AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Features: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಒಂದಲ್ಲ ಎರಡಲ್ಲ ಬರೋಬ್ಬರಿ 5 ಹೊಸ ಫೀಚರ್ಸ್: ಶಾಕ್ ಆದ ಬಳಕೆದಾರರು

ಕೆಲವೇ ದಿನಗಳಲ್ಲಿ ಇನ್ನೂ ಅನೇಕ ಹೊಸ ಹೊಸ ಆಯ್ಕೆಗಳು ವಾಟ್ಸ್​ಆ್ಯಪ್​ನಲ್ಲಿ ಬರಲಿಕ್ಕಿದೆ. ಹಾಗಾದರೆ ಮುಂದಿನ ದಿನಗಳಲ್ಲಿ ಬರಲಿರುವ ಪ್ರಮುಖ 5 ಫೀಚರ್​ಗಳು ಯಾವುವು ಎಂಬುದನ್ನು ನೋಡೋಣ.

WhatsApp Features: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಒಂದಲ್ಲ ಎರಡಲ್ಲ ಬರೋಬ್ಬರಿ 5 ಹೊಸ ಫೀಚರ್ಸ್: ಶಾಕ್ ಆದ ಬಳಕೆದಾರರು
WhatsApp
TV9 Web
| Updated By: Vinay Bhat|

Updated on:Oct 17, 2022 | 1:04 PM

Share

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಅಗತ್ಯಕ್ಕೆ ಅನುಗುಣವಾಗಿ ಅನೇಕ ಫೀಚರ್​ಗಳನ್ನು ಬಿಡುಗಡೆ ಮಾಡಿದೆ. ಇದುವೇ ವಾಟ್ಸ್​ಆ್ಯಪ್ ಇಷ್ಟು ದೊಡ್ಡ ಮಟ್ಟಕ್ಕೆ ಪ್ರಸಿದ್ಧಿ ಪಡೆಯಲು ಕಾರಣ ಎಂದು ಹೇಳಬಹುದು. ಈ ವರ್ಷವಂತು ವಾಟ್ಸ್​ಆ್ಯಪ್ (WhatsApp) ತಿಂಗಳಿಗೆ ಎರಡು ಮೂರು ನೂತನ ಆಯ್ಕೆಗಳನ್ನು ನೀಡುತ್ತಲೇ ಬರುತ್ತಿದೆ. ಮೆಸೇಜ್ ರಿಯಾಕ್ಷನ್, ವೀವ್ ಒನ್ಸ್, (View Once) ಡಾಕ್ಯುಮೆಂಟ್​ನಲ್ಲಿ ವಿಡಿಯೋ, ಫೋಟೋ ಶೇರ್ ಮಾಡುವ ಆಯ್ಕೆ, ಸ್ಕ್ರೀನ್ ಶಾಟ್ ತೆಗೆಯಲು ನಿರ್ಬಂಧ, ಮೆಸೇಜ್ ಡಿಲೀಟ್ ಮಾಡಲು ಹೆಚ್ಚಿನ ಸಮಯ ಹೀಗೆ ಅನೇಕ ಅಪ್ಡೇಟ್​ಗಳನ್ನು ಪರಿಚಯಿಸಿದೆ. ಅಷ್ಟೇ ಅಲ್ಲದೆ ಕೆಲವೇ ದಿನಗಳಲ್ಲಿ ಇನ್ನೂ ಅನೇಕ ಹೊಸ ಹೊಸ ಆಯ್ಕೆಗಳು ವಾಟ್ಸ್​ಆ್ಯಪ್​ನಲ್ಲಿ ಬರಲಿಕ್ಕಿದೆ. ಹಾಗಾದರೆ ಮುಂದಿನ ದಿನಗಳಲ್ಲಿ ಬರಲಿರುವ ಪ್ರಮುಖ 5 ಫೀಚರ್​ಗಳು ಯಾವುವು ಎಂಬುದನ್ನು ನೋಡೋಣ.

ಎಡಿಟ್ ಮೆಸೇಜ್ ಆಯ್ಕೆ:

ವಾಟ್ಸ್​ಆ್ಯಪ್ ತನ್ನ ಮುಂದಿನ ಅಪ್ಡೇಟ್​ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆ ನೀಡಲಿದೆ. ಈ ಬಗ್ಗೆ ವಾಬೇಟಾಇನ್​ಫೊ ವರದಿ ಮಾಡಿದ್ದು, ವಾಟ್ಸ್​ಆ್ಯಪ್ ಸದ್ಯದಲ್ಲೇ ಎಡಿಟ್ ಮೆಸೇಜ್ ಆಯ್ಕೆಯನ್ನು ನೀಡಲಿದೆ ಎಂದು ಹೇಳಿದೆ. ಬಳಕೆದಾರರು ಇತರರಿಗೆ ಮೆಸೇಜ್ ಮಾಡುವ ಸಂದರ್ಭ ಅಕ್ಷರ ತಪ್ಪಿ ಸೆಂಡ್ ಮಾಡಿದ್ದರೆ ಪುನಃ ಅದನ್ನು ಸರಿಗೊಳಿಸಲು ಇದು ಸಹಕಾರಿ ಮಾಡಲಿದೆ. ಸದ್ಯಕ್ಕೆ ಈ ಆಯ್ಕೆ ಆಂಡ್ರಾಯ್ಡ್ ಬೇಟಾ ವರ್ಷನ್​ನಲ್ಲಿ ಲಭ್ಯವಿದೆ. ಈಗಾಗಲೇ ಇರುವ ಡಿಲೀಟ್ ಫಾರ್ ಎವರಿವನ್ ಆಯ್ಕೆ ಸಂಪೂರ್ಣ ಮೆಸೇಜ್ ಅನ್ನು ಡಿಲೀಟ್ ಮಾಡುತ್ತದೆ. ಆದರೆ, ಈ ಎಡಿಟ್ ಆಯ್ಕೆಯಲ್ಲಿ ಮೆಸೇಜ್ ಅನ್ನು ಡಿಲೀಟ್ ಮಾಡುವ ಬದಲು ಅಕ್ಷರವನ್ನು ಸರಿಪಡಿಸುವುದಾಗಿದೆ.

ಇದನ್ನೂ ಓದಿ
Image
Flipkart: ಫ್ಲಿಪ್​ಕಾರ್ಟ್​ನಲ್ಲಿ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್​​ಫೋನ್​ ಸೇಲ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
Image
Pension Certificate: ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ: ಈಗ ಡಿಜಿಲಾಕರ್ ಮೂಲಕ ಪಿಂಚಣಿ ಪ್ರಮಾಣಪತ್ರ ಪಡೆಯಿರಿ: ಹೇಗೆ ನೋಡಿ
Image
Tech Tips: EMI ನಲ್ಲಿ ಸ್ಮಾರ್ಟ್​​ಫೋನ್ ಖರೀದಿಸುವ ಮುನ್ನ ಒಮ್ಮೆ ಈ ಟ್ರಿಕ್ ಫಾಲೋ
Image
OnePlus 10R 5G: ಭರ್ಜರಿ ಸೇಲ್ ಕಂಡ ಒನ್​ಪ್ಲಸ್ 10R 5G ಫೋನ್ ಈಗ ಬಂಪರ್ ಡಿಸ್ಕೌಂಟ್​ನಲ್ಲಿ ಲಭ್ಯ: ಆಫರ್ ಮಿಸ್ ಮಾಡ್ಬೇಡಿ

ಗ್ರೂಪ್‌ ಸದಸ್ಯರ ಸಂಖ್ಯೆ ಹೆಚ್ಚಳ:

