Flipkart: ಫ್ಲಿಪ್​ಕಾರ್ಟ್​ನಲ್ಲಿ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್​​ಫೋನ್​ ಸೇಲ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

Used Smartphones: ನಿಮ್ಮ ಮೊಬೈಲ್ ಅನ್ನು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart)​ ಮೂಲಕ ಮಾರಾಟ ಮಾಡಬಹುದು ಎಂಬುದು ನಿಮಗೆ ಗೊತ್ತೇ?. ಇದಕ್ಕಾಗಿ ಇಲ್ಲಿದೆ ನೋಡಿ ಸಿಂಪಲ್ ಸ್ಟೆಪ್ಸ್.

Flipkart: ಫ್ಲಿಪ್​ಕಾರ್ಟ್​ನಲ್ಲಿ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್​​ಫೋನ್​ ಸೇಲ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
Flipkart and Smartphones
Follow us
| Updated By: Vinay Bhat

Updated on:Oct 17, 2022 | 12:11 PM

ಮಾರುಕಟ್ಟೆಯಲ್ಲಿಂದು ವಾರಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಹೊಸ ಸ್ಮಾರ್ಟ್​ಫೋನ್​ಗಳು (Smartphones) ಬಿಡುಗಡೆ ಆಗುತ್ತವೆ. ಇದರಲ್ಲಿ ಬಹುತೇಕ ಮೊಬೈಲ್​ಗಳು ಬಜೆಟ್ ಅಥವಾ ಮಧ್ಯಮ ಬೆಲೆಗೆ ಲಭ್ಯವಿರುವುದರಿಂದ ಬೇಗನೆ ಸೇಲ್ ಆಗಿ ಬಿಡುತ್ತದೆ. ಈಗ ಉಪಯೋಗಿಸುತ್ತಿರುವ ಮೊಬೈಲ್ ಬೋರ್ ಆಯಿತು ಎಂದಾಗ ಜನರು ಮತ್ತೊಂದು ಹೊಸ ಸ್ಮಾರ್ಟ್​ಫೋನ್ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ನೂತನ ಮೊಬೈಲ್ ಖರೀದಿಸುವಾಗ ಕೆಲವರು ತಮ್ಮ ಹಳೆಯ ಫೋನನ್ನು ಎಷ್ಟು ಬೆಲೆ ಸಿಗುತ್ತೊ ಅಷ್ಟಕ್ಕೆ ಹೊರಗಿನ ರಿಟೈಲ್ ಸ್ಟೋರ್​ಗೆ ಮಾರಾಟ ಮಾಡಿ ಬಿಡುತ್ತಾರೆ. ಆ ಮೊಬೈಲ್​ಗೆ (Mobile) ಅರ್ಹವಾದ ಬೆಲೆ ಸಿಗುವುದಿಲ್ಲ. ಆದರೆ, ನಿಮ್ಮ ಮೊಬೈಲ್ ಅನ್ನು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart)​ ಮೂಲಕ ಮಾರಾಟ ಮಾಡಬಹುದು ಎಂಬುದು ನಿಮಗೆ ಗೊತ್ತೇ?. ಇದಕ್ಕಾಗಿ ಇಲ್ಲಿದೆ ನೋಡಿ ಸಿಂಪಲ್ ಸ್ಟೆಪ್ಸ್.

