IPL 2022: ಜಿಯೋ ದಿಂದ ಡಿಸ್ನಿ+ ಹಾಟ್​​ಸ್ಟಾರ್ ಚಂದಾದಾರಿಕೆಯ ಬಂಪರ್ ಪ್ಲಾನ್ ಬಿಡುಗಡೆ: ಇಲ್ಲಿದೆ ಮಾಹಿತಿ

Reliance Jio Disney + Hotstar subscription: ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಆಗಿರುವುದರಿಂದ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನೆ ಗಮನದಲ್ಲಿಟ್ಟುಕೊಂಡು ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಹೊಸ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳನ್ನು ಆರಂಭಿಸಿದೆ.

IPL 2022: ಜಿಯೋ ದಿಂದ ಡಿಸ್ನಿ+ ಹಾಟ್​​ಸ್ಟಾರ್ ಚಂದಾದಾರಿಕೆಯ ಬಂಪರ್ ಪ್ಲಾನ್ ಬಿಡುಗಡೆ: ಇಲ್ಲಿದೆ ಮಾಹಿತಿ
Reliance Jio Disney + Hotstar
Follow us
TV9 Web
| Updated By: Vinay Bhat

Updated on: Mar 29, 2022 | 1:21 PM

ರಿಲಯನ್ಸ್ ಜಿಯೋ (Reliance Jio), ಭಾರ್ತಿ ಏರ್ಟೆಲ್ (Bharti Airtel) ಮತ್ತು ವೊಡಾಫೋನ್ ಐಡಿಯಾ (Vi) ನಂತಹ ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಈಗೀಗ ಹೆಚ್ಚಾಗಿ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡುವ ಯೋಜನೆಯನ್ನು ಪರಿಚಯಿಸುತ್ತಿದೆ. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಆಗಿರುವುದರಿಂದ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನೆ ಗಮನದಲ್ಲಿಟ್ಟುಕೊಂಡು ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಹೊಸ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳನ್ನು ಆರಂಭಿಸಿದೆ. ಡಿಸ್ನಿ+ ಹಾಟ್‌ಸ್ಟಾರ್‌ ನಲ್ಲಿರುವ ಎಲ್ಲಾ ವಿಷಯಗಳನ್ನು ನೋಡುವ ಅವಕಾಶವನ್ನು ಈ ಪ್ಲಾನ್‌ಗಳು ಒಳಗೊಂಡಿರಲಿದೆ. ಇದರಿಂದ ಜಿಯೋ ಗ್ರಾಹಕರಿಗೆ ಮತ್ತಷ್ಟು ಲಾಭವಾಗಿದೆ. ಇದೀಗ ಜಿಯೋ ಪರಿಚಯಿಸಿರುವ ಡಿಸ್ನಿ ಪ್ಲಸ್ ಹಾಟ್​​ಸ್ಟಾರ್ ಪ್ಲಾನ್​ಗಳು ಯಾವುವು ಎಂಬುದನ್ನು ನೋಡೋಣ.

ಐಪಿಎಲ್ ಪ್ರಿಯರಿಗಾಗಿ ಜಿಯೋ ಇದೀಗ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಹೊಂದಿರುವ 555 ರೂಪಾಯಿಗಳ ಡೇಟಾ ಆಡ್ ಆನ್ ಆಫರ್ ಅನ್ನು ಘೋಷಿಸಿದೆ. ಈಗಾಗಲೇ ಜಿಯೋವಿನ ರೀಚಾರ್ಜ್ ಪ್ಲಾನ್ ಹೊಂದಿದ್ದು, ಐಪಿಎಲ್ ವೀಕ್ಷಣೆಗಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಮಾತ್ರ ಎದುರುನೋಡುತ್ತಿರುವ ಗ್ರಾಹಕರಿಗೆ ಇದು ಭರ್ಜರಿ ಕೊಡುಗೆಯಾಗಿದೆ. ಇದ ಜೊತೆಗೆ ಗ್ರಾಹಕರು ಭಾರೀ ಡೇಟಾ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ. ಇದು ಒಟ್ಟು 55GB ಡೇಟಾದೊಂದಿಗೆ ಬರುತ್ತದೆ. ಜಿಯೋ ಗ್ರಾಹಕರು ತಮ್ಮ ಪ್ರಸ್ತುತ ರೀಚಾರ್ಜ್ ಯೋಜನೆಯ ಜೊತೆಗೆ ಈ ಯೋಜನೆಯನ್ನು ಆಯ್ದುಕೊಳ್ಳಬಹುದಾಗಿದ್ದು, ಐಪಿಎಲ್ ವೀಕ್ಷಣೆಗಾಗಿಯೇ ಪ್ರಕಟಿಸಿರುವ ಪ್ರೀಪೇಡ್ ಯೋಜನೆ ಇದಾಗಿದೆ. ಒಟ್ಟು 55 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಯೋಜನೆಯು ಧ್ವನಿ ಕರೆ ಅಥವಾ SMS ಪ್ರಯೋಜನಗಳೊಂದಿಗೆ ಬರುವುದಿಲ್ಲ.

