ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಭಿನ್ನ ಪ್ರಕಾರಗಳ ಫೋನುಗಳನ್ನು ಬಿಡುಗಡೆ ಮಾಡಿ ಸೈ ಎನಿಸಿಕೊಂಡಿರುವ ಪ್ರಸಿದ್ಧ ಒಪ್ಪೋ ಕಂಪೆನಿ ಸದ್ಯ ಹೊಸ ಒಪ್ಪೋ A16 (Oppo A16) ಮೊಬೈಲ್ ಅನ್ನು ಅನವಾರಣ ಮಾಡಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಮಾತ್ರವಲ್ಲದೆ ಆಕರ್ಷಕ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್‌ಫೋನ್ ಕಡಿಮೆ ಬೆಲೆಯದ್ದಾಗಿದ್ದು ಇಂಡೋನೇಷ್ಯಾದಲ್ಲಿ ಲಾಂಚ್ ಮಾಡಲಾಗಿದೆ. ಸದ್ಯದಲ್ಲೇ ಭಾರತಕ್ಕೂ ಈ ಫೋನ್ ಕಾಲಿಡಲಿದೆ ಎನ್ನಲಾಗಿದೆ.
ಒಪ್ಪೋ A16 ಸ್ಮಾರ್ಟ್‌ಫೋನ್ ಸದ್ಯಕ್ಕೆ ಕೇವಲ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. 3GB RAM + 32GB ಶೇಖರಣಾ ಮಾದರಿಗೆ ಐಡಿಆರ್ 1,999,000 ಅಂದರೆ ಭಾರತದಲ್ಲಿ ಸರಿಸುಮಾರು 10,300 ರೂ. ಆಗಿದೆ.
ಒಪ್ಪೋ A16 ಸ್ಮಾರ್ಟ್‌ಫೋನ್ 720×1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.52-ಇಂಚಿನ HD + ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಹಿಲಿಯೊ G35SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಆಧಾರಿತ ಕಲರ್ಓಎಸ್ 11.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. 3GB RAM ಮತ್ತು 32GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾದ ಆಯ್ಕೆಯನ್ನು ಹೊಂದಿದೆ.
ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ಮೂರನೆ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಒಪ್ಪೋ A16 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ ವಿ 5, ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.
Crop Survey: ಕ್ರಾಪ್ ಸರ್ವೆ ಅಪ್ಲಿಕೇಷನ್ ಬಳಸಿ ಮೊಬೈಲ್ ಮೂಲಕವೇ ಬೆಳೆ ಸಮೀಕ್ಷೆ ಮಾಡಲು ಅವಕಾಶ; ಇಲ್ಲಿದೆ ವಿವರ
ಆನ್ಲೈನ್ ಬ್ಯಾಂಕಿಂಗ್ ಬಳಸುತ್ತೀರಾ?; ಮೊಬೈಲ್ ಕಳೆದುಹೋದ ಕೂಡಲೇ ಈ ರೀತಿ ಮಾಡದಿದ್ದರೆ ಪಂಗನಾಮ ಗ್ಯಾರಂಟಿ!
(Oppo A16 With low price MediaTek Helio G35 SoC Triple Rear Cameras Launched)