ಫ್ಲಿಪ್​ಕಾರ್ಟ್​ ಸಂಸ್ಥೆ ಇತ್ತೀಚೆಗಷ್ಟೆ ತನ್ನ ಫೆಸ್ಟಿವಲ್ ಸೀಸನ್ 2022 ರಲ್ಲಿ ಸೆಲ್- ಬ್ಯಾಂಕ್ ಪ್ರೊಗ್ರಾಮ್ ಎಂಬ ವಿಶೇಷ ಆಯ್ಕೆಯನ್ನು ನೀಡಿತ್ತು. ಇದರ ಮೂಲಕ ನಿಮ್ಮ ಹಳೆಯ ಸ್ಮಾರ್ಟ್​ಫೋನನ್ನು ಯಾವುದೇ ಅಪಾಯವಿಲ್ಲದೆ ಸೇಫ್ ಹಾಗೂ ಸುಲಭವಾಗಿ ಮಾರಾಟ ಮಾಡಬಹುದು. ಇಲ್ಲಿ ನಿಮ್ಮ ಮೊಬೈಲ್​ಗೆ ಅರ್ಹವಾಗಿ ಖಚಿತ ಬೆಲೆ ಕೂಡ ಸಿಗುತ್ತದೆ. ಕೆಲವೇ ಸಮಯದಲ್ಲಿ ಹಣ ನಿಮ್ಮ ಬ್ಯಾಂಕ್ ಅಕೌಂಟ್​ಗೆ ಬಂದಿರುತ್ತದೆ. ಫ್ಲಿಪ್​ಕಾರ್ಟ್​ ಮೂಲಕ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್​​ಫೋನ್​ ಸೇಲ್ ಮಾಡಲು ಈ ಕೆಳಗಿನ ವಿಧಾನ ಅನುಸರಿಸಿ.

ಫ್ಲಿಪ್​ಕಾರ್ಟ್​ನಲ್ಲಿ ಹಳೆಯ ​​ಫೋನ್​ ಸೇಲ್ ಮಾಡುವುದು ಹೇಗೆ?:

ಇದನ್ನೂ ಓದಿ
Image
Pension Certificate: ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ: ಈಗ ಡಿಜಿಲಾಕರ್ ಮೂಲಕ ಪಿಂಚಣಿ ಪ್ರಮಾಣಪತ್ರ ಪಡೆಯಿರಿ: ಹೇಗೆ ನೋಡಿ
Image
Tech Tips: EMI ನಲ್ಲಿ ಸ್ಮಾರ್ಟ್​​ಫೋನ್ ಖರೀದಿಸುವ ಮುನ್ನ ಒಮ್ಮೆ ಈ ಟ್ರಿಕ್ ಫಾಲೋ
Image
OnePlus 10R 5G: ಭರ್ಜರಿ ಸೇಲ್ ಕಂಡ ಒನ್​ಪ್ಲಸ್ 10R 5G ಫೋನ್ ಈಗ ಬಂಪರ್ ಡಿಸ್ಕೌಂಟ್​ನಲ್ಲಿ ಲಭ್ಯ: ಆಫರ್ ಮಿಸ್ ಮಾಡ್ಬೇಡಿ
Image
Oppo F21 Pro: ಒಪ್ಪೋ F21 ಪ್ರೊ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಇದು ಕ್ಯಾಮೆರಾ ಪ್ರಿಯರ ನೆಚ್ಚಿನ ಫೋನ್
  • ಫ್ಲಿಪ್​ಕಾರ್ಟ್​ ಆ್ಯಪ್ ತೆರೆಯಿರಿ ಮತ್ತು ಕೆಳ ಭಾಗದಲ್ಲಿರವ ಕ್ಯಾಟಗರಿ ಸೆಕ್ಷನ್​ನಲ್ಲಿ ಸೆಲ್​ ಬ್ಯಾಕ್ ಸೆಲೆಕ್ಟ್ ಮಾಡಿ.
  • ಈ ಆಯ್ಕೆ ಸಿಗಲಿಲ್ಲ ಎಂದಾದರೆ ಸರ್ಚ್​ ಬಾರ್​ನಲ್ಲಿ ಸೆಲ್​ ಬ್ಯಾಕ್ ಸರ್ಚ್​ ಮಾಡಿ ಓಪನ್ ಮಾಡಿರಿ.
  • ಈಗ ನೀವು ನಿಮ್ಮ ಮೊಬೈಲ್ ಫೋನ್‌ನ ಬ್ರ್ಯಾಂಡ್, ಮಾಡೆಲ್ ಮತ್ತು IMEI ಸಂಖ್ಯೆಯಂತಹ ಮಾಹಿತಿ ನೀಡಬೇಕು.
  • ನಂತರ ನಿಮ್ಮ ನೆಟ್‌ವರ್ಕ್ ಪಾಲುದಾರರಿಂದ ಫೋನ್‌ಗೆ ಎಷ್ಟು ಬೆಲೆ ಎಂಬ ಮಾಹಿತಿ ಕಾಣಿಸುತ್ತದೆ.
  • ಅಲ್ಲಿ ನೀಡಿರುವ ಬೆಲೆ ನಿಮಗೆ ಒಪ್ಪಿಗೆ ಇದ್ದಲ್ಲಿ 1 ರೂ. ಪಾವತಿಸಿ. ಬಳಿಕ ಮನೆ ಬಾಗಿಲಿಗೆ ಬಂದು ಪಿಕ್ ಅಪ್ ಮಾಡುತ್ತಾರೆ.
  • ಈ ಆರ್ಡರ್ ಖಚಿತವಾಯಿತು ಎಂದಾದರೆ 48 ಗಂಟೆಗಳ ಒಳಗೆ ಮೊಬೈಲ್ ಪಡೆದುಕೊಳ್ಳಲು ನಿಮ್ಮ ಮನೆಗೆ ಬರುತ್ತಾರೆ.
  • ನಿಮ್ಮ ಮೊಬೈಲ್ ಕಂಪನಿಯವರು ಮನೆಗೆ ಬಂದು ಮೊಬೈಲ್ ಪರಿಶೀಲಿಸಿ ಅಂತಿಮ ಬೆಲೆಯನ್ನು ಹೇಳುತ್ತಾರೆ. ಈ ಬೆಲೆ ನಿಮಗೆ ಇಷ್ಟವಾದರೆ ಮುಂದುವರೆಸಬಹುದು.
  • ನೀವು ಮುಂದುವರೆಸಿದರೆ 24 ಗಂಟೆಗಳ ಒಳಗೆ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುತ್ತದೆ. ಆರ್ಡರ್ ರದ್ದುಗೊಳಿಸಿದರೆ 1 ರೂ. ಅನ್ನು ನಿಮಗೆ ಪುನಃ ನೀಡಲಾಗುತ್ತದೆ.

