ಮಗಳ ಜಾತಕದಲ್ಲಿ ಸಮಸ್ಯೆ ಇದೆ ಎಂದು ನಾಟಕವಾಡಿದ ತಂದೆ, ಅವಳ ಹತ್ಯೆ ಮಾಡಿಬಿಟ್ಟ- ಅಸಲಿ ಕಾರಣ ತಿಳಿದರೆ ಶಾಕ್!

Hyderabad: ಕಳೆದ ಶುಕ್ರವಾರ ಆಗಸ್ಟ್​ 18ರಂದು ಸಂಜೆ ಕಾರಿನಲ್ಲಿ ಮೋಕ್ಷಜಾಳನ್ನು ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಶಾಲೆ ಮುಗಿಸಿ ಬಹಳ ಹೊತ್ತಾದರೂ ಮಗು ಮನೆಗೆ ಬಂದಿರಲಿಲ್ಲ. ಕುಟುಂಬಸ್ಥರು ಚಂದ್ರಶೇಖರನಿಗೆ ಕರೆ ಮಾಡಿದರು. ಮಗು ಮಲಗಿದೆ ಎಂದು ಹೇಳಿದ್ದಾನೆ. ಮುಂದೆ... ತನ್ನ ಫೋನ್ ಸ್ವಿಚ್ ಆಫ್ ಮಾಡಿಟ್ಟುಕೊಂಡಿದ್ದಾನೆ. ಹತ್ಯೆ ಮಾಡಿದ ನಂತರ ಆತ ಔಟರ್​ ರಿಂಗ್​ ರೋಡ್​​ನಲ್ಲಿ (ಓಆರ್‌ಆರ್‌) ಕಾರಿನಲ್ಲಿ ಶವವನ್ನು ಸಾಗಿಸಿ, ಪೇಟಾ ಮತ್ತು ಕೊಹೆಡಾ ನಡುವೆ ಎಲ್ಲಿಯಾದರೂ ಶವವನ್ನು ಬಿಸಾಕಲು ಜಾಗ ಹುಡುಕಾಡಿದ್ದಾನೆ. ಅಷ್ಟೇ..

ಮಗಳ ಜಾತಕದಲ್ಲಿ ಸಮಸ್ಯೆ ಇದೆ ಎಂದು ನಾಟಕವಾಡಿದ ತಂದೆ, ಅವಳ ಹತ್ಯೆ ಮಾಡಿಬಿಟ್ಟ- ಅಸಲಿ ಕಾರಣ ತಿಳಿದರೆ ಶಾಕ್!
ಮಗಳ ಜಾತಕದಲ್ಲಿ ಸಮಸ್ಯೆ ಇದೆ ಎಂದು ನಾಟಕವಾಡಿದ ತಂದೆ
Follow us
ಸಾಧು ಶ್ರೀನಾಥ್​
|

Updated on: Aug 21, 2023 | 2:44 PM

ತಂತ್ರಜ್ಞಾನ ಯುಗದಲ್ಲೂ ಜನರು ಮೂಢನಂಬಿಕೆಗಳನ್ನು ಬಿಡುತ್ತಿಲ್ಲ. ಅಮವಾಸ್ಯೆಯಂದು ಕ್ಷುದ್ರ ಪೂಜೆ, ನರಬಲಿಯಂತಹ ದುಷ್ಕೃತ್ಯಗಳು ನಡೆಯುತ್ತವೆ. ಈ ಮಧ್ಯೆ ಮಗಳ ಜಾತಕ ಚೆನ್ನಾಗಿಲ್ಲ, ಮುಂದೆ ಅವಳಿಗೆ ತೊಂದರೆಯಾಗುತ್ತದೆ ಎಂದು ಹೇಳಿದ ತಂದೆಯೊಬ್ಬ ಮಗಳನ್ನು ಅತ್ಯಂತ ಬರ್ಬರವಾಗಿ ಕೊಂದಿದ್ದಾನೆ. ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದೆ. ವಿಜಯವಾಡ ಮೂಲದ ಕುಂದೇಟಿ ಚಂದ್ರಶೇಖರ್ (father) ಮತ್ತು ಹಿಮಬಿಂದು ದಂಪತಿಗೆ ಎಂಟು ವರ್ಷದ ಮೋಕ್ಷಜ (daughter) ಮಗುವಿದೆ. ಇಬ್ಬರೂ ಹೈದರಾಬಾದಿನಲ್ಲಿ (Hyderabad) ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ ತಮ್ಮ ಕೆಲಸವನ್ನು ಕಳಪೆಯಾಗಿ ಮಾಡುತ್ತಿದ್ದಕ್ಕಾಗಿ ಕಂಪನಿ ಅವರನ್ನು ವಜಾಗೊಳಿಸಿತು. ತಾನು ಕೆಲಸ ಕಳೆದುಕೊಂಡಿದ್ದಕ್ಕೆ ಹೆಂಡತಿಯೇ ಕಾರಣ ಎಂದು ಮೊದಲು ಅವಳತ್ತ ಕಣ್ಣು ಹಾಯಿಸಿದ ಪತಿ. ಈ ಬಗ್ಗೆ ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಇದರ ಕಾಟ ತಾಳದೆ, ಪತ್ನಿ ತನ್ನ ಮಗಳನ್ನು ಕರೆದುಕೊಂಡು ಬಿಎಚ್‌ಎಸ್‌ಇಎಲ್‌ನಲ್ಲಿರುವ ತನ್ನ ತವರು ಮನೆ ಸೇರಿಕೊಂಡಿದ್ದಳು. ಚಂದ್ರಶೇಖರ್ ಹೆಂಡತಿ ತವರಿಗೆ ಹೋಗಿ ವಾರಕ್ಕೆ ಎರಡು ಬಾರಿ ಮಗಳನ್ನು ಭೇಟಿಯಾಗುತ್ತಿದ್ದ. ಆ ಸಂದರ್ಭದಲ್ಲಿ ಮಗಳ ಜಾತಕ ತಿಳಿದುಕೊಂಡಿದ್ದಾನೆ. ಮುಂದೆ ಆಕೆ ಕಷ್ಟಗಳನ್ನು ಅನುಭವಿಸುತ್ತಾಳೆ ಎಂದು ತಿಳಿದುಕೊಂಡ ಅಪ್ಪ, ತನ್ನ ಮಗಳು ಮುಂದೆ ಕಷ್ಟ ಪಡುವುದು ಬೇಡವೆಂದು, ಹೆಂಡತಿಯೇ ಒಂಟಿಯಾಗಿ ನರಕ ನೋಡಬೇಕು ಎಂಬ ಆಲೋಚನೆಯಿಂದ ಮೋಕ್ಷಜಳನ್ನು ಸಾಯಿಸಲು ನಿರ್ಧರಿಸಿದ್ದಾನೆ.