ಗ್ರೂಪ್ ವಿಚಾರಕ್ಕೆ ಸಂಬಂಧಿಸಿದಂತೆ ನೂತನ ಆಯ್ಕೆಯನ್ನು ಬಿಡುಗಡೆ ಮಾಡಲು ವಾಟ್ಸ್​ಆ್ಯಪ್ ತಯಾರಿ ನಡೆಸಿದೆ. ವಾಟ್ಸ್​ಆ್ಯಪ್ ತನ್ನ ನೂತನ ಅಪ್‌ಡೇಟ್‌ನಲ್ಲಿ ಗ್ರೂಪ್‌ ಸದಸ್ಯರ ಸಂಖ್ಯೆ ಹೆಚ್ಚಿಸಲಿದೆ ಎಂದು ವರದಿಯಾಗಿದೆ. ಆರಂಭದಲ್ಲಿ ವಾಟ್ಸ್​ಆ್ಯಪ್​​ ಗ್ರೂಪ್‌ಗೆ 256 ಸದಸ್ಯರನ್ನು ಸೇರಿಸಲು ಅವಕಾಶ ಇತ್ತು. ಬಳಿಕ ಆ ಸಂಖ್ಯೆಯನ್ನು 512 ಕ್ಕೆ ಹೆಚ್ಚಿಸಿತ್ತು. ಈಗ ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ. WaBetaInfo ನ ವರದಿಯ ಪ್ರಕಾರ, ವಾಟ್ಸ್​ಆ್ಯಪ್​​ ಗ್ರೂಪ್‌ ರಚನೆಯ ಸದಸ್ಯರ ಮಿತಿಯನ್ನು 1024 ಗೆ ಹೆಚ್ಚಿಸಲು ಕೆಲಸ ಮಾಡುತ್ತಿದೆ. ಈ ಆಯ್ಕೆಯು ಪ್ರಸ್ತುತ ಆಯ್ದ ಬೀಟಾ ಬಳಕೆದಾರರಿಗೆ ಸೀಮಿತವಾಗಿದೆ ಎಂದು ಹೇಳಲಾಗಿದೆ. ಆದಷ್ಟು ಬೇಗ ಈ ನೂತನ ಫೀಚರ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.

ಕಾಪ್ಷನ್​ನೊಂದಿಗೆ ಡಾಕ್ಯುಮೆಂಟ್ ಕಳುಹಿಸಿ:

ವಾಟ್ಸ್​ಆ್ಯಪ್​ನಲ್ಲಿ ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್​ಗಳನ್ನು ಅಡಿ ಬರಹ ನೀಡಿ ಕಳುಹಿಸಬಹುದು. ಆದರೆ, ಡಾಕ್ಯುಮೆಂಟ್ ಕಳುಹಿಸುವಾಗ ಈ ಆಯ್ಕೆ ಕಾಣಿಸುವುದಿಲ್ಲ. ಇದೀಗ ವಾಟ್ಸ್​ಆ್ಯಪ್ ತನ್ನ ನೂತನ ಅಪ್ಡೇಟ್​ನಲ್ಲಿ ಡಾಕ್ಯುಮೆಂಟ್ ಕಳುಹಿಸುವಾಗಲೂ ಕಾಪ್ಷನ್ ಆಯ್ಕೆ ನೀಡಲಿದೆ. ಈ ಮೂಲಕ ಕಳುಹಿಸಿದ ಅಥವಾ ರಿಸೀವ್ ಮಾಡಿಕೊಂಡ ಡಾಕ್ಯುಮೆಂಟ್ ಅನ್ನು ಸರ್ಚ್ ಮಾಡುವ ಮೂಲಕ ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ.