ಹಳೆಯ ಫೋನ್ ಸೇಲ್ ಮಾಡುವ ಮುನ್ನ ಈ ಕೆಲಸ ಮಾಡಿ:

ನಿಮ್ಮ ಹಳೆಯ ಫೋನನ್ನು ಮಾರಾಟ ಮಾಡುವ ಮುನ್ನ ಅದರಲ್ಲಿರುವ ಅಕೌಂಟ್ಸ್, ಫೈಲ್ಸ್, ಫೋಟೋಗಳನೆಲ್ಲಾ ಬ್ಯಾಕಪ್ ಮಾಡಿಕೊಳ್ಳಿ. ಅದಕ್ಕಾಗಿ ಗೂಗಲ್​ನಲ್ಲಿ ದೊರೆಯುವ ಒನ್​ಡ್ರೈವ್ ಆ್ಯಪ್ ಬಳಕೆ ಮಾಡಬಹುದು. ಅಂತೆಯೇ, ಟ್ವಿಟ್ಟರ್, ಫೇಸ್​ಬುಕ್, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್, ಫೋನ್ ಪೇ, ಗೂಗಲ್ ಪೇ ಸೇರಿದಂತೆ ನೀವು ಲಾಗಿನ್ ಆಗಿರುವ ಆಕೌಂಟ್​ನಿಂದ ಲಾಗ್ ಜೌಟ್ ಆಗಿದ್ದೀರಾ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ. ಇಲ್ಲವಾದಲ್ಲಿ ನೀವು ಫೋನು ಮಾರಾಟ ಮಾಡುವ ಮುನ್ನ ರಿಸೆಟ್ ಮಾಡುವುದು ಉತ್ತಮ ಆಯ್ಕೆ.

Published On - 12:11 pm, Mon, 17 October 22

ತಾಜಾ ಸುದ್ದಿ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