ವಿಶ್ವದಲ್ಲಿ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿರುವ ಪ್ರಸಿದ್ಧ ರಿಯಲ್ ಮಿ ಕಂಪನಿ ಸದ್ಯದಲ್ಲೇ ಶವೋಮಿಯನ್ನು (Xiaomi) ಹಿಂದಿಕ್ಕಿ ನಂಬರ್ ಒನ್ ಪಟ್ಟ ಅಲಂಕರಿಸಿದರೆ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ಅಷ್ಟರ ಮಟ್ಟಿಗೆ ಅತ್ಯುತ್ತಮ ಸ್ಮಾರ್ಟ್ಫೋನ್ಗಳನ್ನು ರಿಯಲ್ ಮಿ ಪರಿಚಯಿಸುತ್ತಿದೆ. ಇದೀಗ ಮತ್ತೆರಡು ಬಲಿಷ್ಠವಾದ ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಅದುವೆ ರಿಯಲ್ ಮಿ ಕ್ಯೂ5 (Realme Q5) ಮತ್ತು ರಿಯಲ್ ಮಿ ಕ್ಯೂ5 ಪ್ರೊ (Realme Q5 Pro). ಈ ಎರಡೂ ರಿಯಲ್ ಮಿಯ ನೂತನ ಫೋನ್‌ಗಳು ತ್ರಿವಳಿ ಕ್ಯಾಮೆರಾ ರಚನೆ ಹಾಗೂ 120Hz ಡಿಸ್‌ಪ್ಲೇಗಳೊಂದಿಗೆ ಬರುತ್ತವೆ. ಸದ್ಯಕ್ಕೆ ವಿದೇಶದಲ್ಲಿ ಅನಾವರಣಗೊಂಡಿರುವ ಈ ಫೋನ್ ಕೆಲವೇ ತಿಂಗಳಲ್ಲಿ ಭಾರತಕ್ಕೆ ಕಾಲಿಡಲಿದೆ. ಇದರಲ್ಲಿ ರಿಯಲ್ ಮಿ Q5 ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್ ಹೊಂದಿದ್ದರೆ, ರಿಯಲ್ ಮಿ Q5 ಪ್ರೊ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 870 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಹಾಗಾದ್ರೆ ಈ ಫೋನಿನ ಬೆಲೆ ಭಾರತದಲ್ಲಿ ಎಷ್ಟಿರಬಹುದು?, ವಿಶೇಷತೆಗಳು ಏನೆಲ್ಲ ಇವೆ ಎಂಬುದನ್ನು ನೋಡೋಣ.
ರಿಯಲ್ ಮಿ Q5 ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ ಇದು 6.6 ಇಂಚಿನ ಫುಲ್ ಹೆಚ್‌ಡಿ + LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರೀಫ್ರೇಶ್ ರೇಟ್ನಿಂದ ಕೂಡಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಅಂತೆಯೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5000mAh ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 60W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬಿಡುಗಡೆ ಆಗಿದೆ.
ರಿಯಲ್‌ಮಿ Q5 ಪ್ರೊ ಫೋನ್ ಕೂಡ 6.6 ಇಂಚಿನ E4 AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರೀಫ್ರೇಶ್ ರೇಟ್ನಿಂದ ಕೂಡಿದ್ದು, 1,300 ನಿಟ್ಸ್ ಬ್ರೈಟ್ನೆಸ್ ಹೊಂದಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಅಡ್ರೊನಾ 650 GPU ಗ್ರಾಫಿಕ್ಸ್ ಸೌಲಭ್ಯ ಪಡೆದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5000mAh ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದ್ದು, ಇದು 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ರಿಲೀಸ್ ಆಗಿದೆ.
ವಿದೇಶದಲ್ಲಿ ರಿಯಲ್ ಮಿ Q5 ಫೋನ್ ಒಟ್ಟು ಮೂರು ಮಾದರಿಯಲ್ಲಿ ಖರೀದಿಗೆ ಲಭ್ಯವಿದೆ. ಇದರ 6GB RAM ಮತ್ತು 128GB ಸ್ಟೋರೇಜ್‌ನ ಬೇಸ್ ಮಾಡೆಲ್ CNY 1,399, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 16,700 ರೂ. ಎನ್ನಬಹುದು. ಇನ್ನು ರಿಯಲ್ ಮಿ Q5 ಪ್ರೊ ಫೋನ್ ಕೂಡ ಮೂರು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 6GB RAM ಮತ್ತು 128GB ಸ್ಟೋರೇಜ್‌ನ ಬೇಸ್ ಮಾಡೆಲ್ CNY 1,799. ಇದರ ಬೆಲೆ ಭಾರತದಲ್ಲಿ ಅಂದಾಜು 21,500 ರೂ. ಎಂದು ಅಂದಾಜಿಸಲಾಗಿದೆ.
Redmi 10A: ಕೇವಲ 8,499 ರೂಪಾಯಿಗೆ ಎಂಥಾ ಫೋನ್: ರೆಡ್ಮಿ 10A ಕಂಡು ದಂಗಾದ ಬಜೆಟ್ ಪ್ರಿಯರು