ಕಳೆದ ಶುಕ್ರವಾರ ಆಗಸ್ಟ್​ 18ರಂದು ಸಂಜೆ ಕಾರಿನಲ್ಲಿ ಮೋಕ್ಷಜಾಳನ್ನು ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಶಾಲೆ ಮುಗಿಸಿ ಬಹಳ ಹೊತ್ತಾದರೂ ಮಗು ಮನೆಗೆ ಬಂದಿರಲಿಲ್ಲ. ಕುಟುಂಬಸ್ಥರು ಚಂದ್ರಶೇಖರನಿಗೆ ಕರೆ ಮಾಡಿದರು. ಮಗು ಮಲಗಿದೆ ಎಂದು ಹೇಳಿದ್ದಾನೆ. ಮುಂದೆ… ತನ್ನ ಫೋನ್ ಸ್ವಿಚ್ ಆಫ್ ಮಾಡಿಟ್ಟುಕೊಂಡಿದ್ದಾನೆ. ಹತ್ಯೆ ಮಾಡಿದ ನಂತರ ಆತ ಔಟರ್​ ರಿಂಗ್​ ರೋಡ್​​ನಲ್ಲಿ (ಓಆರ್‌ಆರ್‌) ಕಾರಿನಲ್ಲಿ ಶವವನ್ನು ಸಾಗಿಸಿ, ಪೇಟಾ ಮತ್ತು ಕೊಹೆಡಾ ನಡುವೆ ಎಲ್ಲಿಯಾದರೂ ಶವವನ್ನು ಬಿಸಾಕಲು ಜಾಗ ಹುಡುಕಾಡಿದ್ದಾನೆ. ಅಷ್ಟೇ.. ಸರಿಯಾಗಿ ಅದೇ ವೇಳೆ ದಾರಿ ಮಧ್ಯೆ ರಾತ್ರಿ ಹತ್ತೂವರೆ ಗಂಟೆಗೆ ಅಪ್ಪನ ಟೈರ್ ಒಡೆದು ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಹಳೆ KSRTC ಬಸ್‌ಗಳಿಗೆ ಹೊಸ ಕಳೆ: ಶೀಘ್ರವೇ ರಸ್ತೆಗಿಳಿಯಲಿವೆ ವಿನೂತನ ಮಾದರಿಯ ಬಸ್, ವಿಶೇಷತೆ ಏನು ಗೊತ್ತಾ?

ಕಾರಿನಲ್ಲಿದ್ದ ಅಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲಿದ್ದವರು ಸಹಾಯಕ್ಕಾಗಿ ಚಂದ್ರಶೇಖರ್ ಬಳಿಗೆ ತೆರಳಿ, ಆತನನ್ನು ಗಮನಿಸಿದ್ದಾರೆ. ಸಹಾಯಕ್ಕಾಗಿ ಹೋದ ಆ ಸ್ಥಳೀಯರು ಚಂದ್ರಶೇಖರ್ ಅವರ ಬಟ್ಟೆಯ ಮೇಲೆ ರಕ್ತದ ಕಲೆಗಳನ್ನು ಕಂಡು ಕಾರಿನಲ್ಲಿ ಕಣ್ಣುಹಾಯಿಸಿದ್ದಾರೆ. ಅಲ್ಲಿ ಮಗುವಿನ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರೊಂದಿಗೆ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು