Redmi 10: ಇದೀಗ 10,999 ರೂಪಾಯಿಯ ರೆಡ್ಮಿ 10 ಖರೀದಿಗೆ ಲಭ್ಯ: ಆಫರ್​​ನಲ್ಲಿ ಸಿಗಲಿದೆ ಮತ್ತಷ್ಟು ಡಿಸ್ಕೌಂಟ್

Redmi 10 First Sale: ಇಷ್ಟೆಲ್ಲ ಭರ್ಜರಿ ಫೀಚರ್​ಗಳಿಂದ ಕೂಡಿರುವ ಕೇವಲ 10,999 ರೂ. ಬೆಲೆ ಇರುವ ರೆಡ್ಮಿ 10 ಇಂದಿನಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​​ (Flipkart) ಸೇರಿದಂತೆ ಎಂಐ.ಕಾಮ್‌, ಎಂಐ ಹೋಮ್​ನಲ್ಲಿ ಮಾರಾಟ ಶುರುವಾಗಿದೆ. ಮೊದಲ ಸೇಲ್ ಆದ ಕಾರಣ ಭರ್ಜರಿ ಆಫರ್​ಗಳನ್ನು ಕೂಡ ನೀಡಲಾಗಿದ್ದು, ಇನ್ನಷ್ಟು ಡಿಸ್ಕೌಂಟ್​​ಗೆ ಈ ಫೋನನ್ನು ನಿಮ್ಮದಾಗಿಸಬಹುದು.

Redmi 10: ಇದೀಗ 10,999 ರೂಪಾಯಿಯ ರೆಡ್ಮಿ 10 ಖರೀದಿಗೆ ಲಭ್ಯ: ಆಫರ್​​ನಲ್ಲಿ ಸಿಗಲಿದೆ ಮತ್ತಷ್ಟು ಡಿಸ್ಕೌಂಟ್
Redmi 10
Updated By: Vinay Bhat

Updated on: Mar 24, 2022 | 12:27 PM

ಭಾರತದಲ್ಲಿ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿಸಿರುವ ಶವೋಮಿ (Xioami) ಕಂಪನಿಯ ಸ್ಮಾರ್ಟ್​ಫೋನ್​​ಗಳು ಒಂದರ ಹಿಂದೆ ಒಂದರಂತೆ ಸೇಲ್ ಕಾಣುತ್ತಿದೆ. ಈ ಪೈಕಿ ಇದೀಗ ಮೊನ್ನೆಯಷ್ಟೆ ಬಿಡುಗಡೆ ಆದ ಹೊಸ ರೆಡ್ಮಿ 10 (Redmi 10) ಇಂದಿನಿಂದ ಖರೀದಿಗೆ ಸಿಗುತ್ತಿದೆ. ಅತ್ಯಂತ ಬಲಿಷ್ಠವಾದ ದೀರ್ಘ ಬಾಳಿಕೆ ಬರುವ 6,000mAh ಸಾಮರ್ಥ್ಯದ ಬ್ಯಾಟರಿ ಈ ಫೋನ್​ಗೆ ನೀಡಲಾಗಿದೆ. ಅಲ್ಲದೆ ವಾಟರ್‌ಡ್ರಾಪ್-ಶೈಲಿಯ ಡಿಸ್‌ಪ್ಲೇ, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದ್ದು, ಇದರಲ್ಲಿರುವ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್​ನಿಂದ ಕೂಡಿದೆ. ಇಷ್ಟೆಲ್ಲ ಭರ್ಜರಿ ಫೀಚರ್​ಗಳಿಂದ ಕೂಡಿರುವ ಕೇವಲ 10,999 ರೂ. ಬೆಲೆ ಇರುವ ರೆಡ್ಮಿ 10 ಇಂದಿನಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​​ (Flipkart) ಸೇರಿದಂತೆ ಎಂಐ.ಕಾಮ್‌, ಎಂಐ ಹೋಮ್​ನಲ್ಲಿ ಮಾರಾಟ ಶುರುವಾಗಿದೆ. ಮೊದಲ ಸೇಲ್ ಆದ ಕಾರಣ ಭರ್ಜರಿ ಆಫರ್​ಗಳನ್ನು ಕೂಡ ನೀಡಲಾಗಿದ್ದು, ಇನ್ನಷ್ಟು ಡಿಸ್ಕೌಂಟ್​​ಗೆ ಈ ಫೋನನ್ನು ನಿಮ್ಮದಾಗಿಸಬಹುದು.

