ನಿಮ್ಮ ಹಳೆಯ ಸ್ಮಾರ್ಟ್​ಫೋನನ್ನು ಸೇಲ್ ಮಾಡುವ ಮುನ್ನ ತಪ್ಪದೆ ಈ ಕೆಲಸ ಮಾಡಿ

ಮುಖ್ಯವಾಗಿ ನಿಮ್ಮ ಹಳೆಯ ಫೋನನ್ನು ಮಾರಾಟ ಮಾಡುವ ಮುನ್ನ ಅದರಲ್ಲಿರುವ ಅಕೌಂಟ್ಸ್, ಫೈಲ್ಸ್, ಫೋಟೋಗಳನೆಲ್ಲಾ ಬ್ಯಾಕಪ್ ಮಾಡಿಕೊಳ್ಳಿ.

ನಿಮ್ಮ ಹಳೆಯ ಸ್ಮಾರ್ಟ್​ಫೋನನ್ನು ಸೇಲ್ ಮಾಡುವ ಮುನ್ನ ತಪ್ಪದೆ ಈ ಕೆಲಸ ಮಾಡಿ
Smartphones
Follow us
TV9 Web
| Updated By: Digi Tech Desk

Updated on:Jul 13, 2021 | 6:52 PM

ಈಗೇನಿದ್ದರು ಸ್ಮಾರ್ಟ್​ಫೋನ್​ಗಳ (Smartphone) ಜಮಾನ. ಮಾರುಕಟ್ಟೆಯಲ್ಲಿ ದಿಕ್ಕೊಂದರಂತೆ ಕಡಿಮೆ ಬೆಲೆಗೆ ಹೊಸ ಹೊಸ ಸ್ಮಾರ್ಟ್​ಫೋನುಗಳು ಬಿಡುಗಡೆ ಆಗುತ್ತಿರುತ್ತದೆ. ಅಗ್ಗದ ಬೆಲೆಗೆ ಆಕರ್ಷಕ ಫೋನುಗಳು ಸಿಗುವ ಕಾರಣ ಹಳೆಯ ಫೋನ್ ಸ್ವಲ್ಪ ಹಾಳಾದರೆ ಸಾಕು ಅದನ್ನು ಸೇಲ್ ಮಾಡಿ ಹೊಸ ಮೊಬೈಲ್ ತೆಗೆದುಕೊಳ್ಳುವವರೇ ಹೆಚ್ಚು. ಆದರೆ, ಹಳೆಯ ಸ್ಮಾರ್ಟ್​ಫೋನನ್ನು ಸೇಲ್ ಮಾಡುವ ಮುನ್ನ ನೀವು ಈ ಕೆಲಸನ್ನು ತಪ್ಪದೆ ಮಾಡಬೇಕು.

ಮುಖ್ಯವಾಗಿ ನಿಮ್ಮ ಹಳೆಯ ಫೋನನ್ನು ಮಾರಾಟ ಮಾಡುವ ಮುನ್ನ ಅದರಲ್ಲಿರುವ ಅಕೌಂಟ್ಸ್, ಫೈಲ್ಸ್, ಫೋಟೋಗಳನೆಲ್ಲಾ ಬ್ಯಾಕಪ್ ಮಾಡಿಕೊಳ್ಳಿ. ಅದಕ್ಕಾಗಿ ಗೂಗಲ್​ನಲ್ಲಿ ದೊರೆಯುವ ಒನ್​ಡ್ರೈವ್ ಆ್ಯಪ್ ಬಳಕೆ ಮಾಡಬಹುದು. ಅಂತೆಯೇ, ಟ್ವಿಟ್ಟರ್, ಫೇಸ್​ಬುಕ್, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್, ಫೋನ್ ಪೇ, ಗೂಗಲ್ ಪೇ ಸೇರಿದಂತೆ ನೀವು ಲಾಗಿನ್ ಆಗಿರುವ ಆಕೌಂಟ್​ನಿಂದ ಲಾಗ್ ಜೌಟ್ ಆಗಿದ್ದೀರಾ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ.

ಇನ್ನೂ ಸೇಲ್ ಮಾಡುವ ಮುನ್ನ ಫೋನಿನಲ್ಲಿರುವ ಡಾಟಾ ನಿಮಗೆ ಅಗತ್ಯವಿಲ್ಲ ಎಂದಾದಲ್ಲಿ ಒಮ್ಮೆಗೆ ಎಲ್ಲವನ್ನು ಡಿಲೀಟ್ ಮಾಡಿ. ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಗ್ರಾಹಕರು ಸೆಟ್ಟಿಂಗ್ಸ್​ಗೆ ಹೋಗಿ ಸೆಕ್ಯೂರಿಟಿಯಲ್ಲಿ ಫ್ಯಾಕ್ಟರಿ ರಿಸೆಟ್ ಮಾಡುವ ಮೂಲಕ ಎಲ್ಲಾ ಡಾಟಾವನ್ನು ಅಳಿಸಿಹಾಕಬಹುದು.

ಐಫೋನ್ ಬಳಕೆದಾರರು ಡಾಟಾ ಡಿಲೀಟ್ ಮಾಡಲು ಸೆಟ್ಟಿಂಗ್ಸ್-ಯೂಸರ್ ಪ್ರೊಫೈಲ್-ಐಕ್ಲೌಡ್-ಫೈಂಡ್ ಮೈ ಐಫೋನ್ ಆಯ್ಕೆಯನ್ನು ಕ್ಲಿಕ್ ಮಾಡಿ. ಟರ್ನ್ ಆನ್ ಮಾಡಿದ ನಂತರ ಆ್ಯಪ್​ಗಳನ್ನೆಲ್ಲ ಲಾಗೌಟ್ ಮಾಡಬಹುದು.

ಇಲ್ಲವಾದಲ್ಲಿ ನೀವು ಫೋನು ಮಾರಾಟ ಮಾಡುವ ಮುನ್ನ ರಿಸೆಟ್ ಮಾಡುವುದು ಉತ್ತಮ ಆಯ್ಕೆ. ಮೊದಲಿಗೆ ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಿ. ನಂತರ ವ್ಯಾಲ್ಯೂಮ್ ಆಪ್, ಪವರ್ ಮತ್ತು ಹೋಮ್ ಬಟನ್ ಗಳನ್ನು ಒಟ್ಟಿಗೆ ಒತ್ತಿದರೆ ರಿಕವರಿ ಮೋಡ್ ಆನ್ ಆಗಲಿದೆ.

ಬೂಟ್ ಲೋಡರ್ ಒಪನ್ ಆದ ನಂತರದಲ್ಲಿ ಪವರ್ ಬಟನ್ ಅನ್ನು ಪ್ರೆಸ್ ಮಾಡಿದರೆ ರಿಕವರಿ ಮೋಡ್ ಕಾಣಿಸಿಕೊಳ್ಳಲಿದೆ. ನಂತರ ವ್ಯಾಲ್ಯೂಮ್ ಬಟನ್ ಆಪ್ ಡೌನ್ ಮಾಡುವ ಮೂಲಕ ವೈಪ್ ಡಾಟಾ/ಫ್ಯಾಕ್ಟರಿ ರಿಸೆಸ್ಟ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಎಲ್ಲ ಡಾಟಾ ಡಿಲೀಟ್ ಆಗುವಂತೆ ಮಾಡಬಹುದು.

Flipkart ನಲ್ಲಿ ಬಂಪರ್ ಡಿಸ್ಕೌಂಟ್: ಬಲಿಷ್ಠ ಬ್ಯಾಟರಿ, ಆಕರ್ಷಕ ಕ್ಯಾಮೆರಾದ Galaxy F22 ಈಗ ಖರೀದಿಗೆ ಲಭ್ಯ

Data Protection: ನಿಮ್ಮ ಡಾಟಾವನ್ನು ಸುರಕ್ಷಿತವಾಗಿ ಇಡುವುದು ಹೇಗೆ?: ಗೂಗಲ್ ಸಿಇಒ ಸುಂದರ್ ಪಿಚೈ ನೀಡಿದ್ದಾರೆ ಟಿಪ್ಸ್

(Smartphone sale Selling Your Old Android Phone This Is How To Factory Reset It here is the tips)

Published On - 6:02 pm, Tue, 13 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