Oppo Reno 8 Series: ಭಾರತದಲ್ಲಿ ಬಹುನಿರೀಕ್ಷಿತ ಒಪ್ಪೋ 8 ರೆನೋ ಸರಣಿ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ

ಒಪ್ಪೋ ರೆನೊ 8 ಸರಣಿಯ (Oppo Reno 8 Series) ಸ್ಮಾರ್ಟ್​​ಫೋನ್ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಿದೆ. ಅದು ಒಪ್ಪೋ ರೆನೋ 8, ರೆನೋ 8 ಪ್ರೊ (Oppo Reno 8, Oppo Reno 8 Pro) ಆಗಿದೆ. ಇದರ ಜೊತೆಗೆ ಒಪ್ಪೋ ಪ್ಯಾಡ್‌ ಏರ್‌ ಮತ್ತು ಒಪ್ಪೋ ಎನ್ಕೋ X2 ಟ್ರೂಲಿ ವಾಯರ್‌ಲೆಸ್ಟ್‌ ಸ್ಟಿರಿಯೊ ಇಯರ್‌ಫೋನ್‌ಗಳು ಬಿಡುಗಡೆ ಆಗಿದೆ.

Oppo Reno 8 Series: ಭಾರತದಲ್ಲಿ ಬಹುನಿರೀಕ್ಷಿತ ಒಪ್ಪೋ 8 ರೆನೋ ಸರಣಿ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ
Oppo Reno 8 Series
Follow us
TV9 Web
| Updated By: Digi Tech Desk

Updated on:Jul 19, 2022 | 9:55 AM

ಎರಡು ತಿಂಗಳ ಹಿಂದೆ ವಿದೇಶದಲ್ಲಿ ಬಿಡುಗಡೆ ಆಗಿ ಈಗಲೂ ಧೂಳೆಬ್ಬಿಸುತ್ತಿರುವ ಒಪ್ಪೋ ರೆನೊ 8 ಸರಣಿಯ (Oppo Reno 8 Series) ಸ್ಮಾರ್ಟ್​​ಫೋನ್ ಇದೀಗ ಕೊನೆಗೂ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಿದೆ. ಇದರಲ್ಲಿ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಟೆಕ್ ಪ್ರಿಯರಂತು ಫುಲ್ ಫಿದಾ ಆಗಿದ್ದಾರೆ. ಈ ಸರಣಿ ಅಡಿಯಲ್ಲಿ ಒಟ್ಟು ಎರಡು ಫೋನ್​ಗಳು ದೇಶದಲ್ಲಿ ಅನಾವರಣಗೊಂಡಿದೆ. ಅದು ಒಪ್ಪೋ ರೆನೋ 8, ರೆನೋ 8 ಪ್ರೊ (Oppo Reno 8, Oppo Reno 8 Pro) ಆಗಿದೆ. ಇದರ ಜೊತೆಗೆ ಒಪ್ಪೋ ಪ್ಯಾಡ್‌ ಏರ್‌ (Oppo Pad Air) ಮತ್ತು ಒಪ್ಪೋ ಎನ್ಕೋ X2 ಟ್ರೂಲಿ ವಾಯರ್‌ಲೆಸ್ಟ್‌ ಸ್ಟಿರಿಯೊ ಇಯರ್‌ಫೋನ್‌ಗಳು ಬಿಡುಗಡೆ ಆಗಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆಗಳಿವೆ?, ಯಾವಾಗ ಖರೀದಿಗೆ ಲಭ್ಯ? ಎಂಬ ವಿಚಾರವನ್ನು ನೋಡೋಣ.

ಒಪ್ಪೋ ರೆನೋ 8:

ಇನ್ನು ಒಪ್ಪೋ ರೆನೋ 8 ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಒಳಗೊಂಡಿದೆ. ಆಕ್ಟಾಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 12 ಕಲರ್‌ ಒಎಸ್‌ 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ
Image
ಐಕ್ಯೂಯಿಂದ ದಿಢೀರ್ ನಿಯೋ 6 5G ಹೊಸ ವೇರಿಯೆಂಟ್ ಲಾಂಚ್: ಬೆಲೆ ಎಷ್ಟು?, ಏನು ವಿಶೇಷತೆ?
Image
Tecno Spark 9: ಬೆಲೆ ಕೇವಲ 9,499 ರೂ.: ಭಾರತದಲ್ಲಿ ಟೆಕ್ನೋ ಸ್ಪಾರ್ಕ್ 9 ಸ್ಮಾರ್ಟ್​ಫೋನ್ ಬಿಡುಗಡೆ: ಏನು ವಿಶೇಷತೆ?
Image
Apple iPhone: ಬುಲೆಟ್ ತಾಗಿದ್ದು ಕಿಸೆಯಲ್ಲಿದ್ದ ಐಫೋನ್​ಗೆ: ಸೈನಿಕನ ಪ್ರಾಣ ಉಳಿಸಿದ ಐಫೋನ್ 11 ಪ್ರೊ
Image
Best Smart Tv: 30,000 ರೂ. ಒಳಗೆ ಸಿಗುತ್ತಿರುವ 43 ಇಂಚಿನ ಬೆಸ್ಟ್ ಸ್ಮಾರ್ಟ್ ಟಿವಿಗಳು ಇಲ್ಲಿದೆ ನೋಡಿ

ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಒಪ್ಪೋ ರೆನೋ 8 ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಸೂಪರ್ ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.3, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದರಲ್ಲಿ ಕೂಡ ಫಿಂಗರ್​ಪ್ರಿಂಟ್ ಅನ್ನು ಡಿಸ್‌ಪ್ಲೇಯಲ್ಲೇ ನೀಡಲಾಗಿದೆ.  ಇನ್ನು ಒಪ್ಪೋ ರೆನೋ 8 ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆ 8GB RAM + 128GB ಸ್ಟೋರೇಜ್ ಆಯ್ಕೆಗೆ 29,999ರೂ. ಆಗಿದೆ.

ಒಪ್ಪೋ ರೆನೋ 8 ಪ್ರೊ:

ಒಪ್ಪೋ ರೆನೋ 8 ಪ್ರೊ ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080×2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಈ ಡಿಸ್‌ಪ್ಲೇ HDR10+ ಬೆಂಬಲ, SGS ಲೋ ಮೋಷನ್ ಬ್ಲರ್, SGS ಲೋ ಬ್ಲೂ ಲೈಟ್, ಅಮೆಜಾನ್ HDR ಪ್ರಮಾಣೀಕರಣ ಮತ್ತು ನೆಟ್‌ಫ್ಲಿಕ್ಸ್‌ HD ಪ್ರಮಾಣೀಕರಣವನ್ನು ಹೊಂದಿದೆ.

ಆಕ್ಟಾಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100-ಮ್ಯಾಕ್ಸ್ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 12 ಆಧಾರಿತ ಕಲರ್‌ಒಎಸ್‌ 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆಇದರ ಪ್ರಮುಖ ಹೈಲೇಟ್ ಕ್ಯಾಮೆರಾ ಆಗಿದ್ದು, ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ಇದರಲ್ಲಿ ಮೂರನೇ ಕ್ಯಾಮೆರಾ ಕೂಡ ನೀಡಲಾಗಿದ್ದು ಇದು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಆಗಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಒಪ್ಪೋ ರೆನೋ 8 ಪ್ರೊ ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಸೂಪರ್ ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್‌ ಬೆಂಬಲಿಸುತ್ತದೆಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.3, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದರಲ್ಲಿ ಫಿಂಗರ್​ಪ್ರಿಂಟ್ ಅನ್ನು ಡಿಸ್‌ಪ್ಲೇಯಲ್ಲೇ ನೀಡಲಾಗಿದೆ. ಭಾರತದಲ್ಲಿ ಒಪ್ಪೋ ರೆನೋ 8 ಪ್ರೊ ಸ್ಮಾರ್ಟ್‌ಫೋನ್‌ ಬೆಲೆ 12GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 45,999ರೂ. ಆಗಿದೆ.

ಲಾಂಚ್‌ ಆಫರ್‌ನಲ್ಲಿ ಗ್ರಾಹಕರು ICICI ಬ್ಯಾಂಕ್, SBI ಕಾರ್ಡ್‌ಗಳು, ಕೋಟಕ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್ ವಹಿವಾಟುಗಳ ಮೂಲಕ 10% ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳಬಹುದು. ಈ ಎರಡು ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ ಜುಲೈ 25 ಮತ್ತು ಜುಲೈ 19 ರಿಂದ ಫ್ಲಿಪ್‌ಕಾರ್ಟ್, ಒಪ್ಪೋ ಸ್ಟೋರ್ ಮತ್ತು ಮುಖ್ಯ ರಿಟೇಲ್ ಔಟ್‌ಲೆಟ್‌ಗಳ ಮೂಲಕ ಖರೀದಿಸಬಹುದು.

Published On - 8:44 am, Tue, 19 July 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್