ಬೆಲೆ ಎಷ್ಟು?:

ಭಾರತದಲ್ಲಿ ರೆಡ್ಮಿ 10 ಸ್ಮಾರ್ಟ್‌ಫೋನ್‌ ಒಟ್ಟು ಮಾದರಿಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಗೆ ಕೇವಲ 10,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 6GB RAM ಮತ್ತು 128GB ಮಾದರಿಯ ಆಯ್ಕೆಗೆ 12,999 ರೂ. ಬೆಲೆ ಹೊಂದಿದೆ. ಇದು ಕೆರಿಬಿಯನ್ ಗ್ರೀನ್, ಮಿಡ್‌ನೈಟ್ ಬ್ಲಾಕ್ ಮತ್ತು ಪೆಸಿಫಿಕ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಇನ್ನು ರೆಡ್ಮಿ 10 ಲಾಂಚ್‌ ಆಫರ್‌ನಲ್ಲಿ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ EMI ಗಳನ್ನು ಬಳಸುವ ಗ್ರಾಹಕರಿಗೆ 1,000 ತ್ವರಿತ ರಿಯಾಯಿತಿ ಘೋಷಿಸಲಾಗಿದೆ. ಹೀಗಾಗಿ ಈ ಫೋನನ್ನು ನೀವು 9,999 ರೂ. ಗೆ ಖರೀದಿಸಬಹುದು.

 

ಏನು ವಿಶೇಷತೆ?:

ರೆಡ್ಮಿ 10 ಸ್ಮಾರ್ಟ್‌ಫೋನ್‌ 6.7 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20.6:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇದು 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ನೀಡಲಾಗಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ನಲ್ಲಿ MIUI 13 ಜೊತೆಗೆ ರನ್ ಆಗುತ್ತದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ 2GB ವರೆಗೆ ಇಂಟರ್‌ಬಿಲ್ಟ್‌ ಸ್ಟೋರೇಜ್‌ ಬಳಸಿಕೊಂಡು ವಾಸ್ತವಿಕವಾಗಿ RAM ಅನ್ನು ವಿಸ್ತರಿಸಬಹುದು.

ವಿಶೇಷವಾಗಿ ಇದು ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಕ್ಯಾಮರಾ ಸೆಟಪ್ ಅನ್ನು ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ವನ್ನು ಒಳಗೊಂಡಿದೆ.

ಇನ್ನು ಧೀರ್ಘ ಸಮಯ ಬಾಳಿಕೆ ಬರುವ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದಕ್ಕೆ ಪೂರಕವಾಗಿ ಆದಷ್ಟು ಬೇಗ ಚಾರ್ಜ್ ಆಗುವಂತಹ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಬಂಡಲ್ ಚಾರ್ಜರ್ 10W ವರೆಗೆ ಚಾರ್ಜ್ ಮಾಡುವುದನ್ನು ಮಾತ್ರ ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11ac, ಬ್ಲೂಟೂತ್ v5.0, GPS/ A-GPS, USB ಟೈಪ್-C ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ.

WhatsApp: ಯಾರ ಕಣ್ಣಿಗೂ ಕಾಣಿಸದಂತೆ ವಾಟ್ಸ್​ಆ್ಯಪ್ ಚಾಟ್ ಅನ್ನು ಶಾಶ್ವತವಾಗಿ ಹೈಡ್ ಮಾಡುವ ಟ್ರಿಕ್ ಗೊತ್ತೇ?