Redmi Note 12 series: ಬಿಡುಗಡೆ ಆಯಿತು 200MP ಕ್ಯಾಮೆರಾ, 210W ಫಾಸ್ಟ್ ಚಾರ್ಜರ್​ನ ರೆಡ್ಮಿ ನೋಟ್ 12 ಸರಣಿ: ಬೆಲೆ ಎಷ್ಟು?

| Updated By: Vinay Bhat

Updated on: Oct 28, 2022 | 12:41 PM

ಶವೋಮಿ ತನ್ನ ರೆಡ್ಮಿ ಬ್ರ್ಯಾಂಡ್​ ನಡಿಯಲ್ಲಿ ಹೊಸ ಪವರ್​ಫುಲ್ ಮೊಬೈಲ್ ಪರಿಚಯಿಸಿದೆ. ಅದುವೇ ರೆಡ್ಮಿ ನೋಟ್ 12 ಸರಣಿ (Redmi Note 12 series). ಇದರಲ್ಲಿ ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೊ ಮತ್ತು ರೆಡ್ಮಿ ನೋಟ್ 12 ಪ್ರೊ+ (Redmi Note 12 Pro +) ಫೋನುಗಳಿವೆ.

Redmi Note 12 series: ಬಿಡುಗಡೆ ಆಯಿತು 200MP ಕ್ಯಾಮೆರಾ, 210W ಫಾಸ್ಟ್ ಚಾರ್ಜರ್​ನ ರೆಡ್ಮಿ ನೋಟ್ 12 ಸರಣಿ: ಬೆಲೆ ಎಷ್ಟು?
Redmi Note 12 Series
Follow us on

ಸ್ಮಾರ್ಟ್​ಫೋನ್ ಕ್ಷೇತ್ರದಲ್ಲಿ ಏನಾದರು ಹೊಸ ತನವನ್ನು ಪ್ರಯತ್ನ ಮಾಡುವುದರಲ್ಲಿ ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಸಂಸ್ಥೆ ಎತ್ತಿದ ಕೈ. ಈಗಂತು ಅಪರೂಪಕ್ಕೆ ಮೊಬೈಲ್​ಗಳನ್ನು ಪರಿಚಯಿಸುತ್ತಿರುವ ಶವೋಮಿ ಸಮಯ ತೆಗೆದುಕೊಂಡ ವಿಭಿನ್ನವಾದ ಮೊಬೈಲ್​ನೊಂದಿಗೆ ಬರುತ್ತದೆ. ಅದರಂತೆ ಇದೀಗ ಶವೋಮಿ ತನ್ನ ರೆಡ್ಮಿ ಬ್ರ್ಯಾಂಡ್​ ನಡಿಯಲ್ಲಿ ಹೊಸ ಪವರ್​ಫುಲ್ ಮೊಬೈಲ್ ಪರಿಚಯಿಸಿದೆ. ಅದುವೇ ರೆಡ್ಮಿ ನೋಟ್ 12 ಸರಣಿ (Redmi Note 12 series). ಇದರಲ್ಲಿ ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೊ ಮತ್ತು ರೆಡ್ಮಿ ನೋಟ್ 12 ಪ್ರೊ+ (Redmi Note 12 Pro +) ಎಂಬ ಮೂರು ಸ್ಮಾರ್ಟ್​ಫೋನ್​ಗುಗಳು ಬಿಡುಗಡೆ ಆಗಿವೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಬಲಿಷ್ಠವಾಗಿದ್ದು ಅತ್ಯುತ್ತಮ ಕ್ಯಾಮೆರಾ ಸೆಟ್‌ಅಪ್‌, ಬ್ಯಾಟರಿ ಹಾಗೂ ವೇಗದ ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ. ಈ ಫೋನಿನ ಕುರಿತ ಮಾಹಿತಿ ಇಲ್ಲಿದೆ.

ಡಿಸ್​ಪ್ಲೇ-ಪ್ರೊಸೆಸರ್

ಈ ಮೂರು ಸ್ಮಾರ್ಟ್​ಫೋನ್​ಗಳ ಪೈಕಿ ರೆಡ್ಮಿ ನೋಟ್‌ 12 ಪ್ರೊ+ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಇದು 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಬೆಂಬಲಿಸಲಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೆ ಈ ಸರಣಿಯ ರೆಡ್ಮಿ ನೋಟ್‌ 12 ಪ್ರೊ ಕೂಡ ಇದೆ ಪ್ರೊಸೆಸರ್ ಹೊಂದಿದೆ. ಆದರೆ ರೆಡ್ಮಿ ನೋಟ್ 12 ಸ್ನಾಪ್​ಡ್ರಾಗನ್ 4 Gen 1 ಪ್ರೊಸೆಸರ್​ನಿಂದ ಕೆಲಸ ಮಾಡುತ್ತದೆ. ಉಳಿದಂತೆ ಮೂರು ಫೋನಿನ ಡಿಸ್ ಪ್ಲೇ ಒಂದೇರೀತಿಯಿದೆ.

ಕ್ಯಾಮೆರಾ:

ರೆಡ್ಮಿ ನೋಟ್ 12 ಪ್ರೊ+: ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 200 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದುಕೊಂಡಿದೆ, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.

ರೆಡ್ಮಿ ನೋಟ್ 12 ಪ್ರೊ: ಇದುಕೂಡ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದುಕೊಂಡಿದೆ, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.

ರೆಡ್ಮಿ ನೋಟ್ 12: ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದುಕೊಂಡಿದೆ, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್​ನಿಂದ ಕೂಡಿದೆ. ಇದಲ್ಲದೆ 8ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.

ಬ್ಯಾಟರಿ-ಬೆಲೆ:

ಈ ಮೂರು ಸ್ಮಾರ್ಟ್‌ಫೋನ್​ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ ನೋಟ್ 12 33W ವೇಗದ ಚಾರ್ಜಿಂಗ್‌, ನೋಟ್ 12 ಪ್ರೊ 67W ವೇಗದ ಚಾರ್ಜಿಂಗ್‌ ಹಾಗೂ ನೋಟ್ 12 ಪ್ರೊ+ 210W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ನೋಟ್ 12 ಪ್ರೊ+ ಕೇವಲ 9 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತಂತೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, ವೈಫೈ 6, GNSS, NFC, ಮತ್ತು USB ಟೈಪ್-ಸಿ ನೀಡಲಾಗಿದೆ. ಈ ಫೋನುಗಳು ಸದ್ಯಕ್ಕೆ ಚೀನಾದಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದರ ರೆಡ್ಮಿ ನೋಟ್‌ 12 5G ಆರಂಭಿಕ ಬೆಲೆ CNY 1,199, ಅಂದರೆ ಭಾರತದಲ್ಲಿ ಅಂದಾಜು 13,600ರೂ., ರೆಡ್ಮಿ ನೋಟ್‌ 12 ಪ್ರೊ 5G ಆರಂಭಿಕ ಬೆಲೆ CNY 1,699, ಅಂದರೆ ಭಾರತದಲ್ಲಿ ಅಂದಾಜು 19,300ರೂ., ರೆಡ್ಮಿ ನೋಟ್‌ 12 ಪ್ರೊ+ 5G ಆರಂಭಿಕ ಬೆಲೆ CNY 2,199, ಅಂದರೆ ಭಾರತದಲ್ಲಿ ಅಂದಾಜು 25,500ರೂ. ಎನ್ನಬಹುದು.

Published On - 12:41 pm, Fri, 28 October 22