IPL 2022: ಐಪಿಎಲ್ 2022 ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಜಿಯೋದಿಂದ ಬಂಪರ್ ಆಫರ್ ಘೋಷಣೆ
ಐಪಿಎಲ್ 2022 ಟೂರ್ನಿಯನ್ನು ಮೈದಾನದಲ್ಲಿ ಕುಳಿತುಕೊಂಡು ವೀಕ್ಷಣೆ ಮಾಡಲು ಶೇ. 25ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದವರು ಮನೆಯಲ್ಲೇ ಕುಳಿತು ವೀಕ್ಷಿಸಬೇಕು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ನೋಡಲು ಚಂದಾದಾರಿಕೆಯನ್ನು ಹೊಂದಿರಬೇಕು. ಇದೇ ಕಾರಣಕ್ಕೆ ಇದೀಗ ರಿಲಯನ್ಸ್ ಜಿಯೋ ಹೊಸದಾಗಿ ಪ್ಲಾನ್‌ಗಳನ್ನು ಲಾಂಚ್ ಮಾಡಿದೆ.
ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಇಂದಿನಿಂದ ರಂಗು ರಂಗಿನ ಕ್ರಿಕೆಟ್ ಹಬ್ಬ ಐಪಿಎಲ್ 2022ಕ್ಕೆ (IPL 2022) ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ಮುಖಾಮುಖಿ ಆಗಲಿದೆ. ವಿಶ್ವದ ಮೂಲೆ ಮೂಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಮಿಲಿಯನ್ ಡಾಲರ್ ಟೂರ್ನಿ ಈ ಬಾರಿ ದಾಖಲೆ ಎಂಬಂತೆ ಬರೋಬ್ಬರಿ 120ಕ್ಕೂ ಅಧಿಕ ದೇಶಗಳಲ್ಲಿ ನೇರಪ್ರಸಾರ ಕಾರಣಲಿದೆ. ಮೈದಾನದಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡಲು ಶೇ. 25ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದವರು ಮನೆಯಲ್ಲೇ ಕುಳಿತು ಪಂದ್ಯ ವೀಕ್ಷಿಸಬೇಕು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ (Disney+ Hotstar) ವೀಕ್ಷಿಸಬೇಕಾದರೆ ನೀವು ಚಂದಾದಾರಿಕೆಯನ್ನು ಹೊಂದಿರಬೇಕಾಗುತ್ತದೆ. ಇದೇ ಕಾರಣಕ್ಕೆ ಇದೀಗ ರಿಲಯನ್ಸ್ ಜಿಯೋ ಐಪಿಎಲ್ ಮನರಂಜನೆಯನ್ನು ನೀಡುವ ಸಲುವಾಗಿ ಡಿಸ್ನಿ + ಹಾಟ್ಸ್ಟಾರ್ನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಹೊಸದಾಗಿ ಪ್ಲಾನ್‌ಗಳನ್ನು ಲಾಂಚ್ ಮಾಡಿದೆ. ಅವುಗಳು ಯಾವುವು ಎಂಬುದನ್ನು ನೋಡೋಣ.
ಐಪಿಎಲ್ ಪ್ರಿಯರಿಗಾಗಿ ಜಿಯೋ ಇದೀಗ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಹೊಂದಿರುವ 555 ರೂಪಾಯಿಗಳ ಡೇಟಾ ಆಡ್ ಆನ್ ಆಫರ್ ಅನ್ನು ಘೋಷಿಸಿದೆ. ಈಗಾಗಲೇ ಜಿಯೋವಿನ ರೀಚಾರ್ಜ್ ಪ್ಲಾನ್ ಹೊಂದಿದ್ದು, ಐಪಿಎಲ್ ವೀಕ್ಷಣೆಗಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಮಾತ್ರ ಎದುರುನೋಡುತ್ತಿರುವ ಗ್ರಾಹಕರಿಗೆ ಇದು ಭರ್ಜರಿ ಕೊಡುಗೆಯಾಗಿದೆ. ಇದ ಜೊತೆಗೆ ಗ್ರಾಹಕರು ಭಾರೀ ಡೇಟಾ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ. ಇದು ಒಟ್ಟು 55GB ಡೇಟಾದೊಂದಿಗೆ ಬರುತ್ತದೆ. ಜಿಯೋ ಗ್ರಾಹಕರು ತಮ್ಮ ಪ್ರಸ್ತುತ ರೀಚಾರ್ಜ್ ಯೋಜನೆಯ ಜೊತೆಗೆ ಈ ಯೋಜನೆಯನ್ನು ಆಯ್ದುಕೊಳ್ಳಬಹುದಾಗಿದ್ದು, ಐಪಿಎಲ್ ವೀಕ್ಷಣೆಗಾಗಿಯೇ ಪ್ರಕಟಿಸಿರುವ ಪ್ರೀಪೇಡ್ ಯೋಜನೆ ಇದಾಗಿದೆ. ಒಟ್ಟು 55 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಯೋಜನೆಯು ಧ್ವನಿ ಕರೆ ಅಥವಾ SMS ಪ್ರಯೋಜನಗಳೊಂದಿಗೆ ಬರುವುದಿಲ್ಲ.
