PM Kisan Samman Nidhi: ಪಿಎಂ ಕಿಸಾನ್ ಯೋಜನೆಯ 12ನೇ ಕಂತು ಬಿಡುಗಡೆ: ಹಣ ಬಂದಿದೆಯೇ ಎಂದು ನೋಡುವುದು ಹೇಗೆ?
ಇಂದು ಬೆಳಗ್ಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ (PM Kisan Samman Sammelan) ಚಾಲನೆ ನೀಡುವುದರ ಜತೆಗೆ, ಸುಮಾರು 8 ಲಕ್ಷ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂಪಾಯಿ ಜಮೆ ಮಾಡಿದರು. ಕಿಸಾನ್-ಸಮ್ಮಾನ್ ಕಂತನ್ನು ಪರಿಶೀಲನೆ ಮಾಡುವ ವಿಧಾನ ಇಲ್ಲಿದೆ ನೋಡಿ.
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ (PM Kisan Scheme) 12ನೇ ಕಂತು ಇಂದು (ಅಕ್ಟೋಬರ್ 17) ಬಿಡುಗಡೆ ಆಗಿದೆ. ಇಂದು ಬೆಳಗ್ಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ (PM Kisan Samman Sammelan) ಚಾಲನೆ ನೀಡುವುದರ ಜತೆಗೆ, ಕಿಸಾನ್ ಸಮ್ಮಾನ್ ಯೋಜನೆಯಡಿ 12ನೇ ಕಂತಿನ ಹಣವನ್ನು ರೈತರಿಗೆ ಬಿಡುಗಡೆ ಮಾಡಿದರು. ಈ ಕಂತಿನಲ್ಲಿ ಸುಮಾರು 8 ಲಕ್ಷ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂಪಾಯಿ ಜಮೆಯಾಗಿದೆ. ಕೇಂದ್ರ ಸರ್ಕಾರ ಸದರಿ ಯೋಜನೆ ಅಡಿಯಲ್ಲಿ ರೈತರಿಗೆ ಬಿಡುಗಡೆ ಮಾಡುತ್ತಿರುವ 12ನೇ ಕಂತು (PM Kisan 9th Instalment) ಇದಾಗಿದ್ದು, ಇದರಲ್ಲಿ ರೈತರು ಕೇಂದ್ರದಿಂದ ಪ್ರತಿವರ್ಷ ಮೂರು ಕಂತುಗಳಲ್ಲಿ ಹಣಕಾಸಿನ ನೆರವು ಪಡೆಯುತ್ತಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನಾ ಸರ್ಕಾರದ ಯೋಜನೆಯಾಗಿದ್ದು, ಇದಕ್ಕೆ ಶೇಕಡಾ 100ರಷ್ಟು ಹಣಕಾಸು ಅನುದಾನವನ್ನು ಭಾರತ ಸರ್ಕಾರವೇ ಭರಿಸುತ್ತದೆ. 2018ನೇ ಇಸವಿಯ ಡಿಸೆಂಬರ್ 1ರಂದು ಆರಂಭಗೊಂಡ ಈ ಯೋಜನೆಯಡಿ 2 ಹೆಕ್ಟೇರ್ ತನಕ ಒಟ್ಟಾರೆಯಾಗಿ ಭೂಮಿ ಇರುವ ಅಥವಾ ಮಾಲೀಕತ್ವ ಹೊಂದಿರುವ ಸಣ್ಣ ಹಾಗೂ ಕಿರು ರೈತರ ಕುಟುಂಬಗಳಿಗೆ ವಾರ್ಷಿಕವಾಗಿ 6000 ರೂಪಾಯಿಯನ್ನು ತಲಾ 2 ಸಾವಿರದಂತೆ ಮೂರು ಕಂತಿನಲ್ಲಿ ಪಾವತಿಸಲಾಗುತ್ತದೆ. ಮೊತ್ತವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ.
