WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಹೊಸ ಅಪ್ಡೇಟ್ ಬಂದಿದೆ: ಸ್ಕ್ಯಾಮ್ ಕರೆಗಳ ಕಿರಿ ಕಿರಿ ತಪ್ಪಿಸಲು ಹೀಗೆ ಮಾಡಿ

ವಾಟ್ಸ್​ಆ್ಯಪ್ ಇದೀಗ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಯನ್ನು ಮ್ಯೂಟ್‌ ಮಾಡುವ ಸೌಲಭ್ಯವನ್ನು ನೀಡಿದೆ. ಇದರ ಮೂಲಕ ನಿಮ್ಮ ಫೋನ್‌ಗಳಿಗೆ ವಾಟ್ಸ್​ಆ್ಯಪ್ ಮೂಲಕ ಬರುವ ಅಪರಿಚಿತ ಕರೆಗಳನ್ನು ಸೈಲೆನ್ಸ್‌ ಮಾಡಬಹುದು.

WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಹೊಸ ಅಪ್ಡೇಟ್ ಬಂದಿದೆ: ಸ್ಕ್ಯಾಮ್ ಕರೆಗಳ ಕಿರಿ ಕಿರಿ ತಪ್ಪಿಸಲು ಹೀಗೆ ಮಾಡಿ
WhatsApp Spam Call
Follow us
Vinay Bhat
|

Updated on:Jun 20, 2023 | 3:31 PM

ಇಂದಿನ ದಿನಗಳಲ್ಲಿ ಜನರಿಗೆ ಕಿರಿ ಕಿರಿ ಉಂಟುಮಾಡುವಂತಹ ಸ್ಪ್ಯಾಮ್ (Spam) ಮತ್ತು ಸ್ಕ್ಯಾಮ್ (Scam) ಕರೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸುಳ್ಳು ಕರೆಗಳನ್ನು ಅಥವಾ ಎಸ್​ಎಮ್​ಎಸ್​ಗಳನ್ನು ನಂಬಿ ಇದರಿಂದ ಹಣ ಕಳೆದುಕೊಂಡವರು ಅನೇಕರಿದ್ದಾರೆ. ಈರೀತಿಯ ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿದೆ. ಕೇವಲ ಮೊಬೈಲ್ ಸಂಖ್ಯೆಗೆ ಮಾತ್ರವಲ್ಲದೆ ಈಗೀಗ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್​ನಲ್ಲೂ ಸ್ಕ್ಯಾಮ್ ಕರೆಗಳು ಬರುತ್ತಿದೆ. ವರ್ಕ್ ಫ್ರಮ್ ಹೋಮ್​ನಿಂದ ಲಕ್ಷ, ಲಕ್ಷ ಗಳಿಸಿ, ಉಚಿತ ಇಂಟರ್ನೆಟ್ ಸಂಪರ್ಕ ಸೇರಿದಂತೆ ಹಲವು ಸುಳ್ಳು ಮೆಸೇಜ್, ಕಾಲ್​ಗಳು ವಾಟ್ಸ್​ಆ್ಯಪ್​ನಲ್ಲಿ (WhatsApp) ಹರಿದಾಡುತ್ತಿದೆ. ಆದರೀಗ ಮೆಟಾ ಇದನ್ನು ತಡೆಯಲು ಹೊಸ ಫೀಚರ್ ಬಿಡುಗಡೆ ಮಾಡಿದೆ. ಬಳಕೆದಾರರ ಪ್ರೈವಸಿ ವಿಚಾರದಲ್ಲಿ ಕಟ್ಟುನಿಟ್ಟಾಗಿರುವ ವಾಟ್ಸ್​ಆ್ಯಪ್ ಉಪಯುಕ್ತವಾದ ಆಯ್ಕೆಯೊಂದನ್ನು ನೀಡಿದೆ.

ವಾಟ್ಸ್​ಆ್ಯಪ್ ಇದೀಗ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಯನ್ನು ಮ್ಯೂಟ್‌ ಮಾಡುವ ಸೌಲಭ್ಯವನ್ನು ನೀಡಿದೆ. ಇದರ ಮೂಲಕ ನಿಮ್ಮ ಫೋನ್‌ಗಳಿಗೆ ವಾಟ್ಸ್​ಆ್ಯಪ್ ಮೂಲಕ ಬರುವ ಅಪರಿಚಿತ ಕರೆಗಳನ್ನು ಸೈಲೆನ್ಸ್‌ ಮಾಡಬಹುದು. ಇದಕ್ಕಾಗಿ ನೀವು ವಾಟ್ಸ್​ಆ್ಯಪ್​ನಲ್ಲಿ ಸೆಟ್ಟಿಂಗ್‌> ಪ್ರೈವೇಸಿ ಮೆನುಗೆ ಹೋಗಿ ಕ್ಲಿಕ್‌ ಮಾಡಬೇಕು. ಇಲ್ಲಿ ಕರೆ ಆಯ್ಕೆಯನ್ನು ಆರಿಸಿ ಸೈಲೆನ್ಸ್ ಅನ್​ನೌನ್ ಕಾಲರ್ಸ್ ಸೆಲೆಕ್ಟ್ ಮಾಡಿದರೆ ಆಯಿತು. ಆದರೆ, ಕಾಲ್ ಲಿಸ್ಟ್​ನಲ್ಲಿ ಕರೆಬಂದ ಬಗ್ಗೆ ಮಾಹಿತಿ ಇರುತ್ತದೆ.

