WhatsApp: ಇನ್ನುಂದೆ ವಾಟ್ಸ್ಆ್ಯಪ್ನಲ್ಲಿ ಶೇರ್ ಮಾಡಬಹುದು 100MB ಗಿಂತ ಅಧಿಕ ಫೈಲ್: ಇಲ್ಲಿದೆ ಮಾಹಿತಿ
WhatsApp New Feature: ಈವರೆಗೆ ನಮಗೆ ವಾಟ್ಸ್ಆ್ಯಪ್ನಲ್ಲಿ 100MB ಗಿಂತ ಅಧಿಕ ಘಾತ್ರ ಹೊಂದಿರುವ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್ಗಳನ್ನು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಮುಕ್ತಿ ಸಿಗಲಿದೆ.
ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಇಂದು ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ ಎಂದರೆ ಪ್ರಮುಖ ಕಾರಣ ಅದರಲ್ಲಿರುವ ಫೀಚರ್ಗಳು. ಬಳಕೆದಾರರ ಮನಸ್ಥಿತಿಯನ್ನು ಅರ್ಥಹಿಸಿ ಅವರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಅಪ್ಡೇಟ್ಗಳನ್ನು ನೀಡುತ್ತಲೇ ಇದೆ. ಇದೀಗ ವಾಟ್ಸ್ಆ್ಯಪ್ ಒಂದು ಹೆಜ್ಜೆ ಮುಂದಿಟ್ಟಿದ್ದು ಮತ್ತೊಂದು ಉಪಯುಕ್ತವಾದ ಹೊಸ ಆಯ್ಕೆ ನೀಡಲು ಮುಂದಾಗಿದೆ. ಈವರೆಗೆ ನಮಗೆ ವಾಟ್ಸ್ಆ್ಯಪ್ನಲ್ಲಿ 100MB ಗಿಂತ ಅಧಿಕ ಘಾತ್ರ ಹೊಂದಿರುವ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್ಗಳನ್ನು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಮುಕ್ತಿ ಸಿಗಲಿದೆ. ಅಚ್ಚರಿ ಎಂಬಂತೆ ವಾಟ್ಸ್ಆ್ಯಪ್ ತನ್ನ ಮುಂದಿನ ಅಪ್ಡೇಟ್ನಲ್ಲಿ ಬರೋಬ್ಬರಿ 2GB ವರೆಗೆ ಫೈಲ್ಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಆಂಡ್ರಾಯ್ಡ್ (Android) ಮತ್ತು ಐಒಸ್ (iOS) ಬಳಕೆದಾರರಿಗೆ ಈ ಆಯ್ಕೆ ಸದ್ಯದಲ್ಲೇ ಸಿಗಲಿದೆ.
ಗೂಗಲ್ ಒಡೆತನದ ಜೀಮೇಲ್ನಲ್ಲೂ ಇಷ್ಟು ದೊಡ್ಡ ಘಾತ್ರದ ಫೈಲ್ಗಳನ್ನು ಒಮ್ಮೆಲೆ ಕಳುಹಿಸುವ ಆಯ್ಕೆಯಿಲ್ಲ. ಇದರಲ್ಲಿ ಒಂದು ಬಾರಿ 25MB ಅನ್ನು ಮಾತ್ರ ಸೆಂಡ್ ಮಾಡಬಹುದು. ಇದೀಗ ವಾಟ್ಸ್ಆ್ಯಪ್ನಲ್ಲಿ 2GB ವರೆಗಿನ ಫೈನಲ್ ಅನ್ನು ಒಮ್ಮೆಲೆ ಕಳುಹಿಸಬಹುದು. ಇದರ ಮೂಲಕ ನೀವು ಕಳುಹಿಸುವ ಫೋಟೋ ಅಥವಾ ವಿಡಿಯೋ ಹೈ ಕ್ವಾಲಿಟಿಯಲ್ಲಿ ಇರಲಿದೆಯಂತೆ. ಸದ್ಯಕ್ಕೆ ಈ ಫೀಚರ್ ಅರ್ಜೆಂಟಿನಾದ ಬೇಟಾ ಬಳಕೆದಾರರಿಗೆ ನೀಡಲಾಗಿದ್ದು ಪರೀಕ್ಷಾ ಹಂತದಲ್ಲಿದೆ. ಸದ್ಯದಲ್ಲೇ ಈ ಆಯ್ಕೆ ಎಲ್ಲ ಬಳಕೆದಾರರಿಗೆ ಸಿಗಲಿದೆ ಎಂದು ಹೇಳಲಾಗಿದೆ.
