Galaxy M33 5G: ಸ್ಯಾಮ್ಸಂಗ್ನಿಂದ ಹೊಸ ಪ್ರಯತ್ನ: ಅತಿ ಕಡಿಮೆ ಬೆಲೆಗೆ ರಿಲೀಸ್ ಆಗಲಿದೆ ಗ್ಯಾಲಕ್ಸಿ M33 5G
ಗ್ಯಾಲಕ್ಸಿ M33 5G ಫೋನ್ ಭಾರತದಲ್ಲಿ ಬಿಡುಗಡೆ ಮಾಡುವ ದಿನಾಂಕವನ್ನು ಸ್ಯಾಮ್‌ಸಂಗ್ ಪ್ರಕಟಿಸಿದೆ. ಏಪ್ರಿಲ್ 2 ರಂದು ಈ ಕಡಿಮೆ ಬೆಲೆಯ 5G ಫೋನ್ ದೇಶದಲ್ಲಿ ಅನಾವರಣಗೊಳ್ಳಲಿದೆ.
ಸ್ಯಾಮ್ಸಮಗ್ ಕಂಪನಿ ತನ್ನ ಗ್ಯಾಲಕ್ಸಿ M ಸರಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಭರ್ಜರಿ ಯಶಸ್ಸು ಸಾಧಿಸಿದೆ. ಇತ್ತೀಚೆಗಷ್ಟೆ ಕಂಪನಿ ಗ್ಯಾಲಕ್ಸಿ M ಸರಣಿಯಲ್ಲಿ ಎರಡು ಬಜೆಟ್ ದರದ ಸ್ಮಾರ್ಟ್‌ಫೋನ್‌ಗಳನ್ನು ಘೋಷಣೆ ಮಾಡಿತ್ತು. ಕುತೂಹಲ ಕೆರಳಿಸಿರುವ ಈ ಫೋನಿನ ಹೆಸರು ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G (Galaxy M33 5G) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಮ್23 5G (Galaxy M23 5G). ಬಜೆಟ್ ಬೆಲೆಗೆ ಲಭ್ಯವಿರುವ 5ಜಿ ಫೋನ್ಗಳ ಸಾಲಿಗೆ ಇದುಕೂಡ ಸೇರಲಿದೆ. ಇದರಲ್ಲಿ ಗ್ಯಾಲಕ್ಸಿ M33 5G ಫೋನ್ ಭಾರತದಲ್ಲಿ ಬಿಡುಗಡೆ ಮಾಡುವ ದಿನಾಂಕವನ್ನು ಸ್ಯಾಮ್‌ಸಂಗ್ ಪ್ರಕಟಿಸಿದೆ. ಏಪ್ರಿಲ್ 2 ರಂದು ಗ್ಯಾಲಕ್ಸಿ M33 5G ದೇಶದಲ್ಲಿ ಅನಾವರಣಗೊಳ್ಳಲಿದೆ. ಈ ನೂತನ ಸ್ಮಾರ್ಟ್‌ಫೋನ್ (Smartphone) 50 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾ ಸೆನ್ಸಾರ್ ಅನ್ನು ಒಳಗೊಂಡಿವೆ. ಇದರೊಂದಿಗೆ LCD ಮಾದರಿಯ ಡಿಸ್‌ಪ್ಲೇಯನ್ನು ಪಡೆದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M33 ಫೋನ್ 6.6 ಫೋನ್ ಇಂಚಿನ FHD+ ಡ್ಯೂ ಡ್ರಾಪ್ LCD ಡಿಸ್ಪ್ಲೇ ಜೊತೆಗೆ 2,408 × 1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿರುತ್ತದೆ. ಪ್ರೊಸೆಸರ್‌ಗೆ ಪೂರಕವಾಗಿ 6GB/128GB ಮತ್ತು 8GB/128GB ಸ್ಟೋರೇಜ್ ಆಯ್ಕೆಗಳನ್ನು ಪಡೆದಿರಲಿದೆ. ಇನ್ನು ಬಾಹ್ಯ ಮೆಮೊರಿಗಾಗಿ ಇದನ್ನು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ. ಗ್ಯಾಲಕ್ಸಿ M33 5G ಆಂಡ್ರಾಯ್ಡ್ 12 ಆಧಾರಿತ ಒನ್ UI 4.1 ಅನ್ನು ಬಾಕ್ಸ್‌ನ ಹೊರಗೆ ರನ್ ಮಾಡುತ್ತದೆ.
Here’s the all-new Galaxy M33 5G that’s up for all the whacky things you aspire to do. Gaming, surfing, binge-watching or shooting videos, the new #GalaxyM33 5G is up for it all. Launching soon on 2nd April 2022. pic.twitter.com/wJSoGky7aT
— Samsung India (@SamsungIndia) March 26, 2022
ಹಾಗೆಯೇ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾದೊಂದಿಗೆ f/1.8 ಅಪರ್ಚರ್ ಹೊಂದಿರಲಿದೆ. ಸೆಕೆಂಡಿರಿ ಕ್ಯಾಮೆರಾವು 5 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸಾರ್ ಜೊತೆಗೆ f/2.2 ಅಪರ್ಚರ್ ಪಡೆದಿರಲಿದ್ದು, ಇನ್ನು ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಡೆಪ್ತ್ ಕ್ಯಾಮರಾ ಜೊತೆಗೆ f/2.4 ಅಪರ್ಚರ್ ಒಳಗೊಂಡಿರಲಿದೆ. ಈ ಫೋನ್ ಬಲಿಷ್ಠವಾದ 6,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ.
ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ M23 5G ಫೋನ್ ಗ್ಯಾಲಕ್ಸಿ M33 5G 6.6 ಫೋನ್ ಇಂಚಿನ FHD+ ಡ್ಯೂ ಡ್ರಾಪ್ LCD ಡಿಸ್ಪ್ಲೇ ಜೊತೆಗೆ 2,408 × 1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 750G ಎಂದು ನಂಬಲಾದ ಆಕ್ಟಾ ಕೋರ್ ಚಿಪ್‌ಸೆಟ್‌ನೊಂದಿಗೆ ಎಂಟ್ರಿ ಕೊಡಲಿದೆ. ಇದಕ್ಕೆ ಪೂರಕವಾಗಿ ಈ ಫೋನ್ 4GB RAM ಮತ್ತು 128GB ಸ್ಟೋರೇಜ್ ಆಯ್ಕೆಯನ್ನು ಪಡೆದಿರಲಿದೆ.
ಹಾಗೆಯೇ ಈ ಫೋನ್ ಮೇಲ್ಭಾಗದಲ್ಲಿ ಕಸ್ಟಮ್ OS ಸ್ಕಿನ್‌ನೊಂದಿಗೆ ಆಂಡ್ರಾಯ್ಡ್ 12 ಅನ್ನು ಸಪೋರ್ಟ್ ಪಡೆದಿರುತ್ತದೆ. ಕ್ಯಾಮರಾ ಮುಂಭಾಗದಲ್ಲಿ, ಚದರ ಕ್ಯಾಮರಾ ಮಾಡ್ಯೂಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ದ್ಯುತಿರಂಧ್ರದೊಂದಿಗೆ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಸಂವೇದಕ, f/2.2 ದ್ಯುತಿರಂಧ್ರದೊಂದಿಗೆ 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಮೆಗಾ ಪಿಕ್ಸೆಲ್ ಡೆಪ್ತ್ ಸಂವೇದಕವನ್ನು ಒಳಗೊಂಡಿರುತ್ತದೆ. f/2.4 ದ್ಯುತಿರಂಧ್ರ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಡ್ಯೂಡ್ರಾಪ್ ನಾಚ್‌ನಲ್ಲಿ ಮುಂಚೂಣಿಯಲ್ಲಿದೆ. ಹಾಗೆಯೇ ಫೋನ್ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಈ ಫೋನ್ ಭಾರತಕ್ಕೆ ಯಾವಾಗ ಕಾಲಿಡಲಿದೆ ಎಂಬ ಬಗ್ಗೆ ಕಂಪನಿ ತಿಳಿಸಿಲ್ಲ.