Redmi K50i: ಭಾರತದಲ್ಲಿಂದು ರೆಡ್ಮಿ K50i ಸ್ಮಾರ್ಟ್​​ಫೋನ್ ಬಿಡುಗಡೆ: ಬೆಲೆ ಎಷ್ಟು?, ಫೀಚರ್ಸ್ ಏನು?

| Updated By: Vinay Bhat

Updated on: Jul 20, 2022 | 6:04 AM

ರೆಡ್ಮಿ ಕೆ50ಐ (Redmi K50i) ಫೋನ್ ಇಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಈ ಫೋನ್ 67W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಹೊಂದಿದ್ದು, 15 ನಿಮಿಷ ಚಾರ್ಜ್ ಮಾಡಿದರೆ ದಿನ ಪೂರ್ತಿ ಉಪಯೋಗಿಸಬಹುದಂತೆ .

Redmi K50i: ಭಾರತದಲ್ಲಿಂದು ರೆಡ್ಮಿ K50i ಸ್ಮಾರ್ಟ್​​ಫೋನ್ ಬಿಡುಗಡೆ: ಬೆಲೆ ಎಷ್ಟು?, ಫೀಚರ್ಸ್ ಏನು?
Redmi K50i
Follow us on

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶವೋಮಿ (Xiaomi) ಸಂಸ್ಥೆ ವಿನೂತನ ಪ್ರಯೋಗ ಮಾಡುವುದರಲ್ಲಿ ಎತ್ತಿದ ಕೈ. ಮಾರುಕಟ್ಟೆಗೆ ಸದಾ ಏನಾದರು ಹೊಸ ತನವನ್ನು ಪರಿಚಯಿಸುವ ಶವೋಮಿ ಇದೀಗ ವಿಶೇಷವಾಗಿರುವ ಸ್ಮಾರ್ಟ್​​ಫೋನ್ ಒಂದನ್ನು ಪರಿಚಯಿಸಲು ಹೊರಟಿದೆ. ಇದೇ ವರ್ಷ ಕಳೆದ ಮಾರ್ಚ್​ನಲ್ಲಿ ರೆಡ್ಮಿ K50 (Redmi K50) ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್‌ ಮಾಡಿದ್ದ ಶವೋಮಿ, ಇದು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು. ಇದೀಗ ಇದರ ಮುಂದಿನ ಆವೃತ್ತಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಅದುವೇ ರೆಡ್ಮಿ ಕೆ50(Redmi K50i). ಈ ಫೋನ್ ಇಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಶಾಕಿಂಗ್ ಎಂದರೆ ಈ ಫೋನ್ 67W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಹೊಂದಿದ್ದು, 15 ನಿಮಿಷ ಚಾರ್ಜ್ ಮಾಡಿದರೆ ದಿನ ಪೂರ್ತಿ ಉಪಯೋಗಿಸಬಹುದಂತೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟಿರಬಹುದು?, ವಿಶೇಷತೆ ಏನು ಎಂಬುದನ್ನು ನೋಡೊಣ.

  • ರೆಡ್ಮಿ ತನ್ನ K50i ಸ್ಮಾರ್ಟ್​​ಫೋನ್ ಇಂದು ಮಧ್ಯಾಹ್ನ 12 ಗಂಟೆಗೆ ಅನಾವರಣ ಆಗಲಿದೆ. ಇದರ ಬೆಲೆ 24,000 ರೂ. ಯಿಂದ 28,000 ರೂ. ಒಳಗೆ ಇರಬಹುದೆಂದು ಅಂದಾಜಿಸಲಾಗಿದೆ.
  • ಇದು 6.6 ಇಂಚಿನ IPS LCD ಡಿಸ್ ಪ್ಲೇ ಹೊಂದಿರಲಿದೆ. 144 Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಜೊತೆಗೆ ಫುಲ್ ಹೆಚ್​ಡಿ+ ರೆಸಲೂಷನ್ ಇರಲಿದೆಯಂತೆ.
  • ಇದನ್ನೂ ಓದಿ
    OnePlus Nord 2T 5G: 16GB RAM, 150W ಫಾಸ್ಟ್ ಚಾರ್ಜಿಂಗ್: ಒನ್​​ಪ್ಲಸ್ ನಾರ್ಡ್​ 2T ಸ್ಮಾರ್ಟ್​​ಫೋನ್​​ ಬೆಲೆ ಬಹಿರಂಗ
    Google Pixel 6a: ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್​​ಫೋನ್ ಬೆಲೆ ಬಹಿರಂಗ: ಎಷ್ಟು ಗೊತ್ತೇ?
    ರೆನೋ 8 ಸರಣಿ ಬಿಡುಗಡೆ ಕಾರ್ಯಕ್ರಮದ ಮಧ್ಯೆ ಭಾರತದ ಒಪ್ಪೋ ಯೂಟ್ಯೂಬ್ ಚಾನೆಲ್ ದಿಢೀರ್ ಸ್ಥಗಿತ
    Oppo Reno 8 Series: ಭಾರತದಲ್ಲಿ ಬಹುನಿರೀಕ್ಷಿತ ಒಪ್ಪೋ 8 ರೆನೋ ಸರಣಿ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ
  • ಮೀಡಿಯಾ ಟೆಕ್ ಡೈಮೆನ್ಸಿಟಿ 8100 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ 12 OS ನೊಂದಿಗೆ ಕಾರ್ಯನಿರ್ವಹಿಸಲಿದೆ.
  • ಈ ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಮತ್ತು ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ.
  • ಇನ್ನು ಮುಂಭಾಗದಲ್ಲಿ ಇದು 16 ಮೆಗಾ ಪಿಕ್ಸೆಲ್ ಸಂವೇದಕವನ್ನು ಹೊಂದಿದೆ. 5,080mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 67W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಅನ್ನು ಪಡೆದಿದೆ.
  • ಉಳಿದಂತೆ ರೆಡ್ಮಿ K50i ಸ್ಮಾರ್ಟ್​​ಫೋನ್ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಇದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಸೇಲ್ ಕಾಣಲಿದೆ.