Kannada News Technology Redmi Note 10S Another Redmi 10 series smartphone has received a price drop in India
Redmi Note 10S: ಬಜೆಟ್ ಬೆಲೆಯ ಈ ಫೋನಿನ ದರದಲ್ಲಿ ಮತ್ತಷ್ಟು ಕಡಿತ: ರೆಡ್ಮಿಯಿಂದ ಬಂಫರ್ ಆಫರ್
Redmi Note 10S Price Cut: ಶವೋಮಿ ಯಾವುದೇ ಸ್ಮಾರ್ಟ್‌ಫೋನ್ (Smartphone) ರಿಲೀಸ್ ಮಾಡದೆ ದಿಢೀರ್ ಆಗಿ ಕಳೆದ ವರ್ಷ ಬಿಡುಗಡೆ ಮಾಡಿದ ರೆಡ್ಮಿ ನೋಟ್ 10ಎಸ್ (Redmi Note 10S) ಫೋನಿನ ಬೆಲೆಯಲ್ಲಿ ಕಡಿತ ಮಾಡಿದೆ.
ಭಾರತದ ನಂಬರ್ ಒನ್ ಸ್ಮಾರ್ಟ್‌ಫೋನ್ ಕಂಪನಿ ಶವೋಮಿ (Xiaomi) ತಿಂಗಳಿಗೆ ಒಂದರಂತೆ ಆಕರ್ಷಕ ಫೋನನ್ನು ಬಿಡುಗಡೆ ಮಾಡುತ್ತದೆ. ತನ್ನ ಎಂಐ ಬ್ರ್ಯಾಂಡ್ ಅನ್ನು ಸ್ಥಗಿತಗೊಳಿಸಿದ ಬಳಿಕ ರೆಡ್ಮಿ ಬಜೆಟ್ ಫೋನಿಗೆ ಹಾಗೂ ಶವೋಮಿ ಹೈ ರೇಂಜ್ ಮಾದರಿಯ ಫೋನಿಗೆ ಎಂಬಂತೆ ಆಗಿಬಿಟ್ಟಿದೆ. ಅದರಂತೆ ಕಂಪನಿ ತನ್ನ ಹೊಸ ಮೊಬೈಲ್ಗಳನ್ನು ಪರಿಚಯಿಸಿದ ಬೆನ್ನಲ್ಲೆ ತನ್ನ ಹಳೆಯ ಫೋನಿನ ಬೆಲೆ ಕಡಿಮೆ ಮಾಡುವುದು ವಾಡಿಕೆ. ಆದರೆ, ಶವೋಮಿ ಯಾವುದೇ ಸ್ಮಾರ್ಟ್‌ಫೋನ್ (Smartphone) ರಿಲೀಸ್ ಮಾಡದೆ ದಿಢೀರ್ ಆಗಿ ಕಳೆದ ವರ್ಷ ಬಿಡುಗಡೆ ಮಾಡಿದ ರೆಡ್ಮಿ ನೋಟ್ 10ಎಸ್ (Redmi Note 10S) ಫೋನಿನ ಬೆಲೆಯಲ್ಲಿ ಕಡಿತ ಮಾಡಿದೆ. ಇದರ ಎರಡೂ ವೇರಿಯಂಟ್ ದರದಲ್ಲಿ ಆಕರ್ಷಕ ರಿಯಾಯಿತಿ ನೀಡಲಾಗಿದೆ. ಹಾಗಾದ್ರೆ ಈ ಫೋನಿನ ನೂತನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆ ಎಂಬುದನ್ನು ನೋಡೋಣ.
ರೆಡ್ಮಿ ನೋಟ್ 10S ಸ್ಮಾರ್ಟ್‌ಫೋನ್ ಕಳೆದ ವರ್ಷ 6GB + 64GB ಸ್ಟೋರೇಜ್ ರೂಪಾಂತರಕ್ಕೆ 14,999 ರೂ. ಮತ್ತು 6GB + 128GB ಸ್ಟೋರೇಜ್ ಮಾದರಿಗೆ 15,999 ರೂ. ಬೆಲೆಯೊಂದಿಗೆ ರಿಲೀಸ್ ಆಗಿತ್ತು. ಇದೀಗ 64GB ಸ್ಟೋರೇಜ್ ಆಯ್ಕೆಯ ಮೇಲೆ ಬರೋಬ್ಬರಿ 2,000 ರೂ. ಕಡಿತ ಮಾಡಿದರೆ 128GB ಸ್ಟೋರೇಜ್ ಮೇಲೆ 1,000 ರೂ. ರಿಯಾಯಿತಿ ನೀಡಲಾಗಿದೆ.
ಈ ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43-ಇಂಚಿನ ಫುಲ್ HD+ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು ಅಮೋಲೆಡ್ ಡಿಸ್‌ಪ್ಲೇ ಆಗಿದ್ದು, ಈ ಡಿಸ್‌ಪ್ಲೇ 20: 9 ರಚನೆಯ ಅನುಪಾತದಿಂದ ಕೂಡಿದೆ.
ಆಕ್ಟಾಕೋರ್ ಮೀಡಿಯಾಟೆಕ್ ಹಿಲಿಯೋ G95 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. ಇದು ಆಂಡ್ರಾಯ್ಡ್ 11 ಅನ್ನು MIUI 12.5 ಜೊತೆಗೆ ಕಾರ್ಯನಿರ್ವಹಿಸಲಿದೆ. ಈ ಪ್ರೊಸೆಸರ್ ಅನ್ನು Mail-G76 MC4 GPU ನೊಂದಿಗೆ ಜೋಡಿಸಲಾಗಿದೆ.
ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್,2.2 ಅಪರ್ಚರ್ ಮತ್ತು 118 ಡಿಗ್ರಿ ಫೀಲ್ಡ್-ಆಫ್ ವ್ಯೂ ಹೊಂದಿದೆ.
ಇದನ್ನೂ ಓದಿ
Traffic Fine: ಟ್ರಾಫಿಕ್ ಫೈನ್ ಆನ್ಲೈನ್ನಲ್ಲಿ ಕಟ್ಟುವುದು ಹೇಗೆ?: ಇಲ್ಲಿದೆ ಸಂಪೂರ್ಣ ಮಾಹಿತಿ
Realme Narzo 50i Prime: ಭಾರತಕ್ಕೆ ಬರುತ್ತಿದೆ ರಿಯಲ್ ಮಿಯ ಹೊಸ ಸ್ಮಾರ್ಟ್‌ಫೋನ್: ಇದರ ಬೆಲೆ ಕೇವಲ …
Tecno Pova 3: ಬಿಡುಗಡೆಗೆ ಒಂದೇ ದಿನ ಬಾಕಿ: ಟೆಕ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ ಈ ಫೋನ್
ಅಂತೆಯೆ ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
ರೆಡ್ಮಿ ನೋಟ್ 10S ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್ v5.0, ಇನ್ಫ್ರಾರೆಡ್ (ಐಆರ್), ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ನೀಡಲಾಗಿದೆ.