ಒಂದೇ ದಿನ ಎರಡು ಬಂಪರ್ ಫೋನ್ ರಿಲೀಸ್ ಮಾಡಿದ ರಿಯಲ್ ಮಿ: ಖರೀದಿಗೆ ಕ್ಯೂ ಗ್ಯಾರಂಟಿ

|

Updated on: Aug 24, 2023 | 6:55 AM

Realme 11 5G, Realme 11X 5G Released: ರಿಯಲ್ ಮಿ ಭಾರತದಲ್ಲಿ 20,000 ರೂ. ಗಿಂತ ಕಡಿಮೆ ಬೆಲೆಗೆ ರಿಯಲ್ ಮಿ 11 5G ಮತ್ತು ರಿಯಲ್ ಮಿ 11X 5G ಎಂಬ ಎರಡು ಮೊಬೈಲ್ ಅನಾವರಣಗೊಂಡಿದೆ. ಇದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಫೀಚರ್​ಗಳನ್ನು ನೀಡಲಾಗಿದೆ. 108 ಮೆಗಾ ಫಿಕ್ಸೆಲ್ ಕ್ಯಾಮೆರಾ ಆಯ್ಕೆ ಕೂಡ ಅಳವಡಿಸಲಾಗಿದೆ.

ಒಂದೇ ದಿನ ಎರಡು ಬಂಪರ್ ಫೋನ್ ರಿಲೀಸ್ ಮಾಡಿದ ರಿಯಲ್ ಮಿ: ಖರೀದಿಗೆ ಕ್ಯೂ ಗ್ಯಾರಂಟಿ
Realme 11 5G and Realme 11X 5G
Follow us on

ಭಾರತದಲ್ಲಿ ಕಳೆದ ಮೂರು ತಿಂಗಳುಗಳಿಂದ ಪ್ರಸಿದ್ಧ ರಿಯಲ್ ಮಿ (Realme) ಕಂಪನಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಕ್ಯಾಮೆರಾ ಫೋನುಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಕಂಪನಿ ತನ್ನ 11 ಸರಣಿ ಅಡಿಯಲ್ಲಿ 200 ಮೆಗಾ ಫಿಕ್ಸೆಲ್​ನ ರಿಯಲ್ ಮಿ 11 ಪ್ರೊ+ ಫೋನನ್ನು ರಿಲೀಸ್ ಮಾಡಿತ್ತು. ಇದೀಗ ಇದೇ ಸರಣಿಯಲ್ಲಿ ರಿಯಲ್ ಮಿ ಭಾರತದಲ್ಲಿ 20,000 ರೂ. ಗಿಂತ ಕಡಿಮೆ ಎರಡು ಆಕರ್ಷಕ 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ರಿಯಲ್ ಮಿ 11 5G ಮತ್ತು ರಿಯಲ್ ಮಿ 11X 5G ಎಂಬ ಎರಡು ಮೊಬೈಲ್ ಅನಾವರಣಗೊಂಡಿದೆ. ಈ ಫೋನಿನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ರಿಯಲ್ ಮಿ 11, ರಿಯಲ್ ಮಿ 11X 5G ಬೆಲೆ:

ಭಾರತದಲ್ಲಿ ರಿಯಲ್ ಮಿ 11 5G ಬೆಲೆ 8GB RAM ಮತ್ತು 128GB ಸ್ಟೋರೇಜ್‌ಗೆ 18,999 ರೂ. ಗಳಿಂದ ಪ್ರಾರಂಭವಾಗುತ್ತದೆ. 8GB RAM + 256GB ಸಂಗ್ರಹಣೆಯ ಆಯ್ಕೆಗೆ 19,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಆಗಸ್ಟ್ 29 ರಿಂದ ಫ್ಲಿಪ್​ಕಾರ್ಟ್ ಮತ್ತು ರಿಯಲ್ ಮಿ ವೆಬ್​ಸೈಟ್​ನಲ್ಲಿ ಮಾರಾಟ ಕಾಣಲಿದೆ. ಮೊದಲ ಸೇಲ್ ಪ್ರಯುಕ್ತ 1,500 ರೂ. ಗಳ ಡಿಸ್ಕೌಂಟ್ ಸಿಗಲಿದೆ. ಈ ಫೋನ್ ಕಪ್ಪು ಮತ್ತು ಚಿನ್ನದ ಬಣ್ಣಗಳಲ್ಲಿ ಬರುತ್ತದೆ.

YouTube First Video: ಯೂಟ್ಯೂಬ್​ಗೆ ಅಪ್​ಲೋಡ್ ಆದ ಮೊದಲ ವಿಡಿಯೋ ಯಾವುದು ಗೊತ್ತಾ?