ರಿಲಯನ್ಸ್ ಜಿಯೋದ 1,499 ರೂ.  ಪ್ಲಾನ್‌ ನಿಮಗೆ ಒಂದು ವರ್ಷದ ತನಕ ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತದೆ. ಅಲ್ಲದೆ ಈ ಪ್ಲಾನ್‌ನಲ್ಲಿ ನೀವು ಜಿಯೋದ 719 ರೂ. ಯೋಜನೆಯ ಪ್ರಯೋಜನಗಳನ್ನು ಒಂದು ತಿಂಗಳಿಗೆ ಪೂರಕವಾಗಿ ಪಡೆಯಬಹುದು. 719 ರೂ. ಪ್ಲಾನ್‌ ನಿಮಗೆ ದೈನಂದಿನ 2GB ಡೇಟಾವನ್ನು ನೀಡಲಿದೆ. ಇದು 84 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಈ ಅವಧಿಯಲ್ಲಿ ಪ್ರತಿನಿತ್ಯ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಸೌಲಭ್ಯ ದೊರೆಯಲಿದೆ. ಹೆಚ್ಚಿವರಿಯಾಗಿ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ.

ಇನ್ನು ಜಿಯೋ 279 ರೂ. ಕ್ರಿಕೆಟ್ ಆಡ್-ಆನ್ ಪ್ರಿಪೇಯ್ಡ್ ಪ್ಲಾನ್‌ ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡಲಿದೆ. ಇದು ಒಟ್ಟು 15GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ಅಲ್ಲದೆ ನೀವು ಈ ಯೋಜನೆಯನ್ನು ಖರೀದಿಸಿದರೆ, ಈಗಾಗಲೇ ನಿಮ್ಮ ಅಸ್ತಿತ್ವದಲ್ಲಿರುವ ಪ್ರಿಪೇಯ್ಡ್ ಯೋಜನೆ ಅವಧಿ ಮುಗಿಯುವವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಇನ್ನು ಈ ಈ ಕ್ರಿಕೆಟ್ ಪ್ರಿಪೇಯ್ಡ್ ಪ್ಲಾನ್‌ ಎಲ್ಲರಿಗೂ ಲಭ್ಯವಿಲ್ಲ, ಬದಲಿಗೆ ಕೆಲವೇ ಕೆಲ ಆಯ್ದ ಬಳಕೆದಾರರಿಗೆ ಇದು ಲಭ್ಯವಿದೆ. ಕೆಲವು ಆಯ್ದ ಮಂದಿಗಳ ಲಿಸ್ಟ್‌ನಲ್ಲಿ ನೀವು ಕೂಡ ಸೇರಿದ್ದರೆ MyJio ಅಪ್ಲಿಕೇಶನ್‌ನಲ್ಲಿ ಈ ಪ್ಲಾನ್‌ ನಿಮಗೆ ಲಭ್ಯವಾಗಲಿದೆ.

ನೀವು ಒಂದು ವರ್ಷದವರೆಗೆ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಯೋಜನೆ ಎದುರು ನೋಡುತ್ತಿದ್ದರೆ 3119 ರೂ. ಪ್ರಿಪೇಯ್ಡ್ ಪ್ಲಾನ್ ಉತ್ತಮವಾಗಿದೆ. ಇದು ಅನಿಯಮಿತ ಕರೆಗಳು, 2GB ದೈನಂದಿನ ಡೇಟಾ ಮಿತಿಯೊಂದಿಗೆ ಒಟ್ಟು 740GB ಡೇಟಾ, ದಿನಕ್ಕೆ 100 ಎಸ್ಎಂಎಸ್ ಮತ್ತು ಅಪ್ಲಿಕೇಶನ್‌ಗಳ ಜಿಯೋ ಸೂಟ್‌ಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರೊಂದಿಗೆ 4199 ರೂ. ಯೋಜನೆ ಕೂಡ ಇದ್ದು, ಇದು ಒಂದು ವರ್ಷಕ್ಕೆ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ, ಅನ್ ಲಿಮಿಟೆಡ್ ಕರೆ ಪ್ರಯೋಜನಗಳು, 3GB ದೈನಂದಿನ ಡೇಟಾ ಮಿತಿಯೊಂದಿಗೆ ಒಟ್ಟು 1095 GB ಡೇಟಾ, ದಿನಕ್ಕೆ 100 ಎಸ್ಎಂಎಸ್ ಮತ್ತು ಅಪ್ಲಿಕೇಶನ್‌ಗಳ ಜಿಯೋ ಸೂಟ್‌ಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.

Oppo K10: ಕಡಿಮೆ ಬೆಲೆ, ಬಂಪರ್ ಫೀಚರ್ಸ್: ಇಂದಿನಿಂದ ಒಪ್ಪೋ K10 ಖರೀದಿಗೆ ಲಭ್ಯ: ಈ ಫೋನ್ ಮಿಸ್ ಮಾಡ್ಬೇಡಿ

Poco X4 Pro 5G: ಬೊಂಬಾಟ್ ಬ್ಯಾಟರಿ, ಭರ್ಜರಿ ಕ್ಯಾಮೆರಾ: ಭಾರತದಲ್ಲಿ ಪೋಕೋ X4 ಪ್ರೊ 5G ಸ್ಮಾರ್ಟ್‌ಫೋನ್‌ ಲಾಂಚ್

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್