Kannada News Technology Oppo has quietly launched Oppo A17k in India which is a more affordable version of Oppo A17
Oppo A17K: ಬಜೆಟ್ ಪ್ರಿಯರು ಫುಲ್ ಫಿದಾ: ಒಪ್ಪೋದಿಂದ ಕೇವಲ 10,499 ರೂ. ಗೆ ಆಕರ್ಷಕ ಫೋನ್ ಬಿಡುಗಡೆ
ಕಳೆದ ತಿಂಗಳು ತನ್ನ A ಸರಣಿಯಲ್ಲಿ ಹೊಸ ಒಪ್ಪೋ ಎ17 (Oppo A17) ಫೋನನ್ನು ರಿಲೀಸ್ ಮಾಡಿದ್ದ ಕಂಪನಿ ಇದೀಗ ಇದರ ಮುಂದುವರೆದ ಭಾಗವಾಗಿ ಎ17ಕೆ (Oppo A17K) ಎಂಬ ಮತ್ತೊಂದು ಸ್ಮಾರ್ಟ್ಫೋನನ್ನು ಲಾಂಚ್ ಮಾಡಿದೆ.
ಕಳೆದ ಕೆಲವು ತಿಂಗಳುಗಳಿಂದ ಚೀನಾ ಮೂಲದ ಒಪ್ಪೋಸಂಸ್ಥೆ ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಹೆಚ್ಚು ಬಜೆಟ್ ಬೆಲೆಗೆ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿಯ ಫೋನನ್ನು ಅನಾವರಣ ಮಾಡುತ್ತಿರುವ ಒಪ್ಪೋ ಅದೇ ಮಾದರಿಯ ಫೋನ್ನೊಂದಿಗೆ ಮತ್ತೆ ಬಂದಿದೆ. ಕಳೆದ ತಿಂಗಳು ತನ್ನ A ಸರಣಿಯಲ್ಲಿ ಹೊಸ ಒಪ್ಪೋ ಎ17 (Oppo A17) ಫೋನನ್ನು ರಿಲೀಸ್ ಮಾಡಿದ್ದ ಕಂಪನಿ ಇದೀಗ ಇದರ ಮುಂದುವರೆದ ಭಾಗವಾಗಿ ಎ17ಕೆ (Oppo A17K) ಎಂಬ ಮತ್ತೊಂದು ಸ್ಮಾರ್ಟ್ಫೋನನ್ನು ಲಾಂಚ್ ಮಾಡಿದೆ. ಇದುಕೂಡ ಬಜೆಟ್ ಬೆಲೆಯ ಫೋನಾಗಿದ್ದು, ಆಕರ್ಷಕ ವಿನ್ಯಾಸ, ಉತ್ತಮ ಬ್ಯಾಟರಿ, ಕ್ಯಾಮೆರಾಗಳನ್ನು (Camera) ಹೊಂದಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.
ಒಪ್ಪೋ A17K ಸ್ಮಾರ್ಟ್‌ಫೋನ್ ಭಾರತದಲ್ಲಿ ಸದ್ಯಕ್ಕೆ ಒಂದು ಮಾದರಿಯಲ್ಲಿ ಬಿಡುಗಡೆ ಆಗಿದೆ. ಇದರ 3GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ 10,499 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಕಪ್ಪು ಮತ್ತು ಗೋಲ್ಡ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.
ಈ ಸ್ಮಾರ್ಟ್‌ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್ LCD ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ನಿಂದ ಕೂಡಿದೆ.
ಇದನ್ನೂ ಓದಿ
Flipkart Big Diwali sale: ಇಂದಿನಿಂದ ಫ್ಲಿಪ್ಕಾರ್ಟ್ನಲ್ಲಿ ಬಿಗ್ ದಿವಾಳಿ ಸೇಲ್: ಸ್ಮಾರ್ಟ್ಫೋನ್ಗಳ ಮೇಲೆ ಧಮಾಕ ಆಫರ್
Google Pixel 7: ಇಂದು ಗೂಗಲ್ ಪಿಕ್ಸೆಲ್ 7, 7 ಪ್ರೊ ಖರೀದಿಗೆ ಲಭ್ಯ: ಸೋಲ್ಡ್ ಔಟ್ ಆಗುವ ಮುನ್ನ ಬುಕ್ ಮಾಡಿ
Tech Tips: ಇನ್ಸ್ಟಾಗ್ರಾಮ್ನಲ್ಲಿ ಫೋಟೋ, ರೀಲ್ಸ್ ಎಷ್ಟು ಗಂಟೆಗೆ ಹಾಕಿದರೆ ಹೆಚ್ಚು ಲೈಕ್ಸ್ ಬರುತ್ತೆ?: ಇಲ್ಲಿದೆ ನೋಡಿ
Big Diwali sale: ಫ್ಲಿಪ್ಕಾರ್ಟ್ ಬಿಗ್ ದಿವಾಳಿ ಸೇಲ್: ಐಫೋನ್ 13, ಐಫೋನ್ 12 ಮಿನಿ ಅತಿ ಕಡಿಮೆ ಬೆಲೆಗೆ ಲಭ್ಯ
ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲವನ್ನು ಪಡೆದಿದೆ. ಹಾಗೆಯೇ 6GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ.
ಒಪ್ಪೋ A17 ಸ್ಮಾರ್ಟ್‌ಫೋನ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ.
ವಿಡಿಯೋ ಕರೆಗಳು ಹಾಗೂ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ನೈಟ್ ಮೋಡ್, ಟೈಮ್ ಲಾಪ್ಸ್, ಎಕ್ಸಪರ್ಟ್, ಪನೋರಮಾ ಮತ್ತು ಗೂಗಲ್ ಲೆನ್ಸ್ ಇದೆ.
ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಸೂಪರ್ ಪವರ್ ಸೇವಿಂಗ್ ಮೋಡ್ ಮತ್ತು ಸೂಪರ್ ನೈಟ್‌ಟೈಮ್ ಸ್ಟ್ಯಾಂಡ್‌ಬೈ ಅನ್ನು ಪಡೆದುಕೊಂಡದೆ. ಡ್ಯಯೆಲ್ ಸಿಮ್, ವೈ-ಫೈ 5, ಬ್ಲೂಟೂತ್ v5.3, ಮೈಕ್ರೊ ಯುಎಸ್ಬಿ ಪೋರ್ಟ್ ಸಿಯಿಂದ ಕೂಡಿದೆ.