Apple iPhone 14: ಶೀಘ್ರದಲ್ಲಿ ಬರಲಿದೆ Apple iPhone 14, ಭಾರತದ BIS ವೆಬ್‌ಸೈಟ್‌ನಲ್ಲಿ ಹೇಳಿದ್ದೇನು ಗೊತ್ತಾ?
Apple ನ iPhone 14 ಈವೆಂಟ್‌ಗೆ ಮುಂಚಿತವಾಗಿ, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ, Apple ನ iPhone 14 ನಿಮ್ಮ ಮುಂದೆ ಬರಲು ಇನ್ನೂ ಕೆಲವೇ ದಿನಗಳು ಬಾಕಿ ಎಂದು ಬರೆದುಕೊಂಡಿದೆ.
ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ ಐಫೋನ್ 14 ಬಿಡುಗಡೆಯ ಕಾರ್ಯಕ್ರಮವು ಇನ್ನೂ ಕೆಲವೇ ಎರಡು ವಾರಗಳು ಬಾಕಿ ಇದೆ ಎಂದು ಹೇಳಿದೆ. ಈ ಬಗ್ಗೆ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ, ಐಫೋನ್ 14 bಇಡುಗಡೆ ಕಾರ್ಯಕ್ರಮ ಏನು ದೂರದಲ್ಲಿ ಇಲ್ಲ. ಯುವ ಉತ್ಸಾಹಿಗಳ ಕೈ ಸೇರು ಅತುರದಲ್ಲಿ ಇದೆ, ಇದನ್ನು ನಿಮಗೆ ತಲುಪಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದೆ.
Apple ತನ್ನ iPhone 14 ಬಿಡುಗಡೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 7 ರಂದು ಆಯೋಜಿಸಲಾಗಿದೆ. ಭಾರತದ ಪ್ರಮಾಣೀಕರಣ ವೆಬ್‌ಸೈಟ್ ಈಗಾಗಲೇ iPhone XR (A2105), iPhone 11 (A2221), iPhone 12 (A2403), ಮತ್ತು iPhone 13 (A2633) ಅನ್ನು ಒಳಗೊಂಡಿದೆ. ಈಗ, A2882 ಮಾಡೆಲ್ ಸಂಖ್ಯೆಯೊಂದಿಗೆ ಹೊಸ ಸ್ಮಾರ್ಟ್‌ಫೋನ್ BIS ಪ್ರಮಾಣೀಕರಣ ಸೈಟ್‌ನಲ್ಲಿ ಈ ಬಗ್ಗೆ ತಿಳಿಸಿದೆ. ಇದು ಐಫೋನ್ 14 ಸರಣಿಯಾಗಿರಬಹುದು, ಈವೆಂಟ್ ಶೀಘ್ರದಲ್ಲೇ ನಡೆಯಲಿದೆ ಎಂದು ಹೇಳಿದೆ.
ಆಪಲ್ ಭಾರತ ಮತ್ತು ಚೀನಾ ಎರಡರಲ್ಲೂ ಒಂದೇ ಸಮಯದಲ್ಲಿ ಐಫೋನ್ 14 ಸರಣಿಯನ್ನು ಉತ್ಪಾದಿಸುತ್ತಿದೆ ಎಂದು ವರದಿಯಾಗಿದೆ, ಇದು ನಮ್ಮ ಜನರ ಮುಂದೆ ಹೊಸ ಅಧ್ಯಾಯವನ್ನು ಬರೆಯಲಿದೆ ಎಂದು ಹೇಳಿದೆ. ಮುಂಬರುವ ಐಫೋನ್‌ಗಳ ಅಧಿಕೃತ ಬಿಡುಗಡೆ ದಿನಾಂಕವನ್ನು ಆಪಲ್ ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಮುಂಬರುವ ದಿನಗಳಲ್ಲಿ ನಾವು ಪ್ರಕಟಣೆಯಲ್ಲಿ ತಿಳಿಸುತ್ತೇವೆ ಎಂದು ಹೇಳಿದೆ.
ಈ ವರ್ಷ, ಐಫೋನ್ 14 ಮ್ಯಾಕ್ಸ್ ಎಂಬ ಹೊಸ ಮಾದರಿಯನ್ನು ಪರಿಚಯಿಸುತ್ತದೆ ಎಂದು ಕೆಲವು ವದಂತಿಗಳಿವೆ, ಇದು ಐಫೋನ್ 14 ಸರಣಿಯ ಪ್ರಮಾಣಿತ ಮಾದರಿಗಿಂತ ಅಗ್ಗವಾಗಿದೆ ಎಂದು ವರದಿಯಾಗಿದೆ. ಇದು ಅಪ್ಡೇಟ್ ವರ್ಷನ್ ಆಗಿದೆ ದೊಡ್ಡ ಸ್ಕ್ರೀನ್ ಮತ್ತು ಉತ್ತಮ ಬ್ಯಾಟರಿಯೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ, ಈ ಫೋನ್ ಹೆಚ್ಚಿನ ಬೆಲೆಯನ್ನು ಹೊಂದಿಲ್ಲದಿದ್ದರೆ ಹೆಚ್ಚಿನ ಗ್ರಾಹಕರನ್ನು ಆಕರ್ಷಸಿತ್ತು.
ಇದು ಅನೇಕ ಹಳೆಯ ಫೀಚರ್ಗಳನ್ನು ಹೊಂದಿರಲ್ಲ ಮತ್ತು ಅಲ್ಪ ಮಾದರಿ ಅಪ್ಡೇಟ್ಗಳನ್ನು ಹೊಂದಿದೆ ಎಂದು ಹೇಳಿದೆ. ಕಾಂಪ್ಯಾಕ್ಟ್ ಪರದೆಯ ಕಾರಣದಿಂದಾಗಿ ಆಪಲ್ ಮಿನಿ ಮಾಡೆಲ್ನಿಂದಾಗಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿಲ್ಲ.
ಕಂಪನಿಯು iPhone 14, iPhone 14 Max, iPhone 14 Pro ಮತ್ತು iPhone 14 Pro Max ಸೇರಿದಂತೆ ನಾಲ್ಕು ಸ್ಮಾರ್ಟ್‌ಫೋನ್‌ಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. iPhone 13 ಗೆ ಹೋಲಿಸಿದರೆ ಪ್ರೊ-ಅಲ್ಲದ ಮಾದರಿಗಳು ಪ್ರಮುಖ ನವೀಕರಣಗಳನ್ನು ಪಡೆಯುವ ನಿರೀಕ್ಷೆಯಿಲ್ಲ. ಆದರೆ, Pro ಮಾಡೆಲ್‌ಗಳು 120Hz LTPO ಸ್ಕ್ರೀನ್, ಹೊಸ ವಿನ್ಯಾಸ, ಹುಡ್ ಅಡಿಯಲ್ಲಿ ಹೊಸ ಚಿಪ್‌ಸೆಟ್ ಮತ್ತು ಹೆಚ್ಚಿನದನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ.