ಚಂದ್ರಯಾನ 3: ಚಂದ್ರನ ಮೇಲೆ ಲ್ಯಾಂಡರ್ ಇಳಿಯಬೇಕಾದರೆ ಸೂರ್ಯನ ಬೆಳಕು ಬೇಕು, ಕಾರಣವೇನು?

Chandrayaan 3 Latest Update: ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಈಗ ಚಂದ್ರನ ಮೇಲ್ಮೈಗೆ ಬಹಳ ಹತ್ತಿರದಲ್ಲಿದೆ. ಇಳಿಯುವ ಮೊದಲು ಆಂತರಿಕ ತಪಾಸಣೆ ನಡೆಸುತ್ತಿದೆ. ಈ ತಪಾಸಣೆಯ ಸಮಯದಲ್ಲಿ, ವಿಕ್ರಮ್ ಲ್ಯಾಂಡರ್ ತನ್ನನ್ನು ಸಾಫ್ಟ್ ಲ್ಯಾಂಡಿಂಗ್ ಮೋಡ್‌ಗೆ ತರುತ್ತದೆ, ನಂತರ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯು ಆಗಸ್ಟ್ 23 ರಂದು ಪ್ರಾರಂಭವಾಗುತ್ತದೆ.

ಚಂದ್ರಯಾನ 3: ಚಂದ್ರನ ಮೇಲೆ ಲ್ಯಾಂಡರ್ ಇಳಿಯಬೇಕಾದರೆ ಸೂರ್ಯನ ಬೆಳಕು ಬೇಕು, ಕಾರಣವೇನು?
ಚಂದ್ರನ ಮೇಲ್ಮೈ
Follow us
ರಶ್ಮಿ ಕಲ್ಲಕಟ್ಟ
|

Updated on:Aug 21, 2023 | 3:19 PM

ಬೆಂಗಳೂರು ಆಗಸ್ಟ್ 21: ಭಾರತೀಯ ಬಾಹ್ಯಾಕಾಶ ನೌಕೆಯು ಚಂದ್ರನ (Moon) ಹತ್ತಿರ ತಲುಪಿದ್ದು, ಆಗಸ್ಟ್ 23, ಬುಧವಾರದ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಿದ್ಧವಾಗಿದೆ. ಚಂದ್ರಯಾನ-3 (Chandrayaan-3) ಮಿಷನ್‌ನ ಲ್ಯಾಂಡರ್ ಮಾಡ್ಯೂಲ್ (LM) ಕಕ್ಷೆಯನ್ನು ಭಾನುವಾರ ಯಶಸ್ವಿಯಾಗಿ ಸೇರಿದೆ ಎಂದು ಇಸ್ರೋ (ISRO) ಹೇಳಿದೆ. ಜುಲೈ 14 ರಂದು ಉಡಾವಣೆಗೊಂಡ ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್, ಮಿಷನ್ ಉಡಾವಣೆಯಾದ 35 ದಿನಗಳ ನಂತರ ಗುರುವಾರ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿತು. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಮಾಡುವುದು. ಚಂದ್ರನ ಮೇಲೆ ರೋವರ್ ರೋವಿಂಗ್ ಅನ್ನು ಪ್ರದರ್ಶಿಸುವುದು ಮತ್ತು ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಚಂದ್ರಯಾನ-3 ರ ಮಿಷನ್ ಉದ್ದೇಶಗಳಾಗಿವೆ.

ರಷ್ಯಾದ ಲೂನಾ -25 ಪತನದ ನಂತರ, ದೇಶ ಮತ್ತು ಜಗತ್ತಿನ ಕಣ್ಣುಗಳು ಈಗ ಚಂದ್ರಯಾನ -3 ಮೇಲೆ ನೆಟ್ಟಿದೆ. ಆಗಸ್ಟ್ 23 ರ ಬುಧವಾರ ಸಂಜೆ 6.04 ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಲ್ಯಾಂಡರ್ ಘಟಕ ಇಳಿಯಲಿದೆ. ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲು ಇಸ್ರೋ ತನ್ನ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದೆ. ಆದರೆ ಚಂದ್ರನ ಈ ಕಾರ್ಯಾಚರಣೆಯಲ್ಲಿ ಸೂರ್ಯ ಪ್ರಮುಖ ಪಾತ್ರವನ್ನು ವಹಿಸುತ್ತಾನೆ. ಈಗ ಇಸ್ರೋ ಚಂದ್ರನ ಮೇಲೆ ಸೂರ್ಯೋದಯದ ಹೊತ್ತಿಗೆ ಕಾಯುತ್ತಿದ್ದು ಆ ವೇಳೆಯೇ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗುತ್ತದೆ. ಅಂದಹಾಗೆ ಸೂರ್ಯೋದಯಕ್ಕೂ ಚಂದ್ರ ಮತ್ತು ಚಂದ್ರಯಾನ 3ಕ್ಕೆ ಏನು ಸಂಬಂಧ?

