ಮೊದಲೆಲ್ಲ ತಿಂಗಳಿಗೆ ಮೂರರಿಂದ ನಾಲ್ಕು ಸ್ಮಾರ್ಟ್ಫೋನ್ಗಳನ್ನು (Smartphone) ಬಿಡುಗಡೆ ಮಾಡುತ್ತಿದ್ದ ಶವೋಮಿ ಕಂಪನಿ ಈಗ ಇವುಗಳ ಸಂಖ್ಯೆಯಲ್ಲಿ ಕೊಂಚ ಕಡಿಮೆ ಮಾಡಿದೆ. ಎಡೆಬಿಡದೆ ಮಾರುಕಟ್ಟೆಯಲ್ಲಿ ಮೊಬೈಲ್ಗಳು ರಿಲೀಸ್ ಆಗುತ್ತಿರುವುದರಿಂದ ಅವುಗಳಿಗಿಂತ ವಿಶೇಷವಾದ ಫೋನನ್ನು ತಯಾರಿಸುವಲ್ಲಿ ಶವೋಮಿ ಬ್ಯುಸಿಯಾಗಿದೆ. ಇದೀಗ ಕೆಲ ದಿನಗಳ ಬಳಿಕ ಶವೋಮಿ (Xiaomi) ಮತ್ತೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ತಯಾರಾಗಿದ್ದು, ತನ್ನ ರೆಡ್ಮಿ ಬ್ರ್ಯಾಂಡ್ ಅಡಿಯಲ್ಲಿ ಹೊಸ ಸ್ಮಾರ್ಟ್ಫೋನೊಂದನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ನಾಳೆ (ಆ. 26) ಭಾರತದ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿರ ರೆಡ್ಮಿ ನೋಟ್ 11 ಎಸ್ಇ (Redmi Note 11SE) ಫೋನ್ ಅನಾವರಣಗೊಳ್ಳಲಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ ಬೆಲೆ 20,000 ರೂ. ಒಳಗೆ ಇರಬಹುದೆಂದು ಅಂದಾಜಿಸಲಾಗಿದೆ.
ರೆಡ್ಮಿ ನೋಟ್ 11SE ಸ್ಮಾರ್ಟ್‌ಫೋನ್ ಭಾರತದಲ್ಲಿ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಲಿದೆಯಂತೆ. ಇದು 6GB RAM + 64GB, 6GB RAM + 128GB ಮತ್ತು 8GB RAM + 128GB ಸ್ಟೋರೇಜ್ ಆಯ್ಕೆಗಳಿಂದ ಕೂಡಿದೆ. ಬಿಫ್ರಾಸ್ಟ್ ಬ್ಲೂ, ಕಾಸ್ಮಿಕ್ ವೈಟ್, ಶ್ಯಾಡೋ ಬ್ಲ್ಯಾಕ್ ಮತ್ತು ಥಂಡರ್ ಪರ್ಪಲ್ ಬಣ್ಣಗಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಆಗಸ್ಟ್ 31 ರಿಂದ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮತ್ತು ಎಂಐ.ಕಾಮ್ ಮೂಲಕ ಸೇಲ್ ಕಾಣಲಿದೆ.
ಈ ಸ್ಮಾರ್ಟ್ಫೋನ್ನ ವಿಶೇಷತೆ ಬಗ್ಗೆ ನೋಡುವುದಾದರೆ, ಇದು 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ. ಇದು 1,100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದ್ದು, ಸಿನಿಮಾ ವೀಕ್ಷಣೆ ಮಾಡುವಾಗ, ಗೇಮ್ ಆಡುವಾಗ ವಿಶೇಷ ಅನುಭವ ನೀಡುತ್ತದೆ. ಮೀಡಿಯಾಟೆಕ್ ಹಿಲಿಯೋ G95 SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಮಾಲಿ-G76 GPU ಸಪೋರ್ಟ್ ಅನ್ನು ಕೂಡ ಪಡೆದುಕೊಂಡಿದೆ.
ರೆಡ್ಮಿ ನೋಟ್ 11SE ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ನೀಡಲಾಗಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್ ಆಂಗಲ್ ಲೆನ್ಸ್, ಮೂರು ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸಾರ್‌ಗಳಿಂದ ಕೂಡಿದೆ. ಇವುಗಳ ಜೊತಗೆ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದದು, ಇದಕ್ಕೆ ತಕ್ಕಂತೆ 33W ವೇಗದ ಚಾರ್ಜಿಂಗ್ ಬೆಂಬಲಿಲ ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 2.4GHz ಮತ್ತು 5GHz ಡ್ಯುಯಲ್–ಬ್ಯಾಂಡ್ Wi-Fi, ಬ್ಲೂಟೂತ್ v5.0, ಮತ್ತು ಮಲ್ಟಿಫಂಕ್ಷನಲ್ NFC ಅನ್ನು ಬೆಂಬಲಿಸುತ್ತದೆ.AI ಫೇಸ್ ಅನ್‌ಲಾಕ್ ಫೀಚರ್ ಕೂಡ ನೀಡಲಾಗಿದೆ.