HP Chromebook: ಎಚ್​ಪಿ ಕ್ರೋಮ್​ಬುಕ್ ಅನ್​ಬಾಕ್ಸಿಂಗ್ – ಗ್ಯಾಜೆಟ್ ರಿವ್ಯೂ | Gadget Review | Unboxing

ಇದನ್ನೂ ಓದಿ
Image
Galaxy F54 5G: 108MP ಕ್ಯಾಮೆರಾ, 6000mAh ಬ್ಯಾಟರಿ: ಭಾರತದಲ್ಲೀಗ ಖರೀದಿಗೆ ಸಿಗುತ್ತಿದೆ ಗ್ಯಾಲಕ್ಸಿ F54 5G ಸ್ಮಾರ್ಟ್​ಫೋನ್
Image
ನಿಮ್ಮ ಫೋನ್ ಕಂಪನಿ SMS, ಕರೆ ಮತ್ತು ಇತರ ಡೇಟಾವನ್ನು ಕದಿಯುತ್ತಿದೆ?: ನಿಷ್ಕ್ರಿಯಗೊಳಿಸುವುದು ಹೇಗೆ?
Image
Redmi A2: ಬೆಲೆ ಕೇವಲ 7,499 ರೂ.: ಇಂದಿನಿಂದ ರೆಡ್ಮಿ A2 ಫೋನ್ ಹೊಸ ವೇರಿಯಂಟ್​ನಲ್ಲಿ ಲಭ್ಯ
Image
Realme 11 Pro 5G: ₹23,999ಕ್ಕೆ ದೊರೆಯುತ್ತಿದೆ 100 MP ಕ್ಯಾಮೆರಾ ರಿಯಲ್​ಮಿ ಫೋನ್

ಒಂದೇ ಸ್ಮಾರ್ಟ್​ಫೋನ್​ನಲ್ಲಿ ಎರಡು ಅಕೌಂಟ್:

ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ಒಂದೇ ಅಪ್ಲಿಕೇಶನ್‌ನಲ್ಲಿ ಎರಡು ಪ್ರತ್ಯೇಕ ವಾಟ್ಸ್​ಆ್ಯಪ್​ ಖಾತೆಗಳನ್ನು ತೆರೆಯುವ ಆಯ್ಕೆ ನೀಡುತ್ತಿದೆ. ಅಂದರೆ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಎರಡು ಸಿಮ್​ಗಳಿದ್ದರೆ ಈ ಎರಡೂ ಸಿಮ್​ಗೆ ಒಂದೇ ಮೊಬೈಲ್​ನಲ್ಲಿ ಎರಡು ವಾಟ್ಸ್​ಆ್ಯಪ್​ ಅಕೌಂಟ್ ತೆರೆಯಬಹುದು. ಸದ್ಯ ವಾಟ್ಸ್​ಆ್ಯಪ್​ ಈ ಫೀಚರ್ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗುವ ನಿರೀಕ್ಷೆ ಇದೆ.

ವಾಟ್ಸ್​ಆ್ಯಪ್ ಪರಿಚಯಿಸಲಿರುವ ಈ ಹೊಸ ಆಯ್ಕೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮುಖ್ಯ ಡಿವೈಸ್‌ಗೆ ಲಿಂಕ್ ಮಾಡಲಾದ ಕಂಪ್ಯಾನಿಯನ್ ಡಿವೈಸ್‌ಗಳಲ್ಲಿ ಅವರು ಡ್ಯುಯಲ್ ಖಾತೆಗಳನ್ನು ಬಳಸಲು ಸಾಧ್ಯವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನೂತನ ಫೀಚರ್ ವಾಟ್ಸ್​ಆ್ಯಪ್​ ಅಪ್ಲಿಕೇಶನ್‌ನ ಬಿಸಿನೆಸ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾನ್ಯ ಆವೃತ್ತಿಗೆ ಸಹ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Tue, 20 June 23