Poco C51: ಬಜೆಟ್ ದರಕ್ಕೆ ಬೆಸ್ಟ್ ಫೋನ್ ಪರಿಚಯಿಸಿದ ಪೋಕೊ
ಪೋಕೊ ಸಿ ಸರಣಿಯಲ್ಲಿ ಹೊಸದಾಗಿ ಪೋಕೊ C51 ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ದೇಶದಲ್ಲಿ ಈ ಫೋನ್ ಬೆಲೆ ₹8,499 ಇದ್ದು ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.
ಶಓಮಿ ರೆಡ್ಮಿ ಸಮೂಹದ ಒಡೆತನದಲ್ಲಿದ್ದ ಪೋಕೊ, ಪ್ರೀಮಿಯಂ ಫೀಚರ್ಸ್ ಇರುವ ಸ್ಮಾರ್ಟ್ಫೋನ್ಗಳನ್ನು ಭಾರತದಲ್ಲಿ ಪರಿಚಯಿಸಿದ ಬಳಿಕ, ಬಜೆಟ್ ದರದ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಅದರಲ್ಲೂ, ರೆಡ್ಮಿ, ಒಪ್ಪೊ ಮತ್ತು ವಿವೊ ಫೋನ್ಗಳಿಗೆ ಸ್ಪರ್ಧೆ ನೀಡುತ್ತಿದೆ. ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ, ಆರಂಭಿಕ ಹಂತದ ಫೋನ್ಗಳಿಂದ ಆರಂಭಿಸಿ, ವಿವಿಧ ಬಜೆಟ್, ಮಾದರಿಯ ಫೋನ್ಗಳನ್ನು ಕೂಡ ಪೋಕೊ ಬಿಡುಗಡೆ ಮಾಡುತ್ತಿದೆ. ಪೋಕೊ ಸಿ ಸರಣಿಯಲ್ಲಿ ಹೊಸದಾಗಿ ಪೋಕೊ C51 ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ದೇಶದಲ್ಲಿ ಈ ಫೋನ್ ಬೆಲೆ ₹8,499 ಇದ್ದು ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ. ಪೋಕೊ ಸಿ ಸರಣಿಯಲ್ಲಿ ಬಿಡುಗಡೆಯಾಗಿದೆ ನೂತನ ಪೋಕೊ C51 ಬಿಡುಗಡೆಯಾಗಿದ್ದು, 6.52 ಇಂಚಿನ HD+ ಡಿಸ್ಪ್ಲೇ ಹೊಂದಿದೆ. ಪೋಕೊ ಫೋನ್ MediaTek Helio G36 ಪ್ರೊಸೆಸರ್ ಬೆಂಬಲ ಹೊಂದಿದೆ ಹಾಗೂ 4 GB RAM + 64 GB ಆವೃತ್ತಿ ಲಭ್ಯವಿದ್ದು, ₹8,499 ಬೆಲೆಗೆ ಇದ್ದು, ಆರಂಭಿಕ ಹಂತದ ಕೊಡುಗೆಯಲ್ಲಿ ₹7,999ಕ್ಕೆ ಲಭ್ಯವಿದೆ. ಪೋಕೊ C51 ಸ್ಮಾರ್ಟ್ಫೋನ್ Android 13 (Go Edition) ಮೂಲಕ ಕಾರ್ಯನಿರ್ವಹಿಸುತ್ತದೆ. ಪೋಕೊ C51 ಫೋನ್ನಲ್ಲಿ 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸಹಿತ ಎರಡು ಕ್ಯಾಮೆರಾ ವ್ಯವಸ್ಥೆ ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜತೆಗೆ ಪೋಕೊ C51 ಫೋನ್ 5,000mAh ಬ್ಯಾಟರಿ ಬೆಂಬಲ ಹೊಂದಿದೆ.