ಸೂರ್ಯೋದಯಕ್ಕಾಗಿ ಯಾಕೆ ಕಾಯಬೇಕು?

ಚಂದ್ರಯಾನ 3 ಎಲ್ಲಾ ಕಕ್ಷೆಗಳನ್ನು ದಾಟಿದ ನಂತರ ಚಂದ್ರನಿಂದ ಕೆಲವೇ ಕಿಮೀ ದೂರದಲ್ಲಿದೆ. ಅದು ಈಗ 23 ರಂದು ಚಂದ್ರನನ್ನು ತಲುಪಲಿದೆ. ಚಂದ್ರಯಾನ 3 ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಲು ಸೂರ್ಯೋದಯಕ್ಕಾಗಿ ಬಾಹ್ಯಾಕಾಶ ನೌಕೆ ಕಾಯುತ್ತಿದೆ. ಚಂದ್ರಯಾನ-3 ಸೂರ್ಯನ ಬೆಳಕಿನಲ್ಲಿ ಚಂದ್ರನನ್ನು ಸ್ಪರ್ಶಿಸಲು ಪ್ರಯತ್ನಿಸಲಿದೆ.ವಿಕ್ರಮ್ ಮತ್ತು ಪ್ರಗ್ಯಾನ್ ನಂತೆಯೇ ಬಹು ಕ್ಯಾಮೆರಾಗಳು ಸೂರ್ಯನ ಬೆಳಕಿನಿಂದ ಚಾರ್ಜ್ ಆಗುತ್ತವೆ. ಹಾಗಿದ್ದರೆ ಮಾತ್ರಅವು ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಚಂದ್ರಯಾನ-3ಗಾಗಿ ವಿಕ್ರಮ್ ಮತ್ತು ಪ್ರಜ್ಞಾನ್ ಸೂರ್ಯನ ಬೆಳಕಿನಿಂದ ಚಾರ್ಜ್ ಆಗಬೇಕಿದೆ,

ಸೂರ್ಯನ ಬೆಳಕೇ ಯಾಕೆ ಬೇಕು?

ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಈಗ ಚಂದ್ರನ ಮೇಲ್ಮೈಗೆ ಬಹಳ ಹತ್ತಿರದಲ್ಲಿದೆ. ಇಳಿಯುವ ಮೊದಲು ಆಂತರಿಕ ತಪಾಸಣೆ ನಡೆಸುತ್ತಿದೆ. ಈ ತಪಾಸಣೆಯ ಸಮಯದಲ್ಲಿ, ವಿಕ್ರಮ್ ಲ್ಯಾಂಡರ್ ತನ್ನನ್ನು ಸಾಫ್ಟ್ ಲ್ಯಾಂಡಿಂಗ್ ಮೋಡ್‌ಗೆ ತರುತ್ತದೆ, ನಂತರ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯು ಆಗಸ್ಟ್ 23 ರಂದು ಪ್ರಾರಂಭವಾಗುತ್ತದೆ. ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ, ಚಂದ್ರಯಾನ-3 ಆಗಸ್ಟ್ 23 ರಂದು ಅಂದರೆ ಬುಧವಾರ ಸಂಜೆ 6.4 ಗಂಟೆಗೆ ಚಂದ್ರನ ಮೇಲ್ಮೈಗೆ ಇಳಿಯಲಿದೆ ಎಂದು ಇಸ್ರೋ ತಿಳಿಸಿದೆ.

ಇಸ್ರೋ ಪ್ರಕಾರ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದರೆ, ಆಗ ನಿಜವಾದ ಕೆಲಸ ಪ್ರಾರಂಭವಾಗುತ್ತದೆ. ಸಾಫ್ಟ್ ಲ್ಯಾಂಡಿಂಗ್ ನಂತರ, ಪ್ರಗ್ಯಾನ್ ರೋವರ್ ನಿಧಾನವಾಗಿ ವಿಕ್ರಮ್ ಲ್ಯಾಂಡರ್‌ನಿಂದ ಕೆಳಗಿಳಿಯುತ್ತದೆ. ಈ ಸಮಯದಲ್ಲಿ ವಿಕ್ರಮ್ ಲ್ಯಾಂಡರ್‌ನಲ್ಲಿ ಸ್ಥಾಪಿಸಲಾದ ಕ್ಯಾಮೆರಾ ಸಂಪೂರ್ಣ ಪ್ರಕ್ರಿಯೆಯನ್ನು ರೆಕಾರ್ಡ್ ಮಾಡಿ ಅದನ್ನು ನೇರ ಪ್ರಸಾರ ಮಾಡುತ್ತದೆ. ಚಂದ್ರನ ಮೇಲೆ ಇಳಿದ ನಂತರ, ಪ್ರಗ್ಯಾನ್ ರೋವರ್‌ನ ಅವಧಿ ಒಟ್ಟು 14 ದಿನಗಳವರೆಗೆ ಇರುತ್ತದೆ. ಇದು ಒಂದು ಚಂದ್ರನ ದಿನಕ್ಕೆ ಸಮಾನವಾಗಿರುತ್ತದೆ. ಆದರೆ ಇಲ್ಲಿ ಸೂರ್ಯನ ಪಾತ್ರವು ಪ್ರಮುಖವಾಗಿರುತ್ತದೆ.