ಇನ್ನು ವಾಟ್ಸ್ಆ್ಯಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪೋಲ್ ಫೀಚರ್ ಪರಿಚಯಿಸಲು ಮುಂದಾಗಿದೆ. ಸದ್ಯಕ್ಕೆ ಈ ಫೀಚರ್ ಕೂಡ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ವಾಟ್ಸ್ಆ್ಯಪ್ನ ಅಪ್ಡೇಟ್ 22.6.0.70 ನಲ್ಲಿ ಈ ಫೀಚರ್ಸ್ ಬರಲಿದೆ ಎಂದು ವರದಿಯಾಗಿದೆ. ಇದು ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಸಮೀಕ್ಷೆಗಳನ್ನು ಕ್ರಿಯೆಟ್ ಮಾಡಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಒಂದು ವಿಚಾರದ ಕುರಿತು ಮತ ಮತ ಚಲಾವಣೆಗೆ ಅವಕಾಶವಿದೆ. ಈ ಮತ ಚಲಾವಣೆಯಲ್ಲಿ ಬಳಕೆದಾರರು ತಮ್ಮ ತಮ್ಮ ಆಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿದೆ. ಬಳಿಕ ಪರ ವಿರೋಧ ಶೇಕಡಾವಾರು, ಪ್ರತಿಶತ ಸೇರಿದಂತೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು.ಗುಂಪಿನಲ್ಲಿ ಮಾಡುವ ಮತ ಚಲಾವಣೆ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್‍ನೊಂದಿಗೆ ಸಂರಕ್ಷಿಸಲ್ಪಡುತ್ತದೆ.
ವಾಟ್ಸ್ಆ್ಯಪ್ನಲ್ಲಿ ಈಗಾಗಲೇ ಡಾಕ್ಯುಮೆಂಟ್ ಪ್ರೀವ್ಯೂ ಫೀಚರ್, ವಾಟ್ಸ್ಆ್ಯಪ್ ಗ್ರೂಪ್ ಕಾಲ್ನಲ್ಲಿ ವಿಶೇಷ ಆಯ್ಕೆ, ಕವರ್ ಫೋಟೋ ಸೇರಿದಂತೆ ಅನೇಕ ಫೀಚರ್ಸ್ ಪರೀಕ್ಷಾ ಹಂತದಲ್ಲಿದೆ. ಇದರ ಜೊತೆಗೆ ಮತ್ತೊಂದು ಹೊಸ ವಾಯ್ಸ್ ನೋಟ್‌ಗಳನ್ನು ರೆಕಾರ್ಡಿಂಗ್ ಮತ್ತು ಸೆಂಡ್ ಮಾಡುವುದನ್ನು ಇನ್ನಷ್ಟು ಸುಲಭಗೊಳಿಸುವ ಫೀಚರ್ ನೀಡಲು ಕೆಸಲ ಮಾಡುತ್ತಿದೆ. ವಾಯ್ಸ್ ಮೆಸೇಜ್ ಅನ್ನು ವೇಗವಾಗಿ ಕಳುಹಿಸುವುದಕ್ಕೆ ಇದು ಅನುಮತಿಸುತ್ತದೆ. ಈ ಫೀಚರ್ ಮೂಲಕ ನೀವು ಯಾವುದೇ ಮಾಹಿತಿಯನ್ನು ಬೇಕಿದ್ದರೂ ವಾಟ್ಸ್ಆ್ಯಪ್ ವಾಯ್ಸ್ ಮೆಸೇಜ್‌ನಲ್ಲಿ ರೆಕಾರ್ಡ್ ಮಾಡಿ ಕಳುಹಿಸಬಹುದು. ಅಲ್ಲದೆ ವಾಯ್ಸ್ ನೋಟ್ ರೆಕಾರ್ಡಿಂಗ್ ಮಾಡುವಾಗ ಪಾಸ್ ಮಾಡುವ ಮತ್ತು ರಿಸ್ಟಾರ್ಟ್ ಮಾಡುವುದಕ್ಕೆ ಅವಕಾಶ ಸಿಗಲಿದೆ.
WhatsApp: ತಕ್ಷಣವೇ ಹೀಗೆ ಮಾಡಿ: ಇಲ್ಲಾಂದ್ರೆ ವಾಟ್ಸ್ಆ್ಯಪ್ನಲ್ಲಿ ನೀವು ಏನೆಲ್ಲ ಮಾಡ್ತೀರಿ ಎಲ್ಲ ಲೀಕ್ ಆಗುತ್ತೆ
Galaxy M33 5G: ಸ್ಯಾಮ್ಸಂಗ್ನಿಂದ ಹೊಸ ಪ್ರಯತ್ನ: ಅತಿ ಕಡಿಮೆ ಬೆಲೆಗೆ ರಿಲೀಸ್ ಆಗಲಿದೆ ಗ್ಯಾಲಕ್ಸಿ M33 5G