JIO vs Airtel vs Vi: ಭರ್ಜರಿ ವ್ಯಾಲಿಡಿಟಿ, ಅತ್ಯುತ್ತಮ ಡೇಟಾ ಸೌಲಭ್ಯವಿರುವ ಬೆಸ್ಟ್​ ಪ್ಲಾನ್​ ಇಲ್ಲಿದೆ ನೋಡಿ

Best Prepaid Recharge Plans: ಜಿಯೋ, ವೊಡಾಫೋನ್ ಐಡಿಯಾ, ಏರ್ಟೆಲ್​ನ 84 ದಿನಗಳವರೆಗೆ ಕೆಲವು ಉತ್ತಮ ಯೋಜನೆಗಳನ್ನು ನೋಡೋಣ. ಈ ಯೋಜನೆಗಳ ಸ್ಟ್ರೀಮಿಂಗ್ ಪ್ರಯೋಜನಗಳನ್ನು ಸಹ ಪಡೆಯಬಹುದಾಗಿದೆ.

JIO vs Airtel vs Vi: ಭರ್ಜರಿ ವ್ಯಾಲಿಡಿಟಿ, ಅತ್ಯುತ್ತಮ ಡೇಟಾ ಸೌಲಭ್ಯವಿರುವ ಬೆಸ್ಟ್​ ಪ್ಲಾನ್​ ಇಲ್ಲಿದೆ ನೋಡಿ
Jio vs Airtel vs Vi
Follow us
TV9 Web
| Updated By: Vinay Bhat

Updated on: Mar 26, 2022 | 6:28 AM

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಮತ್ತು ಏರ್ಟೆಲ್ (Airtel vs Jio vs Vi) ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಇವಗಳ ನಡುವೆ ಸದ್ದಿಲ್ಲದೆ ವೊಡಾಫೋನ್ ಐಡಿಯಾ ವಿ ಕೂಡ ಆಕರ್ಷಕ ಪ್ರಿಪೇಯ್ಡ್‌ ಯೋಜನೆಗಳಿಂದ (Prepaid Plans) ಗ್ರಾಹಕರನ್ನು ಸೆಳೆಯುತ್ತಿವೆ. ಈಗೀಗ ಗ್ರಾಹಕರು 84 ದಿನಗಳ ಮಾನ್ಯತೆಯೊಂದಿಗೆ ಮೊಬೈಲ್ ಸಂಖ್ಯೆಯನ್ನು ರೀಚಾರ್ಜ್ ಮಾಡುವುದು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಮಾಸಿಕ ಯೋಜನೆಗಳಿಗಿಂತ (28 ದಿನ) ಮತ್ತು ಎರಡು-ಮಾಸಿಕ (56 ದಿನ) ಯೋಜನೆಗಳಿಗಿಂತ ಸ್ವಲ್ಪ ಅಗ್ಗ ಎಂಬುದು. ಹಾಗಾಗಿ, ದೇಶದ ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಪ್ರಿಪೇಡ್ ಯೋಜನೆಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಹಾಗಾದ್ರೆ ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾದ (Vodafone Idea) 84 ದಿನಗಳವರೆಗೆ ಕೆಲವು ಉತ್ತಮ ಯೋಜನೆಗಳನ್ನು ನೋಡೋಣ. ಈ ಯೋಜನೆಗಳ ಸ್ಟ್ರೀಮಿಂಗ್ ಪ್ರಯೋಜನಗಳನ್ನು ಸಹ ಪಡೆಯಬಹುದಾಗಿದೆ.

ಏರ್ಟೆಲ್:

ಏರ್ಟೆಲ್ ಟೆಲಿಕಾಂನ 719 ರೂ. ಪ್ರಿಪೇಯ್ಡ್‌ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 126GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಏರ್ಟೆಲ್ ವೆಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ಉಚಿತ ಹೆಲೋ ಟ್ಯೂನ್‌ ಸೌಲಭ್ಯ ದೊರೆಯುತ್ತದೆ.

