ಮೂರು ಹೊಸ ಆನ್‌ಲೈನ್ ಅಪ್ಲಿಕೇಶನ್ ಬಿಡುಗಡೆ: ಸರ್ಕಾರಿ ಮ್ಯಾಪ್ ಇದೀಗ ಸಾರ್ವಜನಿಕರಿಗೆ ಲಭ್ಯ
ಇದು ಕಳೆದ ಆರು ತಿಂಗಳ ಹಿಂದೆ ಫೆಬ್ರವರಿಯಲ್ಲಿ ಭೌಗೋಳಿಕ ವಲಯದಲ್ಲಿ ಸರ್ಕಾರ ಮಾಡಿದ ಮತ್ತೊಂದು ಸುಧಾರಣೆಯಾಗಿದೆ.
ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು (Ministry of Science and Technology) ಮೂರು ಹೊಸ ಆನ್‌ಲೈನ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮೊದಲ ಬಾರಿಗೆ ಆನ್ಲೈನ್ನಲ್ಲಿ ಸರ್ಕಾರಿ ಆ್ಯಪ್ ಅನ್ನು ಸಾರ್ವಜನಿಕರು ಉಪಯೋಗಿಸಬಹುದು.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಬಿಡುಗಡೆ ಮಾಡಿರುವ ಮೂರು ಆನ್‌ಲೈನ್ ಆ್ಯಪ್ ಪೈಕಿ ಮೊದಲನೆಯದು ಸರ್ವೇ ಆಫ್ ಇಂಡಿಯಾ (SOI), SOI’s SARTHI ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಮತ್ತು ನ್ಯಾಶನಲ್ ಅಟ್ಲಾಸ್ನ ಮ್ಯಾಂಚಿಟ್ರನ್ ಎಂಟರ್‌ಪ್ರೈಸ್ ಜಿಯೋಪೋರ್ಟಲ್ ಮತ್ತು ಥೆಮ್ಯಾಟಿಕ್ ಮ್ಯಾಪಿಂಗ್ ಸಂಸ್ಥೆ (NATMO).
ಇದು ಕಳೆದ ಆರು ತಿಂಗಳ ಹಿಂದೆ ಫೆಬ್ರವರಿಯಲ್ಲಿ ಭೌಗೋಳಿಕ ವಲಯದಲ್ಲಿ ಸರ್ಕಾರ ಮಾಡಿದ ಮತ್ತೊಂದು ಸುಧಾರಣೆಯಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಸಚಿವಾಲಯ ಬಿಡುಗಡೆ ಮಾಡಿದ ಹೊಸ ಕರಡು ರಾಷ್ಟ್ರೀಯ ಭೂಪ್ರದೇಶ ನೀತಿಯ ಪ್ರಕಾರ, ಜಿಯೋಸ್ಪೇಷಿಯಲ್ ಡೇಟಾವನ್ನು ಸಾಮಾನ್ಯ ಗುರಿಯಾಗಿ ಪರಿಗಣಿಸಬೇಕು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ತನ್ನ ಹೊಸ ನೀತಿಯಲ್ಲಿ ಹೇಳಲಾಗಿದೆ.
Samsung Galaxy M32 5G: ಸ್ಯಾಮ್ಸಂಗ್ನಿಂದ ಬಲಿಷ್ಠ ಬ್ಯಾಟರಿಯ ಹೊಸ 5G ಸ್ಮಾರ್ಟ್ಫೋನ್ ಬಿಡುಗಡೆಗೆ ದಿನಾಂಕ ನಿಗದಿ
Realme Book: ರಿಯಲ್ ಮಿಯಿಂದ ಭಾರತದಲ್ಲಿ ಮೊಟ್ಟ ಮೊದಲ ಲ್ಯಾಪ್ಟಾಪ್ ಬಿಡುಗಡೆ: ಬೆಲೆ ಎಷ್ಟು?
(Government Maps Now Easily Accessible To Public Through Online Portals)