Galaxy A53: 34,499 ರೂಪಾಯಿಯ ಗ್ಯಾಲಕ್ಸಿ A53 5G ಫೋನಿನ ಸೇಲ್ ಆರಂಭ: ಖರೀದಿಸಬಹುದೇ?

ಗ್ಯಾಲಕ್ಸಿ A53 5G ಫೋನ್‌ ಇಂದು ಮಧ್ಯಾಹ್ನ 12 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್​ನಲ್ಲಿ ಮೊದಲ ಬಾರಿಗೆ ಮಾರಾಟ ಶುರುವಾಗಿದೆ. ಹಾಗಾದ್ರೆ ಇದರ ಬೆಲೆ ಎಷ್ಟು?, ಆಫರ್ ಏನಿದೆ?, ಖರೀದಿಸಬಹುದೇ ಎಂಬುದನ್ನು ನೋಡೋಣ.

Galaxy A53: 34,499 ರೂಪಾಯಿಯ ಗ್ಯಾಲಕ್ಸಿ A53 5G ಫೋನಿನ ಸೇಲ್ ಆರಂಭ: ಖರೀದಿಸಬಹುದೇ?
Samsung Galaxy A53
Follow us
TV9 Web
| Updated By: Vinay Bhat

Updated on: Mar 25, 2022 | 2:01 PM

ಗ್ಯಾಲಕ್ಸಿ A ಸರಣಿಯಲ್ಲಿ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿ ಭರ್ಜರಿ ಯಶಸ್ಸು ಸಾಧಿಸಿರುವ ಪ್ರಸಿದ್ಧ ಸ್ಯಾಮ್​ಸಂಗ್ ಕಂಪನಿ (Samsung) ಮೊನ್ನೆಯಷ್ಟೆ ತನನ ಗ್ಯಾಲಕ್ಸಿ A ಸರಣಿಯಲ್ಲಿ ಮತ್ತೆ ಎರಡು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿತ್ತು. ಅದುವೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ53 5G (Galaxy A53) ಮತ್ತು ಗ್ಯಾಲಕ್ಸಿ ಎ33 5G (Galaxy A33) ಸ್ಮಾರ್ಟ್‌ಫೋನ್‌. ಇದರಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A53 5G ಸ್ಮಾರ್ಟ್‌ಫೋನ್‌ ಇದೀಗ ಖರೀದಿಗೆ ಸಿಗುತ್ತಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌, ಆಕ್ಟಾ-ಕೋರ್ ಪ್ರೊಸೆಸರ್‌, ಆಂಡ್ರಾಯ್ಡ್ 12 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ರನ್‌ ಆಗಲಿದೆವೆ. ಗ್ಯಾಲಕ್ಸಿ A53 5G ಫೋನ್‌ ಇಂದು ಮಧ್ಯಾಹ್ನ 12 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್​ನಲ್ಲಿ ಮೊದಲ ಬಾರಿಗೆ ಮಾರಾಟ ಶುರುವಾಗಿದೆ. ಹಾಗಾದ್ರೆ ಇದರ ಬೆಲೆ ಎಷ್ಟು?, ಆಫರ್ ಏನಿದೆ?, ಖರೀದಿಸಬಹುದೇ ಎಂಬುದನ್ನು ನೋಡೋಣ.

ಬೆಲೆ-ಆಫರ್ ಏನು?:

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A53 5G ಭಾರತದಲ್ಲಿ ಒಟ್ಟು ಎರಡು ಸ್ಟೋರೆಜ್ ಆಯ್ಕೆಗಳಲ್ಲಿ ಖರೀದಿಗೆ ಸಿಗುತ್ತಿದೆ. ಇದರ 6GB RAM ಮತ್ತು 128GB ಆಂತರಿಕ ಸ್ಟೋರೇಜ್ ಬೆಲೆಯು 34,499 ರೂ. ಆಗಿದೆ. ಹಾಗೂ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 35,999 ರೂ. ನಿಗದಿ ಮಾಡಲಾಗಿದೆ. ಮೊದಲ ಸೇಲ್ ಪ್ರಮುಕ್ತ ಆಕರ್ಷಕ ಆಫರ್ ನೀಡಲಾಗಿದ್ದು, ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ 3000 ರೂ. ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.

ಏನು ವಿಶೇಷತೆ?:

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A53 5G ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ರೇಟ್‌ ಹೊಂದಿರುವ 6.5 ಇಂಚಿನ ಫುಲ್‌ ಹೆಚ್‌ಡಿ + ಸೂಪರ್ ಅಮೋಲೆಡ್‌ ಇನ್ಫಿನಿಟಿ O ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ ಕೋರ್ Exynos 1280 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 12 ನಲ್ಲಿ ಒಂದು UI 4.1 ಜೊತೆಗೆ ರನ್ ಆಗುತ್ತದೆ. ಹಾಗೆಯೇ 8 GB RAM ಮತ್ತು 256 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಇನ್ನು ಈ ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಶೂಟರ್, ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ನಾಲ್ಕನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ದೀರ್ಘ ಬಾಳಿಕೆ ಬರುವ 5,000 mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ಪೂರಕವಾಗಿ 25W ವೇಗದ ಚಾರ್ಜಿಂಗ್ ಅನ್ನು ಸಹ ಕೊಡಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 802.11ac, ಬ್ಲೂಟೂತ್ v5.1, GPS/ A-GPS, ಮತ್ತು USB ಟೈಪ್ C ಪೋರ್ಟ್ ಸೇರಿದೆ. ಇದಲ್ಲದೆ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಗೈರೊ ಮೀಟರ್‌, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಸೇರಿಸಲಾಗಿದೆ.

ಖರೀದಿಸಬಹುದೇ?:

ನೀವು ಉತ್ತಮ ಕ್ಯಾಮೆರಾ, ಬ್ಯಾಟರಿ ಇರುವ ಫೋನನ್ನು ಎದುರು ನೋಡುತ್ತಿದ್ದರೆ ಈ ಫೋನ್ ಉತ್ತಮ ಆಯ್ಕೆಯಾಗಿದೆ. ಗೇಮಿಂಗ್​ಗೆಂದು ಫೋನ್ ಖರೀದಿಸುವವರಾಗಿದ್ದರೆ ಇದಕ್ಕಿಂತ ಕಡಿಮೆ ಬೆಲೆಗೆ ಉತ್ತಮ ಪ್ರೊಸೆಸರ್ ಇರುವ ಫೋನ್ ಮಾರುಕಟ್ಟೆಯಲ್ಲಿದೆ.

OnePlus 10 Pro 5G: ಈ ದಿನಾಂಕದಂದು ಭಾರತಕ್ಕೆ ಅಪ್ಪಳಿಸಲಿದ ಒನ್​ಪ್ಲಸ್ 10 ಪ್ರೊ ಸ್ಮಾರ್ಟ್​ಫೋನ್: ಏನು ವಿಶೇಷತೆ?

TATA IPL 2022: ಐಪಿಎಲ್ 2022 ಅನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