AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Galaxy A23: ಗ್ಯಾಲಕ್ಸಿ A ಸರಣಿಯ ಫೋನ್​ಗಳಿಗೆ ಭರ್ಜರಿ ಬೇಡಿಕೆ: ಮತ್ತೆರಡು ಹೊಸ ಫೋನ್ ಬಿಡುಗಡೆ

Samsung Galaxy A13: ಸ್ಯಾಮ್​ಸಂಗ್ ಕಂಪನಿ ಇದೀಗ ಅಚ್ಚರಿ ಎಂಬಂತೆ ಮತ್ತೆ ಎ ಸರಣಿಯಲ್ಲಿ ಎರಡು ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A13 ಮತ್ತು ಗ್ಯಾಲಕ್ಸಿ A23 ಸ್ಮಾರ್ಟ್‌ಫೋನ್‌ ಲಾಂಚ್‌ ಆಗಿದೆ.

Galaxy A23: ಗ್ಯಾಲಕ್ಸಿ A ಸರಣಿಯ ಫೋನ್​ಗಳಿಗೆ ಭರ್ಜರಿ ಬೇಡಿಕೆ: ಮತ್ತೆರಡು ಹೊಸ ಫೋನ್ ಬಿಡುಗಡೆ
Samsung Galaxy A13 and Galaxy A23 mid-range 4G smartphones have launched in India
TV9 Web
| Updated By: Vinay Bhat|

Updated on: Mar 26, 2022 | 3:01 PM

Share

ಕಳೆದ ವಾರವಷ್ಟೆ ಭಾರತೀಯ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ತನ್ನ ಗ್ಯಾಲಕ್ಸಿ A ಸರಣಿಯಲ್ಲಿ ಗ್ಯಾಲಕ್ಸಿ A53 5G ಮತ್ತು ಗ್ಯಾಲಕ್ಸಿ A33 ಫೋನನ್ನು ಪರಿಚಯಿಸಿದ್ದ ಸ್ಯಾಮ್​ಸಂಗ್ (Samsung) ಕಂಪನಿ ಇದೀಗ ಅಚ್ಚರಿ ಎಂಬಂತೆ ಮತ್ತೆ ಎ ಸರಣಿಯಲ್ಲಿ ಎರಡು ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A13 (Galaxy A13) ಮತ್ತು ಗ್ಯಾಲಕ್ಸಿ A23 (Galaxy A23) ಸ್ಮಾರ್ಟ್‌ಫೋನ್‌ ಲಾಂಚ್‌ ಆಗಿದೆ. ಸಾಕಷ್ಟು ಬಲಿಷ್ಠವಾಗಿರುವ ಈ ಎರಡೂ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿವೆ. ಜೊತೆಗೆ 5,000mAh ಸಾಮರ್ಥ್ಯದ ದೀರ್ಘ ಬಾಳಿಕೆ ಬರುವ ಬ್ಯಾಟರಿ, ಇದರಲ್ಲಿರುವ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಿಂದ ಕೂಡಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡುವುದಾದರೆ…

ಬೆಲೆ ಎಷ್ಟು?:

ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A13 ಫೋನ್‌ ಒಟ್ಟು ಎರಡು ಆಯ್ಕೆಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ಮಾದರಿಗೆ 14,999 ರೂ. ನಿಗದಿ ಮಾwಲಾಗಿದೆ. ಅಂತೆಯೆ 6GB + 128GB ರೂಪಾಂತರದ ಬೆಲೆ 17,999 ರೂ. ಆಗಿದೆ. ಈ ಸ್ಮಾರ್ಟ್‌ಫೋನ್‌ ಬ್ಲ್ಯಾಕ್‌, ತಿಳಿ ನೀಲಿ, ಕಿತ್ತಳೆ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಗ್ಯಾಲಕ್ಸಿ A23 ಫೋನ್‌ ಬೆಲೆ 6GB + 128GB ಮಾದರಿಗೆ 19,499 ರೂ. ಮತ್ತು 8GB + 128GB ರೂಪಾಂತರದ ಬೆಲೆ 20,999 ರೂ.ಆಗಿದೆ. ಈ ಫೋನ್‌ ಕಪ್ಪು, ತಿಳಿ ನೀಲಿ, ಕಿತ್ತಳೆ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಸದ್ಯಕ್ಕೆ ಸ್ಯಾಮ್‌ಸಂಗ್‌ ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಸಿಗಲಿದೆ.

ಏನು ವಿಶೇಷತೆ?:

ಗ್ಯಾಲಕ್ಸಿ A13 ಸ್ಮಾರ್ಟ್‌ಫೋನ್‌ 1,080×2,408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್‌ ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌ 12 ಆಧಾರಿತ One UI 4.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿರುವ ಮುಖ್ಯ ಕ್ಯಾಮರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಮತ್ತು ಇನ್ನುಳಿದ ಎರಡೂ ಕ್ಯಾಮೆರಾಗಳು 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿವೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಇನ್ನು ಗ್ಯಾಲಕ್ಸಿ A23 ಸ್ಮಾರ್ಟ್‌ಫೋನ್‌ ಕೂಡ 6.6-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಅನಿರ್ದಿಷ್ಟ ಆಕ್ಟಾ-ಕೋರ್‌ ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌ 12-ಆಧಾರಿತ One UI 4.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಮತ್ತು ಮೂರು ಹಾಗೂ ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾಗಳನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 25W ಫಾಸ್ಟ್ ಚಾರ್ಜಿಂಗ್‌ ಬೆಂಬಲಿಸುತ್ತದೆ.

IPL 2022: ಐಪಿಎಲ್ 2022 ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಜಿಯೋದಿಂದ ಬಂಪರ್ ಆಫರ್ ಘೋಷಣೆ

Virat Kohli: ಕೊಹ್ಲಿ ಅಲ್ಲ: ಅಭ್ಯಾಸ ಪಂದ್ಯ ಮುಗಿದ ಬಳಿಕ ಡುಪ್ಲೆಸಿಸ್ ಹೊಗಳಿದ್ದು ಯಾರನ್ನ ಗೊತ್ತೇ?

ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