಿನ್ ಮೆಸೇಜ್ ಡ್ಯುರೇಷನ್ ಫೀಚರ್: ಏನಿದು ನೋಡಿ
WhatsApp Update: ವಾಟ್ಸ್ಆ್ಯಪ್ನಲ್ಲಿ ನೀವು ನಿರ್ಧಿಷ್ಟ ಸಮಯದ ವರೆಗೆ ಒಂದು ಮೆಸೇಜ್ ಅನ್ನು ಪಿನ್ ಮಾಡಿಟ್ಟರೆ ಆ ಸಮಯದ ಬಳಿಕ ಅದು ಅಟೋಮೆಟಿಕ್ ಆಗಿ ಅನ್ಪಿನ್ ಆಗುತ್ತದೆ.
ಮೆಟಾ (Meta) ಸಂಸ್ಥೆಯ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ದಿನಕ್ಕೊಂದು ಫೀಚರ್ ಅನ್ನು ಅಭಿವೃದ್ದಿ ಪಡಿಸುತ್ತಿದೆ. ವಾರಕ್ಕೊಂದು ಹೊಸ ಅಪ್ಡೇಟ್ ಬಗ್ಗೆ ಘೋಷಣೆ ಮಾಡುವ ಕಂಪನಿ ಇದೀಗ ಬಳಕೆದಾರರಿಗೆ ಉಪಯುಕ್ತವಾದ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ವಾಟ್ಸ್ಆ್ಯಪ್ (WhatsApp) ಸದ್ಯ ತನ್ನ ಆಂಡ್ರಾಯ್ಡ್ ಬೇಟಾದಲ್ಲಿ ಪಿನ್ ಮೆಸೇಜ್ ಡ್ಯುರೇಷನ್ ಎಂಬ ನೂತನ ಆಯ್ಕೆಯನ್ನು ತರಲು ಮುಂದಾಗಿದೆ. ಈ ಆಯ್ಕೆಯ ಮೂಲಕ ಬಳಕೆದಾರರು ವಾಟ್ಸ್ಆ್ಯಪ್ನಲ್ಲಿರುವ ಚಾಟ್‌ಗಳು ಮತ್ತು ಗ್ರೂಪ್ಗಳಲ್ಲಿರುವ ಮೆಸೇಜ್ (Message) ಅನ್ನು ಎಷ್ಟು ಗಂಟೆಯ ವರೆಗೆ ಪಿನ್ ಆಗಿರಬೇಕು ಎಂಬುದನ್ನು ಆಯ್ಕೆ ಮಾಡಬಹುದು.
ನೀವು ನಿರ್ಧಿಷ್ಟ ಸಮಯದ ವರೆಗೆ ಒಂದು ಮೆಸೇಜ್ ಅನ್ನು ಪಿನ್ ಮಾಡಿಟ್ಟರೆ ಆ ಸಮಯದ ಬಳಿಕ ಅದು ಅಟೋಮೆಟಿಕ್ ಆಗಿ ಅನ್ಪಿನ್ ಆಗುತ್ತದೆ. ಮೂಲಗಳ ಪ್ರಕಾರ ವಾಟ್ಸ್ಆ್ಯಪ್ ಒಟ್ಟು ಮೂರು ಆವೃತ್ತಿಯ ಸಮಯವನ್ನು ನಿಗದಿ ಮಾಡಿದೆಯಂತೆ. 24 ಗಂಟೆ, ಏಳು ದಿನ ಮತ್ತು 30 ದಿನಗಳ ವರೆಗೆ ಒಂದು ಮೆಸೇಜ್ ಅನ್ನು ನೀವು ಪಿನ್ ಮಾಡಿಡಬಹುದು. ಅಂತೆಯೆ ಅನಗತ್ಯ ಎನಿಸಿದರೆ ನಿಗದಿತ ಸಮಯದ ಒಳಗೆ ಬಳಕೆದಾರ ಅದನ್ನು ಅನ್ಪಿನ್ ಮಾಡಬಹುದು.
Tech Tips: ವಾಟ್ಸ್ಆ್ಯಪ್ ಉಪಯೋಗಿಸಲು ಮೊಬೈಲ್ ನಂಬರ್ ಬೇಡ: ಅರೇ… ಇದು ಹೇಗೆ ಸಾಧ್ಯ ಗೊತ್ತೇ?
ಸ್ಕ್ಯಾಮ್ ಕರೆಗಳ ಕಿರಿ ಕಿರಿ ತಪ್ಪಿಸಿ:
ಬಳಕೆದಾರರ ಪ್ರೈವಸಿ ವಿಚಾರದಲ್ಲಿ ಕಟ್ಟುನಿಟ್ಟಾಗಿರುವ ವಾಟ್ಸ್ಆ್ಯಪ್ ಮೊನ್ನೆಯಷ್ಟೆ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಯನ್ನು ಮ್ಯೂಟ್ ಮಾಡುವಂತಹ ಸೌಲಭ್ಯ ಕಲ್ಪಿಸಿದೆ. ಈ ಆಯ್ಕೆ ಮೂಲಕ ವಾಟ್ಸ್ಆ್ಯಪ್ ಮೂಲಕ ಬರುವ ಅಪರಿಚಿತ ಕರೆಗಳನ್ನು ಸೈಲೆಂಟ್ ಮಾಡಬಹುದು. ಇದಕ್ಕಾಗಿ ನೀವು ವಾಟ್ಸ್ಆ್ಯಪ್ನಲ್ಲಿ ಸೆಟ್ಟಿಂಗ್ಗೆ ತೆರಳಿ ಪ್ರೈವೇಸಿ ಮೆನು ಕ್ಲಿಕ್ ಮಾಡಬೇಕು. ಇಲ್ಲಿ ಕರೆ ಆಯ್ಕೆಯನ್ನು ಆರಿಸಿ ಸೈಲೆನ್ಸ್ ಅನ್ನೌನ್ ಕಾಲರ್ಸ್ ಸೆಲೆಕ್ಟ್ ಮಾಡಿದರೆ ಆಯಿತು. ಯಾರ ಕರೆ ಬಂದಿದೆ ಎಂದು ನೋಡಲು ಕಾಲ್ ಲಿಸ್ಟ್ನಲ್ಲಿ ಮಾಹಿತಿ ಇರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