ಭಾರತಕ್ಕೆ ಅಪ್ಪಳಿಸುತ್ತಿದೆ ರಿಯಲ್ ಮಿ 12 ಪ್ರೊ ಸರಣಿ: ರೋಚಕತೆ ಸೃಷ್ಟಿಸಿದ ಫೀಚರ್ಸ್

Realme 12 Pro series Launch Date: ಈ ಹೊಸ ಸ್ಮಾರ್ಟ್‌ಫೋನ್ ಸರಣಿಯಲ್ಲಿ ರಿಯಲ್‌ ಮಿ 12 ಪ್ರೊ, ರಿಯಲ್‌ ಮಿ 12 ಪ್ರೊ + ಮತ್ತು ರಿಯಲ್ ಮಿ 12+ ಎಂಬ ಮೂರು ಫೋನುಗಳಿವೆ ಎಂದು ಹೇಳಲಾಗಿದೆ. ಜನವರಿ 29 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಆಗಲಿದೆ.

ಭಾರತಕ್ಕೆ ಅಪ್ಪಳಿಸುತ್ತಿದೆ ರಿಯಲ್ ಮಿ 12 ಪ್ರೊ ಸರಣಿ: ರೋಚಕತೆ ಸೃಷ್ಟಿಸಿದ ಫೀಚರ್ಸ್
realme 12 pro series
Follow us
Vinay Bhat
|

Updated on: Jan 15, 2024 | 12:45 PM

ಪ್ರಸಿದ್ಧ ರಿಯಲ್ ಮಿ ಕಂಪನಿಯ 2024ರ ಬಹುನಿರೀಕ್ಷಿತ ಸ್ಮಾರ್ಟ್​ಫೋನ್ ರಿಯಲ್ ಮಿ 12 ಪ್ರೊ ಸರಣಿ (Realme 12 Pro series) ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಬ್ರ್ಯಾಂಡ್ ಅಧಿಕೃತವಾಗಿ ರಿಯಲ್ ಮಿ 12 ಪ್ರೊ ಸರಣಿಯ ಭಾರತ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಬಿಡುಗಡೆ ಕಾರ್ಯಕ್ರಮವು ಜನವರಿ 29 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಈ ಹೊಸ ಸ್ಮಾರ್ಟ್‌ಫೋನ್ ಸರಣಿಯಲ್ಲಿ ರಿಯಲ್‌ ಮಿ 12 ಪ್ರೊ, ರಿಯಲ್‌ ಮಿ 12 ಪ್ರೊ + ಮತ್ತು ರಿಯಲ್ ಮಿ 12+ ಎಂಬ ಮೂರು ಫೋನುಗಳಿವೆ ಎಂದು ಹೇಳಲಾಗಿದೆ.

ಮಲೇಷ್ಯಾದ ಪ್ರಮಾಣೀಕರಣ ಸೈಟ್‌ನಲ್ಲಿ ರಿಯಲ್ ಮಿ 12+ 5G ಫೀಚರ್ಸ್ ಬಗ್ಗೆ ಕೆಲ ಮಾಹಿತಿ ಸೋರಿಕೆ ಆಗಿದೆ. ಆದರೆ, ಇದು ಅಧಿಕೃತವಲ್ಲ. ಮೂಲಗಳ ಪ್ರಕಾರ ಈ ಫೋನ್ 64MP ಪ್ರಾಥಮಿಕ ಕ್ಯಾಮೆರಾ ಮತ್ತು 8MP ಸೆಕೆಂಡರಿ ಕ್ಯಾಮೆರಾದೊಂದಿಗೆ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ ಎಂದು ಹೇಳಲಾಗಿದೆ. ಇದು 16MP ಮುಂಭಾಗದ ಕ್ಯಾಮೆರಾ ಮತ್ತು 67W ವೇಗದ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಈ ಸರಣಿಯಲ್ಲಿ ಬಿಡುಗಡೆ ಆಗಲಿರುವ ಬಜೆಟ್ ಫೋನ್ ಇದಾಗಿದೆ ಎಂದು ಹೇಳಲಾಗಿದೆ.

New SIM Card: ಹೊಸ ಸಿಮ್ ಕಾರ್ಡ್ ಬೇಕಾದ್ರೆ ಈ ರೂಲ್ಸ್ ಫಾಲೋ ಮಾಡ್ಲೇಬೇಕು!

ಇದನ್ನೂ ಓದಿ
Image
ಐಫೋನ್ 15 ಬೇಕಿದ್ದರೆ ಇಂದೇ ಖರೀದಿಸಿ: ಇದಕ್ಕಿಂತ ಕಡಿಮೆ ಬೆಲೆಗೆ ಸಿಗಲ್ಲ
Image
ಜಿಯೋ-ಏರ್ಟೆಲ್ ಬಳಕೆದಾರರಿಗೆ ಶಾಕ್: ಅನ್ಲಿಮಿಟೆಡ್ 5G ಇಂಟರ್ನೆಟ್ ಅಂತ್ಯ
Image
ಸ್ಮಾರ್ಟ್​ಫೋನ್​ಗೆ ವೈರಸ್ ಬರೋದನ್ನು ತಪ್ಪಿಸಲು ಸಿಂಪಲ್ ಟಿಪ್ಸ್
Image
ಸಖತ್ ಸೌಂಡ್ ಮಾಡುತ್ತಿದೆ ನಥಿಂಗ್ ಫೋನ್ 2a ಸ್ಮಾರ್ಟ್​ಫೋನ್: ಹೇಗಿರಲಿದೆ?

ರಿಯಲ್ ಮಿ 12 ಪ್ರೊ ಸರಣಿ ಫೋನ್‌ಗಳ ಬಗ್ಗೆ ಇನ್ನೂ ಹೆಚ್ಚಿನದನ್ನು ಬಹಿರಂಗಪಡಿಸಿಲ್ಲ. ಇದು ಲೆದರ್ ಫಿನಿಶ್ ಮತ್ತು ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿರುವ ಫೋನ್‌ನ ಹಿಂಭಾಗದ ವಿನ್ಯಾಸವನ್ನು ಬಹಿರಂಗಪಡಿಸುವ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ‘ಸಬ್‌ಮರೀನ್ ಬ್ಲೂ’ ಬಣ್ಣದ ಆಯ್ಕೆಯಲ್ಲಿಯೂ ಬರುತ್ತಿದೆ. ರಿಯಲ್ ಮಿ 12 ಪ್ರೊ 1/2-ಇಂಚಿನ ಇಮೇಜ್ ಸಂವೇದಕದೊಂದಿಗೆ ದೊಡ್ಡ OV64B ಪೆರಿಸ್ಕೋಪ್ ಟೆಲಿಫೋಟೋ ಸಂವೇದಕವನ್ನು ಹೊಂದಿದೆ ಎಂಬ ಮಾತಿದೆ.

ರಿಯಲ್ ಮಿ 12 ಪ್ರೊ ಸರಣಿಯ ನಿರೀಕ್ಷಿತ ಫೀಚರ್ಸ್:

ಡಿಸ್‌ಪ್ಲೇ: ರಿಯಲ್ ಮಿ 12 ಪ್ರೊ 2412×1080 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ 6.7-ಇಂಚಿನ AMOLED ಡಿಸ್​ಪ್ಲೇಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪ್ರೊಸೆಸರ್: ರಿಯಲ್ ಮಿ 12 ಪ್ರೊ+ ಕ್ವಾಲ್ಕಂ ಸ್ನಾಪ್​ಡ್ರಾಗನ್ 7s Gen 2 ಮೂಲಕ ಕಾರ್ಯನಿರ್ವಹಿಸಬಹುದು.

RAM ಮತ್ತು ಸಂಗ್ರಹಣೆ: ಎರಡೂ ಫೋನ್‌ಗಳು 6GB + 128GB, 8GB + 256GB, 12GB + 512GB ಮತ್ತು 16GB + 1TB ನ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ರಿಯಲ್ ಮಿ 12 ಪ್ರೊ ಕ್ಯಾಮೆರಾಗಳು: ರಿಯಲ್ ಮಿ 12 ಪ್ರೊ ಅನ್ನು 50MP ಪ್ರಾಥಮಿಕ ಕ್ಯಾಮೆರಾ, 32MP ಸೆಕೆಂಡರಿ ಲೆನ್ಸ್ ಮತ್ತು 8MP ಸಂವೇದಕದೊಂದಿಗೆ ಪಟ್ಟಿ ಮಾಡಲಾಗಿದೆ. ಸೆಲ್ಫಿಗಳಿಗಾಗಿ, ಇದು 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿರುತ್ತದೆ.

ರಿಯಲ್ ಮಿ 12 ಪ್ರೊ+ ಕ್ಯಾಮೆರಾಗಳು: ರಿಯಲ್ ಮಿ 12 ಪ್ರೊ+ ಗೆ ಸಂಬಂಧಿಸಿದಂತೆ, ಇದು 64MP ಪ್ರಾಥಮಿಕ ಕ್ಯಾಮೆರಾ, 50MP ಸೆಕೆಂಡರಿ ಲೆನ್ಸ್, 8MP ಕ್ಯಾಮೆರಾ ಮತ್ತು 32MP ಫ್ರಂಟ್ ಕ್ಯಾಮೆರಾ ಆಗಿರುತ್ತದೆ.

ಬ್ಯಾಟರಿ: ಎರಡೂ ಫೋನ್‌ಗಳು ಒಂದೇ 4,880mAh ಬ್ಯಾಟರಿಯೊಂದಿಗೆ ಪಟ್ಟಿಮಾಡಲಾಗಿದೆ. ಇದು ಎಷ್ಟು ವೋಲ್ಟ್ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ ಎಂಬುದು ಬಹಿರಂಗವಾಗಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್