ಗ್ಯಾಲಕ್ಸಿ A ಸರಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಭರ್ಜರಿ ಯಶಸ್ಸು ಸಾಧಿಸಿರುವ ಪ್ರಸಿದ್ಧ ಸ್ಯಾಮ್‌ಸಂಗ್ ಕಂಪನಿ (Samsung) ಇದೀಗ ಇದೇ ಗ್ಯಾಲಕ್ಸಿ A ಸರಣಿಯಲ್ಲಿ ಮತ್ತೆ ಎರಡು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಇದರಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ73 5ಜಿ ಮತ್ತು ಗ್ಯಾಲಕ್ಸಿ ಎ33 5ಜಿ (Galaxy A73 5G and Galaxy A33 5G) ಸ್ಮಾರ್ಟ್‌ಫೋನ್ ಇದೆ. ಇದರಲ್ಲಿ ಗ್ಯಾಲಕ್ಸಿ A73 5G ಫೋನ್ ಪ್ರೈಮರಿ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ (108MP Camera Phone) ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಈ ಮೂಲಕ ಭಾರತಕ್ಕೆ 108MP ಕ್ಯಾಮೆರಾದ ಮತ್ತೊಂದು ಫೋನ್ ಲಗ್ಗೆಯಿಟ್ಟಿದೆ. ಡಸ್ಟ್ ಆಂಡ್ ವಾಟರ್ ಪ್ರೂಫ್‌ಗಾಗಿ IP67-ರೇಟಿಂಗ್ ಅನ್ನು ಹೊಂದಿವೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಮತ್ತು ಆಕ್ಟಾ-ಕೋರ್ ಎಕ್ಸಿನೋಸ್ ಪ್ರೊಸೆಸರ್ ಬಲವನ್ನು ಪಡೆದುಕೊಂಡಿವೆ.
ಆದರೆ, ಕಂಪನಿ ಈ ಫೋನಿನ ಬೆಲೆಯನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಸ್ಯಾಮ್‌ಸಂಗ್.ಕಾಮ್, ಪ್ರಮುಖ ರಿಟೇಲ್ ಸ್ಟೋರ್ ಮತ್ತು ಆಯ್ದ ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಪ್ರೀ-ಬುಕಿಂಗ್‌ಗೆ ಲಭ್ಯವಾಗಲಿದೆ ಎಂದಷ್ಟೆ ಕಂಪನಿ ತಿಳಿಸಿದೆ. ಇದು ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಸಿಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅವುಗಳು 8GB RAM + 128GB ಮತ್ತು 8GB + 256GB ಸ್ಟೋರೇಜ್ ಆಯ್ಕೆಗಳಾಗಿವೆ.
ಗ್ಯಾಲಕ್ಸಿ A33 5G ಸ್ಮಾರ್ಟ್‌ಫೋನ್ 6.4 ಇಂಚಿನ ಫುಲ್ HD+ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಒಳಗೊಂಡಿದೆ. ಇದು ಆಕ್ಟಾ-ಕೋರ್ ಎಕ್ಸಿನೋಸ್ 1280 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಫೋನ್ ಕೂಡ ಆಂಡ್ರಾಯ್ಡ್ 12 ನಲ್ಲಿ ಒಂದು UI 4.1 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ನಾಲ್ಕು ವರ್ಷಗಳವರೆಗೆ ಆಂಡ್ರಾಯ್ಡ್ OS ಅಪ್‌ಗ್ರೇಡ್‌ಗಳು ಮತ್ತು ಐದು ವರ್ಷಗಳ ಸೆಕ್ಯುರಿಟಿ ಅಪ್ಡೇಟ್‌ಗಳನ್ನು ಸ್ವೀಕರಿಸುವ ಭರವಸೆ ನೀಡಿದೆ.
ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು ಇದರಲ್ಲಿರುವ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಿಂದ ಕೂಡಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ ಈ ಫೋನ್25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಸಹ ಪಡೆದುಕೊಂಡಿದೆ.
ಇನ್ನು ಗ್ಯಾಲಕ್ಸಿ A73 5G ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ HD+ ಇನ್ಫಿನಿಟಿ-O ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ರೇಟ್ನಿಂದ ಆವೃತ್ತವಾಗಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ನಲ್ಲಿ ಒಂದು UI 4.1 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ನಾಲ್ಕು ವರ್ಷಗಳವರೆಗೆ ಆಂಡ್ರಾಯ್ಡ್ OS ಅಪ್‌ಗ್ರೇಡ್‌ಗಳು ಮತ್ತು ಐದು ವರ್ಷಗಳ ಸೆಕ್ಯುರಿಟಿ ಅಪ್ಡೇಟ್‌ಗಳನ್ನು ಸ್ವೀಕರಿಸುವ ಭರವಸೆ ನೀಡಿದೆ.
ಇದುಕೂಡ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಆದರೆ, ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಜೊತೆಗೆ 25W ವೇಗದ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಅವೆಸಮ್ ಗ್ರೇ, ಅವೆಸಮ್ ಮಿಂಟ್ ಮತ್ತು ಅವೆಸಮ್ ವೈಟ್ ಬಣ್ಣಗಳಲ್ಲಿ ಬರುತ್ತದೆ.
Redmi 10A: ಬಿಡುಗಡೆ ಆಯಿತು ರೆಡ್ಮಿಯ ಹೊಸ ಸ್ಮಾರ್ಟ್‌ಫೋನ್: ಈ ಬಾರಿ ಏನು ವಿಶೇಷತೆ?
IPL 2022: ಜಿಯೋ ದಿಂದ ಡಿಸ್ನಿ+ ಹಾಟ್ಸ್ಟಾರ್ ಚಂದಾದಾರಿಕೆಯ ಬಂಪರ್ ಪ್ಲಾನ್ ಬಿಡುಗಡೆ: ಇಲ್ಲಿದೆ ಮಾಹಿತಿ