ಕೇವಲ ಸ್ಮಾರ್ಟ್ಫೋನ್ ವಲಯದಲ್ಲಿ ಮಾತ್ರವಲ್ಲದೆ ಇತರೆ ಕ್ಷೇತ್ರದಲ್ಲೂ ಭರ್ಜರಿ ಯಶಸ್ಸು ಸಾಧಿಸುತ್ತಿರುವ ರಿಯಲ್‌ಮಿ (Realme) ಕಂಪೆನಿ ಇದೀಗ ಲ್ಯಾಪ್‌ಟಾಪ್ ವಲಯಕ್ಕೂ ಕಾಲಿಟ್ಟಿದೆ. ಸದ್ಯ ಭಾರತದಲ್ಲಿ ತನ್ನ ಚೊಚ್ಚಲ ಲ್ಯಾಪ್‌ಟಾಪ್ (Laptop) ಅನ್ನು ಬಿಡುಗಡೆ ಮಾಡಿರುವ ರಿಯಲ್ ಮಿ ಕಂಪೆನಿ ಸಾಕಷ್ಟು ಸುದ್ದು ಮಾಡುತ್ತಿದೆ. ಈ ಲ್ಯಾಪ್ಟಾಪ್ಗೆ ರಿಯಲ್‌ಮಿ ಬುಕ್ ಸ್ಲಿಮ್ (Realme Book Slim) ಎಂದು ಹೆಸರಿಸಲಾಗಿದ್ದು, 11ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ ಮತ್ತು 2 ಕೆ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಹೊಂದಿರುವುದು ವಿಶೇಷ.
ಇದರಲ್ಲಿ ಡ್ಯುಯಲ್-ಫ್ಯಾನ್ ಕೂಲಿಂಗ್ ಅನ್ನು ಅಳವಡಡಿಸಲಾಗಿದ್ದು, ಈ ಮೂಲಕ ಭಾರೀ ಕೆಲಸದ ಹೊರೆಗಳ ಸಮಯದಲ್ಲಿ ಲ್ಯಾಪ್ಟಾಪ್ ಬಿಸಿ ಆಗುವುದಿಲ್ಲ. 8GB RAM ಮತ್ತು 512GB SSD ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತದೆ. ಅಲ್ಲದೆ I/O ಟೈಪ್-ಸಿ ಯುಎಸ್‌ಬಿ 3, ಟೈಪ್-ಸಿ ಯುಎಸ್‌ಬಿ 4/ಥಂಡೆಬೋಲ್ಡ್ ಪೋರ್ಟ್, ಟೈಪ್-ಎ ಯುಎಸ್‌ಬಿ 3 ಮತ್ತು ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ.
ರಿಯಲ್‌ಮಿ ಬುಕ್ ಸ್ಲಿಮ್ 11 ನೇ ಜನ್ ಇಂಟೆಲ್ ಕೋರ್ i3 ಪ್ರೊಸೆಸರ್ 8GB RAM/256GB SSD ಸ್ಟೋರೇಜ್ ವೇರಿಯೆಂಟ್‌ಗೆ ಭಾರತದಲ್ಲಿ 46,999 ರೂ. ನಿಗದಿ ಮಾಡಲಾಗಿದೆ. ಹಾಗೆಯೇ 11 ನೇ ಜೆನ್ ಇಂಟೆಲ್ ಕೋರ್ i5 ಪ್ರೊಸೆಸರ್ 8GB RAM/512GB ಸ್ಟೋರೇಜ್ ವೇರಿಯಂಟ್‌ಗೆ 59,999 ರೂ. ಇದೆ. ಈ ಎರಡೂ ರೂಪಾಂತರಗಳು ಆಗಸ್ಟ್ 30 ರಿಂದ ರಿಯಲ್ ಮಿ.ಕಾಮ್ ಮತ್ತು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಸಿಗಲಿದೆ.
ಇನ್ನೂ ಈ ಹೊಸ ಲ್ಯಾಪ್ಟಾಪ್ ವೈ-ಫೈ 6 ನೊಂದಿಗೆ ಬರುತ್ತದೆ ಮತ್ತು ಹರ್ಮನ್ ಕಾರ್ಡನ್ ಟ್ಯೂನ್ ಮಾಡಿದ ಸ್ಟೀರಿಯೋ ಸ್ಪೀಕರ್‌ಗಳನ್ನು ಪ್ಯಾಕ್ ಮಾಡುತ್ತದೆ. ಇದಕ್ಕೆ 54Wh ಬ್ಯಾಟರಿಯನ್ನು ನೀಡಲಾಗಿದ್ದು ಒಮ್ಮೆ ಬ್ಯಾಟರಿ ಫುಲ್ ಆದರೆ 11 ಗಂಟೆಗಳವರೆಗೆ ಇರುತ್ತದೆ. ಅಲ್ಲದೆ ಈ ಲ್ಯಾಪ್ಟಾಪ್ 65W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಕೇವಲ 30 ನಿಮಿಷಗಳಲ್ಲಿ 0-50 ಪ್ರತಿಶತದಷ್ಟು ಚಾರ್ಜ್ ಅನ್ನು ಒದಗಿಸುತ್ತದೆ ಎಂದು ಕಂಪನಿ ತಿಳಿಸಿದೆ.
ರಿಯಲ್‌ಮಿ ಬುಕ್ ಸ್ಲಿಮ್ ಲ್ಯಾಪ್‌ಟಾಪ್ ಹೊಸ ಪಿಸಿ ಕನೆಕ್ಟ್ ಆಪ್ ನೊಂದಿಗೆ ಬರುತ್ತದೆ, ಇದು ವೈಫೈ ಡೈರೆಕ್ಟ್ ಮೂಲಕ ಬಳಕೆದಾರರಿಗೆ ಲ್ಯಾಪ್ಟಾಪ್ ಒಳಗೆ ತಮ್ಮ ರಿಯಲ್ ಮಿ ಫೋನುಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಒದಗಿಸುತ್ತದೆ. ಮೈಕ್ರೋಸಾಪ್ಟ್ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಈ ವರ್ಷದ ಕೊನೆಯಲ್ಲಿ ಪ್ರಾರಂಭವಾದಾಗ ವಿಂಡೋಸ್ 11 ಗೆ ಉಚಿತ ಅಪ್ಡೇಟ್ ಕೂಡ ಬರುತ್ತದೆ.
Amitabh Bachchan: ಭಾರತದ ಮೊದಲ ಸೆಲೆಬ್ರಿಟಿ: ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ವಾಯ್ಸ್‌ನಲ್ಲಿ ಅಲೆಕ್ಸಾ!
(Realme launches its first ever laptop Realme Book Slim in India Price other details here)