ಇದನ್ನೂ ಓದಿ
Tech Tips: ಸ್ಮಾರ್ಟ್​ಫೋನ್ ಬ್ಯಾಟರಿ ಕೆಟ್ಟು ಹೋಗದಂತೆ ಎಚ್ಚರಿಕೆ ವಹಿಸುವುದು ಹೇಗೆ?
ಕೇವಲ 11,999 ರೂ.: ಭಾರತದಲ್ಲೀಗ ಮಾರಾಟ ಕಾಣುತ್ತಿದೆ ಟೆಕ್ನೋ ಪೋವಾ 5, ಪೋವಾ 5 ಪ್ರೊ ಸ್ಮಾರ್ಟ್​ಫೋನ್
ಆಕರ್ಷಕ ಆಫರ್: ಐಫೋನ್ 15 ಸರಣಿ ಬಿಡುಗಡೆ ಮುನ್ನ ಐಫೋನ್ 14 ಪ್ಲಸ್ ಮೇಲೆ ಬಂಪರ್ ಡಿಸ್ಕೌಂಟ್
ಚಂದ್ರಯಾನ 3: ಚಂದ್ರನ ಮೇಲೆ ಲ್ಯಾಂಡರ್ ಇಳಿಯಬೇಕಾದರೆ ಸೂರ್ಯನ ಬೆಳಕು ಬೇಕು, ಕಾರಣವೇನು?

ರಿಯಲ್ ಮಿ 11X 6GB RAM ಮತ್ತು 128GB ಸ್ಟೋರೇಜ್ ಆಯ್ಕೆಗಾಗಿ 14,999 ರೂ. ಗಳ ಆರಂಭಿಕ ಬೆಲೆಯನ್ನು ಹೊಂದಿದೆ. ಅದೇ ಸಂಗ್ರಹಣೆಯೊಂದಿಗೆ 8GB RAM ರೂಪಾಂತರದ ಬೆಲೆ 15,999 ರೂ. ಆಗಿದೆ. ಈ ಫೋನ್ ರೆಡ್ಮಿ 12 5G ಯ ​​ನೇರ ಪ್ರತಿಸ್ಪರ್ಧಿಯಾಗಿದೆ. ಮೊದಲ ಸೇಲ್ ಪ್ರಯುಕ್ತ 1,000 ರೂ. ಗಳ ಡಿಸ್ಕೌಂಟ್ ಸಿಗಲಿದೆ. ಆಗಸ್ಟ್ 25 ರಂದು ನಡೆಯುವ ವಿಶೇಷ ವಾರ್ಷಿಕೋತ್ಸವದ ಮಾರಾಟದ ಸಮಯದಲ್ಲಿ ಇದು ಸೇಲ್ ಕಾಣಲಿದೆ. ಇದು ಕಪ್ಪು ಮತ್ತು ನೇರಳೆ ಬಣ್ಣಗಳಲ್ಲಿ ಬರುತ್ತದೆ.

ರಿಯಲ್ ಮಿ 11, ರಿಯಲ್ ಮಿ 11X 5G ಫೀಚರ್ಸ್:

ರಿಯಲ್ ಮಿ 11 ಸ್ಮಾರ್ಟ್​ಫೋನ್ 6.72-ಇಂಚಿನ ಪೂರ್ಣ-HD+ ಜೊತೆಗೆ 120Hz ರಿಫ್ರೆಶ್ ರೇಟ್ ಆಯ್ಕೆ ನೀಡಲಾಗಿದೆ. 5000mAh ಬ್ಯಾಟರಿ ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 6100+ 5G ಚಿಪ್ ಅನ್ನು ಹೊಂದಿದೆ. ಬ್ಯಾಟರಿ 67W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್​ನಲ್ಲಿ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ. 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಇದೆ. ಇತರ ಪ್ರಮುಖ ವೈಶಿಷ್ಟ್ಯಗಳೆಂದರೆ ಡ್ಯುಯಲ್ 5G SIM ಕಾರ್ಡ್ ಸ್ಲಾಟ್, Wi-Fi 5, ಬ್ಲೂಟೂತ್ 5.2, ಮತ್ತು NFC.

ರಿಯಲ್ ಮಿ 11X 5G ಫೋನ್ ರಿಯಲ್ ಮಿ UI 4.0 ಜೊತೆಗೆ ರನ್ ಆಗುತ್ತಿದೆ. ಇದು 6.72-ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) AMOLED ಡಿಸ್ ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 240Hz ವರೆಗೆ ಟಚ್ ಅನ್ನು ಹೊಂದಿದೆ. ಆಕ್ಟಾ-ಕೋರ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಜೊತೆಗೆ 16GB RAM ನಲ್ಲಿ ಕಾರ್ಯನಿರ್ವಹಿಸುತ್ತದೆ.

ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಇದೆ, ಇದು 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು f/1.79 ಲೆನ್ಸ್ ಜೊತೆಗೆ 2-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸಂವೇದಕವನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ, ಹ್ಯಾಂಡ್‌ಸೆಟ್ f/2.05 ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ. 33W ಸೂಪರ್​ವೊಕ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