ಇಂದಿನ ದಿನಗಳಲ್ಲಿ ಪ್ರಮುಖ ದಾಖಲೆಗಳನ್ನು ನಮ್ಮ ಕೈಯಲ್ಲೇ ಇಟ್ಟುಕೊಳ್ಳುವುದು ಬಹಳ ಮುಖ್ಯ. ಆಧಾರ್ ಕಾರ್ಡ್ (Adhdaar card), ಪಾನ್, ಡ್ರೈವಿಂಗ್ ಲೈಸೆನ್ಸ್, ಪರೀಕ್ಷಾ ಫಲಿತಾಂಶದ ಡಾಕ್ಯುಮೆಂಟ್ ಹೀಗೆ ಅವಶ್ಯಕವಾದ ದಾಖಲೆಗಳು ತಕ್ಷಣ ಸಿಗುವಂತೆ ನಮ್ಮ ಹತ್ತಿರ ಇದ್ದರೆ ಉಪಯೋಗವಾಗುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಇದು ಡಿಜಿಲಾಕರ್ ಮೂಲಕ ಸಾಧ್ಯವಾಗುತ್ತಿದೆ. ನಿಮ್ಮ ಯಾವುದೇ ಅಮೂಲ್ಯ ಡಾಕ್ಯುಮೆಂಟ್ಗಳನ್ನು ಇದರಲ್ಲಿ ಸೇವ್ ಮಾಡಿಕೊಳ್ಳಬಹುದು. ಕೆಲ ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಡಿಜಿಲಾಕರ್ (DigiLocker) ಸೇವೆಯನ್ನು ಪ್ರಾರಂಭಿಸಿದರು. ರೇಷನ್ ಕಾರ್ಡ್ ನಿಂದ ಹಿಡಿದು ನಿಮ್ಮ ಮಾರ್ಕ್ ಶೀಟ್ ವರೆಗೆ ಇದರಲ್ಲಿ ಸೇವ್ ಮಾಡಿಕೊಳ್ಳಬಹುದು. ಕಾಲ ಕಾಲಕ್ಕೆ ಅಪ್ಡೇಟ್ಗಳನ್ನು ಪಡೆಯುತ್ತಿರುವ ಡಿಜಿಲಾಕರ್ನಲ್ಲಿ ಈಗ ಹಿರಿಯ ನಾಗರಿಕರಿಗೆ ಉಪಯೋಗವಾಗುವಂತಹ ಫೀಚರ್ ನೀಡಿದೆ. ಅದೇನೆಂದರೆ ಇನ್ನುಮುಂದೆ ಡಿಜಿಲಾಕರ್ ಮೂಲಕ ಪಿಂಚಣಿ ಪ್ರಮಾಣಪತ್ರವನ್ನು (Pension Certificate) ಕೂಡ ಪಡೆಯಬಹುದಾಗಿದೆ.
ವಯಸ್ಸಾದವರಿಗೆ ಬ್ಯಾಂಕ್ಗೆ, ಕಚೇರಿಗಳಿಗೆ ಅಲಿಯಲು ಕಷ್ಟವಾಗುತ್ತಿರವ ಕಾರಣ ಬ್ಯಾಂಕ್ ಆಫ್ ಮಹಾರಾಷ್ಟ್ರ ಪಿಂಚಣಿ ಪ್ರಮಾಣಪತ್ರಗಳನ್ನು ಡಿಜಿಲಾಕರ್ ಮೂಲಕ ನೀಡುತ್ತದೆ. ಹಾಗಾದರೆ ಡಿಜಿಲಾಕರ್ ಮೂಲಕ ನಿಮ್ಮ ಪಿಂಚಣಿ ಪ್ರಮಾಣಪತ್ರವನ್ನು ಹೇಗೆ ಪಡೆಯುವುದು? ಎಂದು ತಿಳಿದುಕೊಳ್ಳಲು ಬಯಸಿದರೆ ಇಲ್ಲಿದೆ ನೋಡಿ ಸುಲಭ ಮಾರ್ಗ.
ಡಿಜಿಲಾಕರ್‌ನಿಂದ ಪಿಂಚಣಿ ಪ್ರಮಾಣಪತ್ರವನ್ನು ಹೇಗೆ ಪಡೆಯುವುದು?:
ವಾಟ್ಸ್ಆ್ಯಪ್ ಮೂಲಕ ಡಿಜಿಲಾಕರ್ ಸೇವೆ:
ಈಗ ಡಿಜಿಲಾಕರ್ ಸೇವೆಗಳು ವಾಟ್ಸ್ಆ್ಯಪ್ನಲ್ಲಿ ಕೂಡ ಲಭ್ಯವಾಗುತ್ತಿದೆ. ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ, ಆಧಾರ್ ಕಾರ್ಡ್ ಸೇರದಿಂತೆ ಪ್ರಮಾಣಪತ್ರ ಮುಂತಾದ ದಾಖಲೆಗಳನ್ನು ಡೌನ್‌ಲೋಡ್ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಎಲ್ಲ ವಿವರಗಳನ್ನು ಪಡೆಯಲು, ಬಳಕೆದಾರರು ಕೇವಲ ‘Namaste’ ಅಥವಾ ‘Hi’ ಅಥವಾ ‘Digilocker’ ಎಂದು ವಾಟ್ಸ್ಆ್ಯಪ್ ಸಂಖ್ಯೆ +91 9013151515 ಗೆ ಕಳುಹಿಸಬೇಕು. ಆಗ ನಿಮಗೆ ಅನೇಕ ಆಯ್ಕೆಗಳು ಕಾಣಿಸುತ್ತದೆ. ಅದರಲ್ಲಿ ನಿಮಗೆ ಬೇಕಾದ್ದನ್ನು ಸೆಲೆಕ್ಟ್ ಮಾಡಿ ದಾಖಲೆಗಳನ್ನು ಪಡೆದುಕೊಳ್ಳಬಹುದು.