12ನೇ ಕಂತಿನ ಹಣವನ್ನು ರೈತರಿಗೆ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಇಂದು ದೇಶದಲ್ಲಿ 600ಕ್ಕೂ ಹೆಚ್ಚು ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳು ಆರಂಭಗೊಂಡಿವೆ ಹೇಳಿದರು. ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಮಾದರಿ ಕೇಂದ್ರಗಳನ್ನಾಗಿ ರೂಪಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ರೈತರ ಜತೆಗಿರಲಿದೆ. ಅವರ ಎಲ್ಲ ಸವಾಲುಗಳಿಗೂ ಉತ್ತರ ನೀಡಲಿದೆ. ಇದೇ ಸಂದರ್ಭದಲ್ಲಿ 8 ಲಕ್ಷ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂಪಾಯಿಯನ್ನು ಜಮೆ ಮಾಡಲಾಗಿದೆ. ದಿಪಾವಳಿ ಹಬ್ಬಕ್ಕೂ ಮುನ್ನ ಕಂತನ್ನು ವರ್ಗಾವಣೆ ಮಾಡಲಾಗಿದೆ. ಎಲ್ಲ ರೈತರಿಗೂ ಅಭಿನಂದನೆಗಳು. ದೇಶದಲ್ಲಿರುವ 2.7 ಲಕ್ಷ ಗೊಬ್ಬರದ ಅಂಗಡಿಗಳನ್ನು ಹಂತ ಹಂತವಾಗಿ ವನ್ ಸ್ಟಾಪ್ ಸೆಂಟರ್‌ಗಳಾಗಿ ಬದಲಿಸಿ ಪಿಎಂ ಸಮೃದ್ಧಿ ಕೇಂದ್ರಗಳೆಂದು ಮರುನಾಮಕರಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಕಿಸಾನ್-ಸಮ್ಮಾನ್ ಕಂತನ್ನು ಪರಿಶೀಲನೆ ಮಾಡುವ ವಿಧಾನ ಹೀಗಿದೆ:
- ಮೊದಲು ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ https://pmkisan.gov.in/. ಗೆ ಭೇಟಿ ನೀಡಿ.
- ವೆಬ್ಸೈಟ್ನ ಹೋಮ್ ಪೇಜ್ನಲ್ಲಿ ಫಾರ್ಮರ್ಸ್ ಕಾರ್ನರ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ಬೆನಿಫಿಷಿಯರಿ ಲಿಸ್ಟ್ (ಫಲಾನುಭವಿಗಳ ಪಟ್ಟಿ) ಆಯ್ಕೆ ಮೇಲೆ ಕ್ಲಿಕ್ ಮಾಡು.
- ರಾಜ್ಯ, ಜಿಲ್ಲೆ/ಉಪಜಿಲ್ಲೆ, ಬ್ಲಾಕ್ ಮತ್ತು ಹಳ್ಳಿ ಈ ಮಾಹಿತಿಯನ್ನು ಸರಿಯಾಗಿ ಆರಿಸಿ.
- Get Report ಎಂಬ ಆಯ್ಕೆ ಕಾಣಿಸುತ್ತದೆ ಮತ್ತು ಅದರ ಮೇಲೆ ಕ್ಲಿಕ್ ಮಾಡಬೇಕು.
- ಸ್ಕ್ರೀನ್ ಮೇಲೆ ಕಾಣುವ ಬೆನಿಫಿಷಿಯರಿ ಲಿಸ್ಟ್ (ಫಲಾನುಭವಿ ಪಟ್ಟಿ) ಅನ್ನು ಸೆಲೆಕ್ಟ್ ಮಾಡಿರಿ. ಜೊತೆಗೆ ಹೆಸರನ್ನು ಪರಿಶೀಲಿಸಿ, ಖಾತ್ರಿ ಪಡಿಸಬೇಕು.
- ನಂತರ pmskny ಹೋಮ್ಪೇಜ್ಗೆ ಮರಳಿ ಬೆನಿಫಿಷಿಯರಿ ಸ್ಟೇಟಸ್ ಬಟನ್ ಮೇಲೆ ಮತ್ತೆ ಕ್ಲಿಕ್ ಮಾಡಬೇಕು.
- ಇಲ್ಲಿ ಆಧಾರ್ ಕಾರ್ಡ್ ಮಾಹಿತಿ ಅಥವಾ ಮೊಬೈಲ್ ನಂಬರ್ ಅಥವಾ ಅಕೌಂಟ್ ನಂಬರ್ ನಮೂದಿಸಿ.
- get date ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಕಂತಿನ ಸ್ಥಿತಿ ಏನು ಎಂಬುದರ ಬಗೆಗಿನ ಮಾಹಿತಿ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತದೆ.