AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Data Protection: ನಿಮ್ಮ ಡಾಟಾವನ್ನು ಸುರಕ್ಷಿತವಾಗಿ ಇಡುವುದು ಹೇಗೆ?: ಗೂಗಲ್ ಸಿಇಒ ಸುಂದರ್ ಪಿಚೈ ನೀಡಿದ್ದಾರೆ ಟಿಪ್ಸ್

ಫೇಸ್​ಬುಕ್, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್ ಸೇರಿದಂತೆ ಸಕ್ರಿಯವಾಗಿರುವ ಹೆಚ್ಚಿನ ಸಾಮಾಜಿಕ ಜಾಲತಾಣಗಳಲ್ಲಿ ಈ ಆಯ್ಕೆಯನ್ನು ನೀಡಲಾಗಿದೆ. ಇದನ್ನು ಆ್ಯಕ್ಟಿವ್ ಮಾಡುವುದರಿಂದ ಹ್ಯಾಕರ್​ಗಳ ದಾಳಿಯಿಂದ ನಿಮ್ಮನ್ನ ನೀವು ರಕ್ಷಿಸಿಕೊಳ್ಳಬಹುದು.

Data Protection: ನಿಮ್ಮ ಡಾಟಾವನ್ನು ಸುರಕ್ಷಿತವಾಗಿ ಇಡುವುದು ಹೇಗೆ?: ಗೂಗಲ್ ಸಿಇಒ ಸುಂದರ್ ಪಿಚೈ ನೀಡಿದ್ದಾರೆ ಟಿಪ್ಸ್
Sundar Pichai
TV9 Web
| Updated By: Digi Tech Desk|

Updated on:Jul 13, 2021 | 2:33 PM

Share

ಟೆಕ್ನಾಲಜಿ (Technology) ಇಂದು ಆಗಸದೆತ್ತರಕ್ಕೆ ಬೆಳೆಯುತ್ತಿದೆ. ಸಾಮಾಜಿಕ ಜಾಲತಾಣ ಬಳಸುವವರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಇದರ ನಡುವೆ ಇತ್ತೀಚಿನ ದಿನಗಳಲ್ಲಿ ಆನ್​ಲೈನ್​​ ವಂಚನೆ, ಸೈಬರ್​ ಕ್ರೈಂ (Cyber crime) ನಂತಹ ಘಟನೆಗಳು ಕೂಡ ಹೆಚ್ಚುತ್ತಿವೆ. ಇದರಿಂದ ನಮ್ಮ ಡಾಟಾವನ್ನು ಸುರಕ್ಷಿತವಾಗಿ ಇಡುವುದು ಸವಾಲಿನ ಕೆಲಸ ಆಗಿಬಿಟ್ಟಿದೆ. ಹೀಗಿರುವಾಗ ಸರ್ಚ್ ಇಂಜಿನ್ ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚೈ (Google CEO Sundar Pichai) ಅವರು ನಿಮ್ಮ ಡಾಟಾವನ್ನು ಸುರಕ್ಷಿತವಾಗಿಡಲು ಕೆಲವೊಂದು ಟಿಪ್ಸ್ ನೀಡಿದ್ದಾರೆ.

ಬಿಬಿಸಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಸುಂದರ್ ಪಿಚೈ ಪ್ರಮುಖವಾಗಿ ಪಾಸ್​ವರ್ಡ್ ವಿಚಾರವಾಗಿ ಹೇಳಿದ್ದಾರೆ. ಪಾಸ್​ವರ್ಡ್ ಅನ್ನು ಪದೇ ಪದೇ ಬದಲಾಯಿಸುವುದು ಉತ್ತಮ ಆಯ್ಕೆಯಲ್ಲ. ಬದಲಾಗಿ ಟು-ಫ್ಯಾಕ್ಟರ್ ಅಥೆಂಟಿಕೇಷನ್ ಅನ್ನು ಆ್ಯಕ್ಟಿವ್ ಮಾಡಿಕೊಂಡರೆ ಸೇಫ್ ಎಂಬುದು ಅವರ ಅಭಿಪ್ರಾಯ. ಸುಂದರ್ ಪಿಚೈ ಅವರು ಕೂಡ ಇದೇ ನಿಯಮವನ್ನು ಅನುಸರಿಸುತ್ತಾರಂತೆ.