ಇನ್ನು ಏರ್ಟೆಲ್​ನ 839 ರೂ. ಗಳ ಪ್ರಿಪೇಯ್ಡ್ ಯೋಜನೆಯು 2GB ಡೇಟಾ/ ದಿನ, ಅನಿಯಮಿತ ಕರೆಗಳು, 100 SMS/ ದಿನ ಜೊತೆಗೆ 84 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ ಅಮೆಜಾನ್ ಪ್ರೈಮ್ ಮೊಬೈಲ್ ಎಡಿಷನ್, ಅಪೋಲೊ 24|7 Circle, ಉಚಿತ ಆನ್‌ಲೈನ್ ಕೋರ್ಸ್‌ಗಳು, ಉಚಿತ ಹೆಲೋ ಟ್ಯೂನ್ಸ್, ಫಾಸ್ಟ್​ಟ್ಯಾಗ್​​ನಲ್ಲಿ ರೂ. 100 ಕ್ಯಾಶ್‌ಬ್ಯಾಕ್ ಮತ್ತು ಉಚಿತ Wynk ಸಂಗೀತ ಚಂದಾದಾರಿಕೆಯಂತಹ ಹೆಚ್ಚುವರಿ ಪ್ರಯೋಜನಗಳು ಸಿಗುತ್ತವೆ.

ವೊಡಾಫೋನ್ ಐಡಿಯಾ:

ವೊಡಾಫೋನ್ ಐಡಿಯಾ ನೀಡುವ 719 ರೂ. ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 1.5GB ಡೇಟಾ, ಅನಿಯಮಿತ ಕರೆಗಳು, 100 SMS/ ದಿನ ಮತ್ತು 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ನೀಡಲಾಗುವ ಇತರ ಪ್ರಯೋಜನಗಳೆಂದರೆ ಬಿಂಜ್ ಆಲ್ ನೈಟ್, ಡೇಟಾ ಡಿಲೈಟ್‌ಗಳು, ವಾರಾಂತ್ಯದ ಡೇಟಾ ರೋಲ್‌ಓವರ್ ಮತ್ತು Vi ಚಲನಚಿತ್ರಗಳು ಮತ್ತು ಟಿವಿಗೆ ಚಂದಾದಾರಿಕೆ ಸಿಗಲಿದೆ.

839 ರೂ. ಪ್ರಿಪೇಯ್ಡ್ ಯೋಜನೆಯು 2 GB ಡೇಟಾ / ದಿನ, ಅನಿಯಮಿತ ಕರೆಗಳು, 100 SMS / ದಿನ ಮತ್ತು 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಬಿಂಜ್ ಆಲ್ ನೈಟ್, ವೀಕೆಂಡ್ ಡೇಟಾ ರೋಲ್‌ಓವರ್ ಮತ್ತು Vi ಚಲನಚಿತ್ರಗಳು ಮತ್ತು ಟಿವಿಗೆ ಚಂದಾದಾರಿಕೆಯನ್ನು ನೀಡಲಾಗುವ ಇತರ ಪ್ರಯೋಜನಗಳು ಸಿಗಲಿವೆ.

ಜಿಯೋ:

ಜಿಯೋ ಟೆಲಿಕಾಂನ 719 ರೂ. ಪ್ರಿಪೇಯ್ಡ್‌ ಪ್ಲಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್‌ಗಳ ಸೌಲಭ್ಯ ದೊರೆಯುತ್ತದೆ.

2545 ರೂ. ವಿನ ಜಿಯೋದ ಈ ಪ್ರಿಪೇಯ್ಡ್‌ ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 336 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

Realme C31: ರಿಯಲ್‌ ಮಿ C31 ಬಿಡುಗಡೆಗೆ ಕಾದು ಕುಳಿತಿರುವ ಬಜೆಟ್ ಪ್ರಿಯರಿಗೆ ಸಿಹಿ ಸುದ್ದಿ: ಮಾರ್ಚ್ 31ಕ್ಕೆ ರಿಲೀಸ್

Galaxy A53: 34,499 ರೂಪಾಯಿಯ ಗ್ಯಾಲಕ್ಸಿ A53 5G ಫೋನಿನ ಸೇಲ್ ಆರಂಭ: ಖರೀದಿಸಬಹುದೇ?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