ಸ್ಕ್ರೀನ್ ಶಾಟ್ ನಿರ್ಬಂಧ:

ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಟ್ಸ್​ಆ್ಯಪ್ ಈ ವರ್ಷ ವೀವ್ ಒನ್ಸ್ ಎಂಬ ಆಯ್ಕೆಯನ್ನು ಪರಿಚಯಿಸಿತ್ತು. ಇದರಲ್ಲಿ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಮಾಯವಾಗುವುದು ಮಾತ್ರವಲ್ಲದೆ, ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗಿರುವುದಿಲ್ಲ. ಆದರೆ, ಇದನ್ನು ಸ್ಕ್ರೀನ್ ಶಾಟ್ ತೆಗೆಯುವಂತಹ ಆಯ್ಕೆ ಇದೆ. ಇದೊಂದು ಕಾರಣದಿಂದ ಅನೇಕರು ಈ ಆಯ್ಕೆಯಿಂದ ಬೇಸರಗೊಂಡಿದ್ದರು. ಇದೀಗ ವಾಟ್ಸ್​ಆ್ಯಪ್ ತನ್ನ ವೀವ್ ಒನ್ಸ್ ಫೀಚರ್​ನಲ್ಲಿ ಸ್ಕ್ರೀನ್ ಶಾಟ್ ತೆಗೆಯಲು ನಿರ್ಬಂಧಿಸಲು ಮುಂದಾಗಿದೆ. ಈ ಆಯ್ಕೆಯಲ್ಲಿ ನೂತಹ ಅಪ್ಡೇಟ್ ಸದ್ಯದಲ್ಲೇ ಬರಲಿದೆಯಂತೆ.

ವಾಟ್ಸ್​ಆ್ಯಪ್ ಪ್ರೀಮಿಯಂ ಚಂದಾದಾರಿಕೆ:

ವಾಟ್ಸ್​ಆ್ಯಪ್​ನಲ್ಲಿ ಪಾವತಿ ಮಾಡಿ ಬಳಸಬೇಕಾದ ಪ್ರೀಮಿಯಂ ಸೌಲಭ್ಯ ಸದ್ಯದಲ್ಲೇ ಬರಲಿದೆ. ಪ್ರೀಮಿಯಂ ಸೌಲಭ್ಯಗಳಿರುವ ವಾಟ್ಸ್​ಆ್ಯಪ್ ಪ್ರೀಮಿಯಂ ಅಪ್ಲಿಕೇಷನ್ ಟೆಸ್ಟಿಂಗ್ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಈ ಆಯ್ಕೆ ವಾಟ್ಸ್​ಆ್ಯಪ್ ಬ್ಯುಸಿನೆಸ್ ಬಳಕೆದಾರರಿಗೆ ಲಭ್ಯವಾಗಲಿದ್ದು, ಗ್ರಾಹಕರೊಂದಿಗೆ ಸಂವಹನ ನಡೆಸಲು ಹೊಸದಾದ ಹಲವು ಪಾವತಿಸಬೇಕಾದ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಹಲವು ಪ್ರೀಮಿಯಂ ವೈಶಿಷ್ಟ್ಯಗಳು ಇದರಲ್ಲಿದ್ದು, ಈ ವೈಶಿಷ್ಟ್ಯಗಳನ್ನು ಬಳಸಿಕೊಳ್ಳಲು ಬಳಕೆದಾರರು ಹಣವನ್ನು ಪಾವತಿಸಬೇಕಾಗುತ್ತದೆ. ಹೀಗೆ ಹಣವನ್ನು ಪಾವತಿಸಿ ಪಡೆಯುವ ವಾಟ್ಸ್​ಆ್ಯಪ್ ಬ್ಯುಸಿನೆಸ್ ಅಪ್ಲಿಕೇಷನ್‌ನಲ್ಲಿ ಹಲವು ಸಾಧನಗಳನ್ನು ಲಿಂಕ್ ಮಾಡಬಹುದು. ಬಳಕೆದಾರರು URL ಗಳನ್ನು ಸೌಲಭ್ಯವನ್ನು ಸಹ ಪಡೆಯಬಹುದು.

Published On - 1:04 pm, Mon, 17 October 22

ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