Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡುರಾತ್ರಿ ನಡುರಸ್ತೆಯಲ್ಲಿ ಯುವ ಜೋಡಿ ಬೈಕ್​ ಸವಾರಿ, ಎರಡು ಕೈಯಲ್ಲೂ ತುಪಾಕಿ ಝಳಪಿಸಿದ ಯುವತಿ! ಆಮೇಲೇನಾಯ್ತು?

Viral Video: ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಷಯ ಪೊಲೀಸರ ಗಮನಕ್ಕೆ ಬಂದಿದೆ. ಪಾಟ್ನಾ ಎಸ್ಪಿ ವೈಭವ್ ಶರ್ಮಾ ಈ ವಿಡಿಯೋದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಇಂತಹ ಅಪಾಯಕಾರಿ ಸಾಹಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವೀಡಿಯೋ ಆಧರಿಸಿ ಬೈಕ್‌ನ ನೋಂದಣಿ ಸಂಖ್ಯೆಯನ್ನು ಗುರುತಿಸಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಶೀಘ್ರವೇ ಬಂಧಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

ನಡುರಾತ್ರಿ ನಡುರಸ್ತೆಯಲ್ಲಿ ಯುವ ಜೋಡಿ ಬೈಕ್​ ಸವಾರಿ, ಎರಡು ಕೈಯಲ್ಲೂ ತುಪಾಕಿ ಝಳಪಿಸಿದ ಯುವತಿ! ಆಮೇಲೇನಾಯ್ತು?
ಎರಡು ಕೈಯಲ್ಲೂ ತುಪಾಕಿ ಝಳಪಿಸಿದ ಯುವತಿ
Follow us
ಸಾಧು ಶ್ರೀನಾಥ್​
|

Updated on: Aug 21, 2023 | 2:09 PM

ಸಾಮಾಜಿಕ ಜಾಲತಾಣಗಳಿಂದಾಗಿ ಯುವಕರು ತಮ್ಮ ಎಲ್ಲೆ ದಾಟುತ್ತಿದ್ದಾರೆ. ಅಂತರ್ಜಾಲದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (viral video) ಆಗುವ ಉದ್ದೇಶದಿಂದ ಹೆಂಗೆಂದರೆ ಹಾಗೆ ಆಡವಾಡುತ್ತಿದ್ದಾರೆ. ಆಗಾಗ್ಗೆ ತಮ್ಮ ವಿವೇಚನೆಯನ್ನು ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ನಡುರಸ್ತೆಯಲ್ಲಿ ಬೈಕ್ ಸವಾರಿ ಮಾಡ್ತಾ, ಪೆಟ್ರೋ್ಲ್​ ಟ್ಯಾಂಕ್​ ಮೇಲೆ ಕುಳಿತು ಪ್ರೇಮಿಗಳು ಚುಂಬಿಸುತ್ತಾ ಎಲ್ಲೆ ಮೀರುವ ದೃಶ್ಯಗಳು ಸಾಮಾನ್ಯವಾಗಿವೆ. ಈ ಮಧ್ಯೆ ಬಿಹಾರಿ ಯುವತಿಯೊಬ್ಬಳು ತಾನೇನು ಕಡಿಮೆ ಎಂದು ರಸ್ತೆಯಲ್ಲೇ ರೊಚ್ಚಿಗೆದ್ದಿದ್ದಾಳೆ. ಸಾಮಾಜಿಕ ಮಾಧ್ಯಮದ ಕ್ರೇಜ್ ಇಂತಹ ಅಪಾಯಕಾರಿ ಸಾಹಸಗಳಿಗೆ ನೀರೆರೆಯುತ್ತಿದೆ. ಯುವತಿಯೊಬ್ಬಳು (girl) ತನ್ನ ಬಾಯ್​ಫ್ರೆಂಡ್​ (boyfriend) ಜೊತೆ ವೇಗವಾಗಿ ಬೈಕ್ ನಲ್ಲಿ ಸಾಗುತ್ತಾ ತನ್ನ ಎರಡೂ ಕೈಗಳಲ್ಲಿ ಗನ್ ಹಿಡಿದುಕೊಂಡು ರೊಚ್ಚಿಗೆದ್ದಿದ್ದಾಲೆ. ಕೊನೆಗೆ, ಈ ವಿಡಿಯೋ ಪೊಲೀಸರ ಗಮನಕ್ಕೂ ಬಂದಿದೆ. ಇದರಿಂದ ಯುವತಿ ಈಗ ಸಂಕಷ್ಟಕ್ಕೆ ಸಿಲುಕಿದಂತಿದೆ. ಬಿಹಾರದ ಪಾಟ್ನಾದಲ್ಲಿ ಈ ಘಟನೆ ನಡೆದಿದೆ.

ಪಾಟ್ನಾದ ಯುವತಿ ಹಾಗೂ ಯುವಕ ರಾತ್ರಿ ವೇಳೆ ಬೈಕ್ ನಲ್ಲಿ ವೇಗವಾಗಿ ಹೋಗುತ್ತಿದ್ದಾರೆ. ಮರೀನ್ ಡ್ರೈವ್ ಮೇಲೆ ಹೋಗುತ್ತಿದ್ದಾಗ ಇಬ್ಬರಿಗೂ ಸ್ಟಂಟ್ ಸಾಹಸ ಮಾಡಬೇಕು ಎನಿಸಿದೆ. ಜೆ.ಪಿ. ಗಂಗಾ ಪಾತ್ ವೇ ರಸ್ತೆಯ ಮೇಲೆ ಯುವಕ ಬೈಕ್ ನಲ್ಲಿ ವೇಗವಾಗಿ ಬರುತ್ತಿದ್ದಾಗ ಹಿಂದೆ ಕುಳಿತಿದ್ದ ಯುವತಿ ಏಕಾಏಕಿ ಹಿಂದುಗಡೆಯಿಂದ ಎದ್ದು ನಿಂತು ಕೊಳ್ಳುತ್ತಾಳೆ. ತನ್ನ ಎರಡೂ ಕೈಗಳಲ್ಲಿ ಗನ್ ಹಿಡಿದು ಗಾಳಿಯಲ್ಲಿ ಗಲ್​​ಗಳನ್ನು ತೋರಿಸಿದ್ದಾಳೆ. ಈ ಎಲ್ಲಾ ದೃಶ್ಯಗಳನ್ನು ಪಕ್ಕದಲ್ಲೇ ಬರುತ್ತಿದ್ದ ಬೈಕ್ ಸವಾರರು ರೆಕಾರ್ಡ್ ಮಾಡಿ ಅಂತರ್ಜಾಲದಲ್ಲಿ ಹಾಕಿಬಿಟ್ಟಿದ್ದಾರೆ.

ಇದು ವೈರಲ್ ಆಗುತ್ತಿದ್ದಂತೆ ವಿಷಯ ಪೊಲೀಸರ ಗಮನಕ್ಕೆ ಬಂದಿದೆ. ಪಾಟ್ನಾ ಎಸ್ಪಿ ವೈಭವ್ ಶರ್ಮಾ ಈ ವಿಡಿಯೋದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಇಂತಹ ಅಪಾಯಕಾರಿ ಸಾಹಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವೀಡಿಯೋ ಆಧರಿಸಿ ಬೈಕ್‌ನ ನೋಂದಣಿ ಸಂಖ್ಯೆಯನ್ನು ಗುರುತಿಸಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಶೀಘ್ರವೇ ಬಂಧಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