ಟು-ಫ್ಯಾಕ್ಟರ್ ಅಥೆಂಟಿಕೇಷನ್ ಅನ್ನು ಆ್ಯಕ್ಟಿವ್ ಮಾಡುವುದರಿಂದ ನಿಮ್ಮ ಯಾವುದೇ ಮಾಹಿತಿ ಹ್ಯಾಕ್ ಆಗುವುದನ್ನು ತಡೆಯಬಹುದು ಎಂಬುದು ಸುಂದರ್ ಅನಿಸಿಕೆ. ವಿಶ್ವದಾದ್ಯಂತ ಬಹುತೇಕ ದೇಶಗಳಲ್ಲಿ ಮುಕ್ತ ಇಂಟರ್​ನೆಟ್​ ದಾಳಿಗೆ ಗುರಿಯಾಗುತ್ತಿದೆ. ಹಲವು ದೇಶಗಳು ಮಾಹಿತಿಗಳ ಹರಿವನ್ನು ನಿರ್ಬಂಧಿಸುತ್ತಿವೆ ಮತ್ತು ಈ ಮಾದರಿಯನ್ನು ಪದೇಪದೇ ಟೇಕಿಟ್ ಫಾರ್ ಗ್ರಾಂಟೆಡ್ ಅಂತ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಈಗ ಫೇಸ್​ಬುಕ್, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್ ಸೇರಿದಂತೆ ಸಕ್ರಿಯವಾಗಿರುವ ಹೆಚ್ಚಿನ ಸಾಮಾಜಿಕ ಜಾಲತಾಣಗಳಲ್ಲಿ ಈ ಆಯ್ಕೆಯನ್ನು ನೀಡಲಾಗಿದೆ. ಇದನ್ನು ಆ್ಯಕ್ಟಿವ್ ಮಾಡುವುದರಿಂದ ಹ್ಯಾಕರ್​ಗಳ ದಾಳಿಯಿಂದ ನಿಮ್ಮನ್ನ ನೀವು ರಕ್ಷಿಸಿಕೊಳ್ಳಬಹುದು.

ಇನ್ನೂ ಭಾರತದ ಬಗ್ಗೆಯೂ ಮಾತನಾಡಿರುವ ಸುಂದರ್, ನಾನೊಬ್ಬ ಅಮೆರಿಕ ನಾಗರಿಕ. ಆದರೆ ಭಾರತ ನನ್ನೊಳಗೆ ಆಳವಾಗಿ ಉಳಿದಿದೆ. ನಾನು ಇವತ್ತು ಏನಾಗಿದ್ದೇನೋ ಅದರ ದೊಡ್ಡ ಭಾಗವಾಗಿ ಭಾರತ ಇದೆ ಎಂದು ಹೇಳಿದರು.

ಕೇವಲ 60 ದಿನಗಳಲ್ಲಿ ನೀವು ಇಂಜಿನಿಯರ್ ಆಗಬೇಕೆ?: ಕನ್ನಡಿಗರಿಂದ ಕನ್ನಡಿಗರಿಗಾಗಿ ವಿನೂತನ ಪ್ರಯತ್ನ

Geomagnetic Storm: ಇಂದು ಅಥವಾ ನಾಳೆ ಭೂಮಿಗೆ ಅಪ್ಪಳಿಸಲಿದೆ ಸೌರ ಚಂಡಮಾರುತ; ಮೊಬೈಲ್​ ಸಿಗ್ನಲ್, ವಿದ್ಯುತ್, ಸ್ಯಾಟಲೈಟ್ ಸಂಪರ್ಕ ಎಲ್ಲವೂ ಕಡಿತ ಸಾಧ್ಯತೆ!

Published On - 1:40 pm, Tue, 13 July 21

ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