Realme C31: ರಿಯಲ್ ಮಿ C31 ಬಿಡುಗಡೆಗೆ ಕಾದು ಕುಳಿತಿರುವ ಬಜೆಟ್ ಪ್ರಿಯರಿಗೆ ಸಿಹಿ ಸುದ್ದಿ: ಮಾರ್ಚ್ 31ಕ್ಕೆ ರಿಲೀಸ್
ರಿಯಲ್ ಮಿ ಕಂಪನಿ ದೇಶದಲ್ಲಿ ಹೊಸ ರಿಯಲ್ ಮಿ ಸಿ31 (Realme C31) ಸ್ಮಾರ್ಟ್‌ಫೋನ್ ಅನ್ನು ಇದೇ ಮಾರ್ಚ್ 31 ರಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಇಂಡೋನೇಷ್ಯಾದಲ್ಲಿ ಬಿಡುಗಡೆ ಆಗಿ ಬಹುದೊಡ್ಡ ಯಶಸ್ಸು ಕಂಡಿದೆ.
ರಿಯಲ್ ಮಿ ಕಂಪನಿ ಎರಡು ದಿನಗಳ ಹಿಂದೆಯಷ್ಟೆ ಇದೇ ಮೊದಲ ಬಾರಿಗೆ 150W ಫಾಸ್ಟ್ ಚಾರ್ಜರ್ನ ರಿಯಲ್‌ಮಿ ಜಿಟಿ ನಿಯೋ 3 (Realme GT Neo 3) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈ ಸುದ್ದಿಯ ಬಿಸಿ ತಣ್ಣಗಾಗುವ ಮುನ್ನವೇ ಇದೀಗ ಬಜೆಟ್ ಬೆಲೆಯ ಹೊಸ ಸ್ಮಾರ್ಟ್‌ಫೋನ್ (Smartphone) ಒಂದನ್ನು ಭಾರತದಲ್ಲಿ ಅನಾವರಣ ಮಾಡಲು ತಯಾರಿ ನಡೆಸಿದೆ. ಹೌದು, ರಿಯಲ್ ಮಿ ಕಂಪನಿ ದೇಶದಲ್ಲಿ ಹೊಸ ರಿಯಲ್ ಮಿ ಸಿ31 (Realme C31) ಸ್ಮಾರ್ಟ್‌ಫೋನ್ ಅನ್ನು ಇದೇ ಮಾರ್ಚ್ 31 ರಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಇಂಡೋನೇಷ್ಯಾದಲ್ಲಿ ಬಿಡುಗಡೆ ಆಗಿ ಬಹುದೊಡ್ಡ ಯಶಸ್ಸು ಕಂಡಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಬಜೆಟ್ ಬೆಲೆಯಿಂದ ಗಮನ ಸೆಳೆದಿರುವ ರಿಯಲ್ ಮಿ C31 ಅನ್ನು ಲಾಂಚ್ ಮಾಡಲು ಮುಂದಾಗದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಫೋನಿನ ಬೆಲೆ 10,000 ರೂ. ಗಿಂತ ಕಡಿಮೆ ಎಂದು ಊಹಿಸಲಾಗಿದೆ.
ಆದರೆ, ರಿಯಲ್ ಮಿ ಕಂಪನಿ ಈ ಫೋನಿನ ವಿಶೇಷತೆ ಬಗ್ಗೆಯಾಗಲಿ ಅಥವಾ ಬೆಲೆಯ ಬಗ್ಗೆಯಾಗಲಿ ಯಾವುದೇ ಮಾಹಿತಿ ಹೊರಹಾಕಿಲ್ಲ. ಮೂಲಗಳ ಪ್ರಕಾರ ಈ ಸ್ಮಾರ್ಟ್‌ಫೋನ್ ಡೈನಾಮಿಕ್ ಟೆಕ್ಸ್ಚರ್ ಡಿಸೈನ್ ನೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ. 900×1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ HD+ LCD ಡಿಸ್‌ಪ್ಲೇ ಹೊಂದಿರಬಹುದು. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಒಳಗೊಂಡಿದೆ. ಆಕ್ಟಾ-ಕೋರ್ ಯೂನಿಸೋಕ್ T612 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು 12nm ಪ್ರಕ್ರಿಯೆಯನ್ನು ಆಧರಿಸಿದೆ. ಈ ಪ್ರೊಸೆಸರ್ ಲೊ-ಲೇವೆಲ್ ಆಗಿದೆ, ಅಂದರೆ ಹಗುರವಾದ ಕಾರ್ಯಗಳಿಗೆ ಸೂಕ್ತವಾಗಿದೆ.
ಇನ್ನು ರಿಯಲ್ ಮಿ C31 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಕಪ್ಪು-ಬಿಳುಪು ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ ವಾಟರ್‌ಡ್ರಾಪ್ ಶೈಲಿಯ ನಾಚ್‌ನೊಳಗೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಕೂಡ ನೀಡಲಾಗಿದೆ.
5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಇದು ಒಂದು ದಿನ ಸುಲಭವಾಗಿ ಬಾಳಿಕೆ ಬರುತ್ತದೆ. ಈ ಬ್ಯಾಟರಿ 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಕನಿಷ್ಠ ಎರಡು ಗಂಟೆಗಳ ಕಾಲ ಬೇಕಾಗುತ್ತದೆ. ರಿಯಲ್ ಮಿ C31 ಸ್ಮಾರ್ಟ್‌ಫೋನ್ ಈಗಾಗಲೇ ಇಂಡೋನೇಷ್ಯಾದಲ್ಲಿ IDR 1,599,00 ಗೆ ಬಿಡುಗಡೆ ಆಗಿದೆ. ಈ ಫೋನ್ ಭಾರತದಲ್ಲಿ ಸರಿಸುಮಾರು 8,500 ರೂ. ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Galaxy A53: 34,499 ರೂಪಾಯಿಯ ಗ್ಯಾಲಕ್ಸಿ A53 5G ಫೋನಿನ ಸೇಲ್ ಆರಂಭ: ಖರೀದಿಸಬಹುದೇ?
OnePlus 10 Pro 5G: ಈ ದಿನಾಂಕದಂದು ಭಾರತಕ್ಕೆ ಅಪ್ಪಳಿಸಲಿದ ಒನ್ಪ್ಲಸ್ 10 ಪ್ರೊ ಸ್ಮಾರ್ಟ್‌ಫೋನ್: ಏನು ವಿಶೇಷತೆ?