14 ದಿನಗಳ ನಂತರ ಏನಾಗುತ್ತದೆ?

ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಪ್ರಕಾರ, ಸೂರ್ಯ ಚಂದ್ರನ ಮೇಲೆ ಅಸ್ತಮಿಸಿದಾಗ, ಲ್ಯಾಂಡರ್ ಮತ್ತು ರೋವರ್ ಯಾವುದೇ ಶಕ್ತಿಯನ್ನು ಹೊಂದಿರುವುದಿಲ್ಲ. ಇದು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಆದಾಗ್ಯೂ, ನಾವು ಮಾಡಿದ ಪರೀಕ್ಷೆಗಳಲ್ಲಿ, ಮುಂದಿನ ಸೂರ್ಯೋದಯದಲ್ಲೂ ಬ್ಯಾಟರಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ವಿಕ್ರಮ್-ಪ್ರಜ್ಞಾನ್ ಮುಂದಿನ 14 ದಿನಗಳವರೆಗೆ ಕೆಲಸ ಮಾಡಬಹುದು ಎಂದು ನಾವು ಕಂಡುಕೊಂಡಿದ್ದೇವೆ. ಆದಾಗ್ಯೂ, ಈ ಸೂತ್ರವು ಸಂಪೂರ್ಣವಾಗಿ ಯಶಸ್ವಿಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಅನೇಕ ಸಂದರ್ಭಗಳನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: ಚಂದ್ರಯಾನದ ಬಗ್ಗೆ ವ್ಯಂಗ್ಯವಾಡಿದ ನಟ ಪ್ರಕಾಶ್ ರಾಜ್; ಖಡಕ್ ಆಗಿ ಪ್ರತಿಕ್ರಿಯಿಸಿದ ನೆಟ್ಟಿಗರು

ಚಂದ್ರನ ಮೇಲ್ಮೈಯಲ್ಲಿ ಇಳಿದ ನಂತರ, ಪ್ರಗ್ಯಾನ್ ರೋವರ್ ವಿಕ್ರಮ್ ಲ್ಯಾಂಡರ್ ಸುತ್ತಲೂ ಇರುತ್ತದೆ. ಏಕೆಂದರೆ ಲ್ಯಾಂಡರ್‌ನಲ್ಲಿ ಅಳವಡಿಸಲಾದ ಕ್ಯಾಮೆರಾಗಳ ಮೂಲಕ ರೋವರ್‌ನ ಚಟುವಟಿಕೆಯನ್ನು ಪರೀಕ್ಷಿಸಲು ಇಸ್ರೋ ಬಯಸಿದೆ. ಪ್ರಗ್ಯಾನ್ ರೋವರ್‌ನಲ್ಲಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗುವುದು. ಅದು ಅಲ್ಲಿ ಕೆಲಸವನ್ನು ಮಾಡುತ್ತದೆ ಮತ್ತು ಚಂದ್ರನ ಮೇಲ್ಮೈಯನ್ನು ನಿರ್ಣಯಿಸುತ್ತದೆ. ಸದ್ಯಕ್ಕೆ ಇಸ್ರೋ 14 ದಿನಗಳ ಕಾಲ ತನ್ನ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸೂರ್ಯೋದಯದ ನಂತರ ಲ್ಯಾಂಡರ್-ರೋವರ್ ಅನ್ನು ಮತ್ತೆ ಚಾರ್ಜ್ ಮಾಡಿದರೆ, ನಂತರ ಮತ್ತಷ್ಟು ಕೆಲಸ ಮಾಡಲಾಗುವುದು. ಅಂದರೆ, ಚಂದ್ರಯಾನ-3 ಮಿಷನ್‌ಗೆ ಸೂರ್ಯನೂ ಬಹಳ ಮುಖ್ಯ ಎಂಬುದು ಸ್ಪಷ್ಟವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Mon, 21 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