ಜಿಯೋ 279ರೂ. ಕ್ರಿಕೆಟ್ ಆಡ್-ಆನ್ ಪ್ರಿಪೇಯ್ಡ್ ಪ್ಲಾನ್ ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡಲಿದೆ. ಇದು ಒಟ್ಟು 15GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ಅಲ್ಲದೆ ನೀವು ಈ ಯೋಜನೆಯನ್ನು ಖರೀದಿಸಿದರೆ, ಈಗಾಗಲೇ ನಿಮ್ಮ ಅಸ್ತಿತ್ವದಲ್ಲಿರುವ ಪ್ರಿಪೇಯ್ಡ್ ಯೋಜನೆ ಅವಧಿ ಮುಗಿಯುವವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಇನ್ನು ಈ ಈ ಕ್ರಿಕೆಟ್ ಪ್ರಿಪೇಯ್ಡ್ ಪ್ಲಾನ್ ಎಲ್ಲರಿಗೂ ಲಭ್ಯವಿಲ್ಲ, ಬದಲಿಗೆ ಕೆಲವೇ ಕೆಲ ಆಯ್ದ ಬಳಕೆದಾರರಿಗೆ ಇದು ಲಭ್ಯವಿದೆ. ಕೆಲವು ಆಯ್ದ ಮಂದಿಗಳ ಲಿಸ್ಟ್‌ನಲ್ಲಿ ನೀವು ಕೂಡ ಸೇರಿದ್ದರೆ MyJio ಅಪ್ಲಿಕೇಶನ್‌ನಲ್ಲಿ ಈ ಪ್ಲಾನ್ ನಿಮಗೆ ಲಭ್ಯವಾಗಲಿದೆ.
ಜಿಯೋವಿನ ಮತ್ತೊಂದು ಯೋಜನೆಯು 499 ರೂಪಾಯಿದ್ದಾಗಿದೆ. ಇದು ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಉಚಿತವಾಗಿ ಒದಗಿಸುತ್ತದೆ. 55 ದಿನಗಳ ವ್ಯಾಲಿಡಿಟಿಯಲ್ಲಿ 55GB ಡೇಟಾವನ್ನು ಈ ಯೋಜನೆಯಲ್ಲಿ ಪಡೆಯಬಹುದು. ಈ ಯೋಜನೆಯನ್ನು ಖರೀದಿಸಲು 200 ರೂ. ಗಳಿಗಿಂತ ಹೆಚ್ಚು ವೆಚ್ಚವಾಗುವುದರಿಂದ, ಜಿಯೋ ಗ್ರಾಹಕರು 20% ರಷ್ಟು JioMart ಮಹಾ ಕ್ಯಾಶ್‌ಬ್ಯಾಕ್‌ಗೆ ಅರ್ಹರಾಗುತ್ತಾರೆ.
ಇನ್ನು ರಿಲಯನ್ಸ್ ಜಿಯೋ ಟೆಲಿಕಾಂನ 4,199 ರೂ. ಪ್ರಿಪೇಯ್ಡ್ ಪ್ಲಾನ್ ಕೊಂಚ ದುಬಾರಿ ಎನಿಸಿದರೂ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 1095 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯವಾಗಲಿದೆ. ಇದಲ್ಲದೆ 3,119 ರೂ. ವಿನ ಪ್ರಿಪೇಯ್ಡ್ ಯೋಜನೆಯಿದ್ದು ಇದು ಕೂಡ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ.
Virat Kohli: ಕೊಹ್ಲಿ ಅಲ್ಲ: ಅಭ್ಯಾಸ ಪಂದ್ಯ ಮುಗಿದ ಬಳಿಕ ಡುಪ್ಲೆಸಿಸ್ ಹೊಗಳಿದ್ದು ಯಾರನ್ನ ಗೊತ್ತೇ?
IPL 2022: ಅಭ್ಯಾಸದ ವೇಳೆ ಎದುರೆದುರಾದ ಧೋನಿ-ಕೊಹ್ಲಿ: ಈ ಸಂದರ್ಭ ಏನಾಯಿತು ನೋಡಿ